ಯಾವುದೇ ಒಂದು ಖಾಯಿಲೆಯಾಗಲಿ ಆ ಕಾಯಿಲೆಗೆ ಒಂದಿಲ್ಲೊಂದು ಮದ್ದು ಇದ್ದೆ ಇರುತ್ತದೆ. ಇನ್ನು ಅದೆಷ್ಟೋ ಮನೆಮದ್ದುಗಳು ನಮ್ಮ ಆರೋಗ್ಯಕ್ಕೆ ಎಷ್ಟು ಉಪಯೋಗಕಾರಿಯಾಗಿರುತ್ತದೆ ಅನ್ನೋದೇ ನಮ್ಮ ಗಮನದಲ್ಲಿ ಇರೋದಿಲ್ಲ, ಅದರಲ್ಲಿ ಈ ದಾಳಿಂಬೆ ಹಣ್ಣು ಕೂಡ ಒಂದು, ಈ ದಾಳಿಂಬೆ ಹಣ್ಣನ್ನು ಪ್ರತಿದಿನ ಸೇವಿಸುವುದರಿಂದ ಮನುಷ್ಯನ ಅದೆಷ್ಟೋ ಆರೋಗ್ಯಕ್ಕೆ ರಾಮಬಾಣವೂ ಹೌದು.

- ದಾಳಿಂಬೆ ಹಣ್ಣಿನ ಬೀಜವನ್ನು ಅರೆದು ನೀರಿನಲ್ಲಿ ಕುದಿಸಿ ಕುಡಿಯುವುದರಿಂದ ಆಮಶಂಕೆ ಅತಿಸಾರ ಕಂಟ್ರೋಲ್ಗೆ ಬರುತ್ತದೆ.
- ಒಂದು ಚಮಚ ಹುಣಸೆ ಹುಳಿ ರಸದ ಜೊತೆ ದಾಳಿಂಬೆ ಹಣ್ಣಿನ ರಸ ಮತ್ತು ಜೇನು ತುಪ್ಪವನ್ನು ಬೆರೆಸಿ ಸೇವಿಸುವುದರಿಂದ ಹಲವಾರು ಶರೀರ ಸಂಬಂಧಿಸಿದ ರೋಗಗಳು ಗುಣವಾಗುವುದು ಮಾನಸಿಕ ಒತ್ತಡ ನಿವಾರಣೆಯಾಗುತ್ತದೆ.
- ದಾಳಿಂಬೆ ಹಣ್ಣನಲ್ಲಿ ಹೆಚ್ಚಿನ ಆಂಟಿಆಕ್ಸಿಡೆಂಟ್ ಇರುವುದರಿಂದ ಉರಿಯೂತವನ್ನು ಕಡಿಮೆ ಮಾಡುತ್ತದೆ ಹಾಗೂ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ
- ದಾಳಿಂಬೆಯನ್ನು ಗರ್ಭಿಣಿಯರು ಪ್ರತಿದಿನ ಸೇವಿಸುವುದರಿಂದ ಗರ್ಭದಲ್ಲಿರುವ ಶಿಶುವಿನ ಮೆದುಳು ವಿಕಾಸವಾಗುತ್ತದೆ. ಅಷ್ಟೇ ಅಲ್ಲದೇ ಹೆರಿಗೆ ನಂತರ ಅಮ್ಮಂದಿರ ತೂಕ ಕಡಿಮೆಯಾಗುತ್ತದೆ. ಆದ್ದರಿಂದ ಗರ್ಭೀಣಿಯರು ದಾಳಿಂಬೆ ಪ್ರತಿದಿನ ಒಂದು ಸೇವಿಸುವುದು ಉತ್ತಮ.
- ದಾಳಿಂಬೆಯನ್ನು ಸೇವಿಸುವುದರಿಂದ ದೇಹದ ತೂಕ ಹೆಚ್ಚುತ್ತದೆ ಅಲ್ಲದೇ ಇದರ ತಿರುಳಿನ ಜೊತೆಗೆ ಸ್ವಲ್ಪ ಜೇನು ತುಪ್ಪವನ್ನು ಸೇರಿಸಿ ಪ್ರತಿನಿತ್ಯ ಸೇವಿಸುತ್ತಾ ಬಂದರೆ ತೂಕ ಹಂತ ಹಂತವಾಗಿ ಹೆಚ್ಚುತ್ತದೆ.
- ದಾಳಿಂಬೆ ಹಣ್ಣಿನಲ್ಲಿ ಸುಲಭವಾಗಿ ಕರಗದ ನಾರಿನಂಶವಿರುವ ಕಾರಣ ಮಲಬದ್ದತೆ ಸಮಸ್ಯೆಯನ್ನು ದೂರಮಾಡುತ್ತೆ ಹಾಗೂ ಯತೇಚ್ಛವಾಗಿ ವಿಟಮಿನ್ ಸಿ ಇರುವ ಕಾರಣ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತೆ.
ಈ ರೀತಿ ದಾಳಿಂಬೆ ಹಣ್ಣನ್ನು ಪ್ರತಿದಿನ ಸೇವನೆ ಮಾಡುವುದರಿಂದ ನಿಮ್ಮ ದೇಹದ ಆರೋಗ್ಯ ಉತ್ತಮವಾಗುದರ ಜೊತೆ ಧೀಘಕಾಲ ಬಾಳುತ್ತೀರಿ.