ನಿತ್ಯಾನಂದನಿಂದ ಸ್ಥಾಪಿತವಾಯ್ತು ಹೊಸ ರಾಷ್ಟ್ರ..!

ಸ್ವಯಂ ಘೋಷಿತ ದೇವ ಮಾನವ ನಿತ್ಯಾನಂದ ಹೊಸ ದೇಶವನ್ನು ಸ್ಥಾಪನೆ ಮಾಡಲು ಮುಂದಾಗಿದ್ದಾನೆ. ಇದಕ್ಕಾಗಿ ಈಕ್ವೆಡಾರ್ ನಲ್ಲಿ ಹಿಮಪ್ರದೇಶವೊಂದನ್ನು ಖರೀದಿ ಮಾಡಿದ್ದು,ಇದನ್ನು ಹಿಂದೂ ರಾಷ್ಟ್ರ ಎಂದು ಘೋಷಿಸಿಕೊಂಡಿದ್ದು, ಈಗಾಗಲೇ ದೇಶದ ಧ್ವಜ,ಲಾಂಛನ,ಪಾಸ್ ಪೋರ್ಟ್ ಸಿದ್ಧಪಡಿಸಿದ್ದು,ಈ ದೇಶಕ್ಕೆ ಕೈಲಾಸ ಅಂತ ನಾಮಕರಣವನ್ನು ಸಹ ಮಾಡಿದ್ದಾನೆ.


ಈ ಹಿಮಪ್ರದೇಶ ಟ್ರಿನಿಡಾಡ್ ಮತ್ತು ಟೊಬಾಗೊಗೆ ಹತ್ತಿರದ ಪ್ರದೇಶವಾಗಿದ್ದು,ಇದನ್ನು ಹಿಂದೂ ರಾಷ್ಟ್ರ ಎಂದು ಕರೆದಿದ್ದು ಈಗಾಗಲೇ ಇಲ್ಲಿ ಸಚಿವ ಸಂಪುಟವನ್ನು ಸಹ ರಚನೆ ಮಾಡಿದ್ದಾನಂತೆ, ಅಲ್ಲದೇ ಮಾ ಅನ್ನೋ ಹೆಸರಿನ ಪ್ರಧಾನಿಯನ್ನು ನೇಮಕಮಾಡಿದ್ದಾನೆ ಅಂತ ವರದಿಕೂಡ ಆಗಿದೆ. ಈಗಾಗಲೇ ದೇಶಕ್ಕೆ ದೇಣಿಗೆ ನೀಡುವಂತೆ ಸಾರ್ವಜನಿಕರಿಗೆ ಪ್ರಕಟಣೆ ಹೊರಡಿಸಿದ್ದು, ಅದಕ್ಕಾಗಿ ವೆಬ್ ಸೈಟ್ ಒಂದನ್ನು ಕ್ರಿಯೇಟ್ ಮಾಡಿದ್ದಾನೆ. www.kailaasa.org ಅನ್ನೋ ವೆಬ್ ಸೈಟ್ ನಲ್ಲಿ ದೇಶದ ಬಗ್ಗೆ ಮಾಹಿತಿಗಳನ್ನು ನೀಡಿದ್ದು ಸಂಪೂರ್ಣ ವಿವರಗಳನ್ನು ನೀಡಿದ್ದಾನೆ.

ಇನ್ನು ಈ ಜಾಗವನ್ನು ರಾಷ್ಟ್ರವನ್ನಾಗಿ ಘೋಷಿಸ ಬೇಕು ಎಂದು ವಿಶ್ವಸಂಸ್ಥೆಗೆ ಅರ್ಜಿಯನ್ನು ಸಲ್ಲಿಸಿದ್ದು .ಈ ಅರ್ಜಿಯಲ್ಲಿ ನನಗೆ ಭಾರತದಲ್ಲಿ ಬೆದರಿಕೆ ಇದ್ದು, ನನಗೆ ಇಲ್ಲಿ ನೆಲೆಸಲು ಅವಕಾಶ ನೀಡಬೇಕು ಎಂದು ಮನವಿಮಾಡಿಕೊಂಡಿದ್ದಾನೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top