ಅಪ್ಪ ದೊಡ್ಡ ಗೋಡೆ..ಮಗ ಚಿಕ್ಕ ಗೋಡೆ..! ಇದು ಕ್ರಿಕೆಟ್‌ ವಿಷ್ಯ ಗುರು..!

ಟೀಂ ಇಂಡಿಯಾದ ಗ್ರೇಟ್‌ ವಾಲ್‌ ಅಂದ್ರೆ..ರಾಹುಲ್‌ ದ್ರಾವಿಟ್‌, ದ್ರಾವಿಡ್‌ ಆಡ್ತಾ ಇದ್ದಾರೆ ಅಂದ್ರೆ ಟೀಂ ಇಂಡಿಯಾಗೆ ಒಂದು ರೀತಿ ಗೋಡೆ ಅಂತಾನೇ ಹೇಳಲಾಗ್ತಿತ್ತು, ಆದ್ರೆ ಈಗ ಟೀಂ ಇಂಡಿಯಾಗೆ ಅಂತಹದ್ದೇ ಗೋಡೆಯ ಅವಶ್ಯಕತೆಯಿದ್ದು, ಆ ಸ್ಥಾನವನ್ನು ತುಂಬಲು ಹುಡುಗನೊಬ್ಬ ರೆಡಿಯಾಗುತ್ತಿದ್ದಾನೆ. ಹೌದು ಟೀಂ ಇಂಡಿಯಾದ ಮಾಜಿ ಕ್ಯಾಪ್ಟರ್‌ ರಾಹುಲ್‌ ದ್ರಾವಿಡ್‌ ಅವರ ಪುತ್ರ ಭವಿಷ್ಯದ ಟೀಂ ಇಂಡಿಯಾದ ವಾಲ್‌ ಆಗ್ತಾರ ಅನ್ನೋ ಪ್ರಶ್ನೇ ಈಗ ಎದುರಾಗಿದೆ. ಹೌದು ದ್ರಾವಿಡ್‌ ಪುತ್ರ ಸಮಿತ್‌ ದ್ರಾವಿಡ್‌ ಕೂಡ ಒಬ್ಬ ಕ್ರಿಕೆಟರ್‌ ಆಗಿದ್ದು, ಸದ್ಯ ಅಂಡರ್‌-14 ಇಂಟರ್‌ ಜೋನಲ್‌ ಕ್ರಿಕೆಟ್‌ ಟೂರ್ನಿ ಆಡ್ತಾ ಇದ್ದು, ವೈಸ್‌ ಪ್ರೆಸಿಡೆಂಟ್‌ ಇಲೆವೆನ್‌ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಇತ್ತೀಚೆಗೆ ನಡೆದ ಪಂದ್ಯದಲ್ಲಿ ಸಮಿತ್‌ ಧಾರವಾಡ ಜೋನ್‌ ವಿರುದ್ಧ ದ್ವಿಶತಕ ಭಾರಿಸಿದ್ದು, 256 ಎಸೆತಗಳನ್ನು ಎದುರಿಸಿ 22 ಬೌಂಡರಿ ನೆರವಿನಿಂದ 201ರ ಕಲೆಹಾಕಿದ್ರು,

ಇನ್ನು ಎರಡನೇ ಇನ್ನಿಂಗ್ಸ್‌ನಲ್ಲೂ ಸಮಿತ್‌ ದ್ರಾವಿಡ್‌ ಭರ್ಜರಿ ಬ್ಯಾಟಿಂಗ್‌ ಮಾಡಿದ್ದು 94ರನ್‌ಗಳನ್ನು ಗಳಿಸುವುದರ ಜೊತೆ ಪಂದ್ಯದಲ್ಲಿ ಮೂರು ವಿಕೆಟ್‌ಗಳನ್ನು ಕಬಳಿಸುವ ಮೂಲಕ ಗಮನ ಸೆಳೆದಿದ್ರು. ಇನ್ನು 2016ರಲ್ಲಿ ಬೆಂಗಳೂರು ಯುನೈಟೆಡ್‌ ಕ್ರಿಕೆಟ್‌ ಕ್ಲಬ್‌ ಪರ ಬ್ಯಾಟಿಂಗ್‌ ಮಾಡಿದ್ದ ಸಮಿತ್‌ ದ್ರಾವಿಡ್‌, 125ರನ್‌ಗಳನ್ನು ಸಿಡಿಸಿದ್ರು. ಒಟ್ಟಿನಲ್ಲಿ ದ್ರಾವಿಡ್‌ ಪುತ್ರ ಸಮಿತ್‌ ದ್ರಾವಿಡ್‌ ಅವರ ಬ್ಯಾಟಿಂಗ್‌ ಸ್ಟೈಲ್‌ ಮತ್ತು ಅವರ ಬ್ಯಾಟಿಂಗ್‌ ಪ್ರದರ್ಶನವನ್ನು ನೋಡಿದ್ರೆ ಖಂಡಿತ ಮುಂದಿನ ಭಾರತ ತಂಡದ ಗ್ರೇಟ್‌ ವಾಲ್‌ ಆಗೋದ್ರಲ್ಲಿ ಅನುಮಾನವಿಲ್ಲ ಅಂತಿದ್ದಾರೆ ಕ್ರಿಕೆಟ್‌ ತಜ್ಞರು.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top