ಸುಶಾಂತ್ ಸಿಂಗ್ ವಿಚಾರದಲ್ಲಿ ನಾನು ಸುಳ್ಳು ಹೇಳಿದ್ರೆ ಪದ್ಮಶ್ರೀ ಪ್ರಶಸ್ತಿ ವಾಪಾಸ್ ಕೊಡ್ತೀನಿ – ಕಂಗನಾ ರಣಾವತ್.!

ಬಾಲಿವುಡ್ ಸ್ಮಾರ್ಟ್ ಹೀರೋ ಸುಶಾಂತ್ ಸಿಂಗ್ ರಜಪೂತ್ ಸಾವನ್ನಪ್ಪಿ ಒಂದು ತಿಂಗಳು ಕಳೆದರು,ಅವರ ಸಾವಿನ ಬಗ್ಗೆ ಈಗಲೂ ಬಿಸಿಬಿಸಿ ಚರ್ಚೆ ನಡೆಯುತ್ತಲೇ ಇದೆ, ಹೀಗಿರುವಾಗ ಸುಶಾಂತ್ ಸಿಂಗ್ ಸಾವಿನ ಕುರಿತಾಗಿ ನಟಿ ಕಂಗನಾ ರಣಾವತ್ ಕೂಡ ಹಲವು ಹೇಳಿಕೆಗಳನ್ನು ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹೀಗಿರುವಾಗ ನಾನು ಹೇಳಿರುವ ಮಾತುಗಳು ಸುಳ್ಳಾಗಿದ್ರೆ ನನಗೆ ಬಂದಿರುವ `ಪದ್ಮಶ್ರೀ’ ಪ್ರಶಸ್ತಿಯನ್ನು ನಾನು ಸರ್ಕಾರಕ್ಕೆ ಹಿಂದಿರುಗಿಸುತ್ತೇನೆ ಎಂದು ಕಂಗನಾ ಸವಾಲು ಹಾಕಿದ್ದಾರೆ.

ಸುಶಾಂತ್ ಸಿಂಗ್ ಆತ್ಮಹತ್ಯೆ ಇದೊಂದು ನಿಯೋಜಿತ ಕೊಲೆ ಎಂದು ಕಂಗನಾ ಆರೋಪ ಮಾಡಿದ್ರು, ಸುಶಾಂತ್ ಸಾವಿಗೆ ಬಾಲಿವುಡ್‍ನ ಕೆಲವು ಮಂದಿ ಮತ್ತು ಕೆಲವು ಮಾಧ್ಯಮಗಳು ಕಾರಣ ಎಂದು ಆರೋಪ ಮಾಡಿದ್ರು.

ಸದ್ಯ ಈ ವಿಚಾಋವಾಗಿ ಸುಶಾಂತ್ ಸಾವಿನ ಬಗ್ಗೆ ಸುಳ್ಳು ಸುದ್ದಿಯನ್ನು ಹರಡಿಸುತ್ತಿದ್ದಾರೆ ಎಂದು ಪೊಲೀಸರು ಕಂಗನಾಗೆ ಸಮನ್ಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಹೇಳಿದ್ದಾರೆ.

ನಿನ್ನೆ ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಕಂಗನಾ ಮಾತನಾಡುವಾಗ ನಾನು ಸುಶಾಂತ್ ಸಾವಿನ ವಿಚಾರವಾಗಿ ಹೇಳಿದ ಮಾತುಗಳು ಸುಳ್ಳಾದ್ರೆ ನನಗೆ ಬಂದಿರು ಪದ್ಮಶ್ರೀ ಪ್ರಶಸ್ತಿಯನ್ನು ನಾನು ಸರ್ಕಾರಕ್ಕೆ ವಾಪಾಸ್ ನೀಡುತ್ತೇನೆ ಎಂದು ಹೇಳಿದ್ದಾರೆ.

ಈಗಾಗಲೇ ಸುಶಾಂತ್ ಸಾವು ಸಂಭವಿಸಿದ ದಿನದಿಂದ ಸುಶಾಂತ್ ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿಯಲ್ಲ, ಇದೊಂದು ಕೊಲೆ ಎಂದು ಹಲವರು ಆರೋಪಗಳನ್ನು ಮಾಡಿದ್ರು, ಇನ್ನು ಕಂಗನಾ ಕೂಡ ಸುಶಾಂತ್ ಸಾವಿನ ಬಗ್ಗೆ ತೀವ್ರ ಬೇಸರವ್ಯಕ್ತಪಡಿಸಿದ್ರು. ಬಾಲಿವುಡ್‍ನಲ್ಲಿ ಗುಂಪುಗಾರಿಕೆ ಇದೆ, ಸ್ವಜನಪಕ್ಷಪಾತವೇ ಸುಶಾಂತ್ ಸಾವಾಗಲೂ ಕಾರಣವಾಯ್ತು, ಬಾಲಿವುಡ್‍ನ ಕೆಲವು ಮಂದಿಯ ಕೈಯಲ್ಲಿ ಕೆಲವು ಮಾಧ್ಯಮಗಳಿದ್ದು ತಮಗೆ ಆಗದವರ ವಿರುದ್ಧ ಮಾಧ್ಯಮದಲ್ಲಿ ವೈಯುಕ್ತಿಯ ಜೀವನವನ್ನು ಸುದ್ದಿ ಮಾಡಿಸುತ್ತಾರೆ ಎಂದು ಆರೋಪಿಸಿದ್ದಾರೆ.

ಇನ್ನು ಕಂಗನಾ ಬಾಲಿವುಡ್‍ನಲ್ಲಿ ಕೆಲವು ವಿಚಾರಗಳನ್ನು ನೇರವಾಗಿ ಹೇಳುವ ಮೂಲಕ ಬಾಲಿವುಡ್‍ನ ಕೆಲ ಮಂದಿಗಳ ನಿಜರೂಪವನ್ನು ಬಯಲು ಮಾಡಿದ್ರು, ಆ ವಿಡಿಯೋಗಳು ಸಹ ವೈರಲ್ ಆಗಿದ್ದವು.

ಸದ್ಯ ಸುಶಾಂಗ್ ಸಿಂಗ್ ಸಾವಿನ ವಿಚಾರವಾಗಿ ಬಂದಿರುವ ಈ ಹೇಳಿಕೆಗೆ ಪೊಲೀಸರಿಂದ ಸಮನ್ಸ್ ಬಂದಿದ್ದು ಕಂಗನಾ ರಣಾವತ್ ವಿಚಾರಣೆಗೆ ಹಾಜರಾಗಬೇಕಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top