ರಾತ್ರಿ 8.30ಕ್ಕೆ ಜ಼ೀ ಟಿವಿ ಜೊತೆ ಜೊತೆಜೊತೆಯಲಿ ಸಾಗಿದ ಪ್ರೇಕ್ಷಕ..!

ಕಿರುತೆರೆ ಇತಿಹಾಸದಲ್ಲೇ ಇದೊಂದು ಹೊಸ ದಾಖಲೆ ಅಂತಾನೇ ಹೇಳಬಹುದು… ಕಿರುತೆರೆಯಲ್ಲಿ ಯಾವ ಕಾರ್ಯಕ್ರಮವೂ ಮಾಡಿರದ ದಾಖಲೆಯೊಂದನ್ನು ಜ಼ೀ ಕನ್ನಡದ ಧಾರಾವಾಹಿಯೊಂದು ನಿರ್ಮಿಸಿದೆ. ಹೌದು ಜಗದೀಶ್ ಆರೂರ್ ನಿರ್ದೇಶನದಲ್ಲಿ ಶುರುವಾದ ‘ಜೊತೆ ಜೊತೆಯಲಿ’ ಧಾರಾವಾಹಿಯನ್ನು ಪ್ರೇಕ್ಷಕ ಕೈ ಹಿಡಿದಿದ್ದಾನೆ. ಸತತ 7ನೇ ವಾರವೂ ಮೊದಲ ಸ್ಥಾನದಲ್ಲಿ ಮುಂದುವರೆಯುವ ಮೂಲಕ ಹೊಸ ದಾಖಲೆ ಬರೆದಿದೆ.. ಪ್ರಥಮ ಬಾರಿಗೆ ಅನಿರುಧ್ ಕಿರುತೆರೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದು ಆರ್ಯವರ್ಧನ್ ಪಾತ್ರಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಇನ್ನು ಅನು ಸಿರಿಮನೆ ಪಾತ್ರದಲ್ಲಿ ಕಾಣಿಸಿಕೊಂಡಿರೋ ಮೇಘನಾ ಶೆಟ್ಟಿ ಮತ್ತು ಆರ್ಯವರ್ಧನ್ ಅಲಿಯಾಸ್ ಅನಿರುಧ್ ಪಾತ್ರವನ್ನು ಇಷ್ಟ ಪಟ್ಟಿರೋ ಕಿರುತೆರೆ ವೀಕ್ಷಕರು ರಾತ್ರಿ 8.30ಕ್ಕೆ ಜ಼ೀ ಕನ್ನಡ ವಾಹಿನಿಯನ್ನು ತಪ್ಪದೇ ಬೋಡುವ ರೀತಿ‌ ಮಾಡಿದೆ..

Jothe Jotheyali | 04.11.2019 | 8.30 PM | On Zee Kannada

ಪ್ರೀತಿ ಬಗ್ಗೆ ಆರ್ಯವರ್ಧನ್ ಹೇಳಿದ ಕಡೆಯ ಮಾತು ಯಾವುದು?#ZeeKannada#JotheJotheyaliಇಂದು ರಾತ್ರಿ 8.30ಕ್ಕೆ.

Posted by Zee Kannada on Monday, 4 November 2019

ಈಗಾಗ್ಲೇ ಧಾರಾವಾಹಿಯಲ್ಲಿ ದಿನಕ್ಕೊಂದು ತಿರುವುಗಳನ್ನು ನೀಡುತ್ತಿರುವುದು ಪ್ರೇಕ್ಷಕರಿಗೆ ಇಷ್ಟವಾಗಿದ್ದ ಜನ ಮೆಚ್ಚಿದ ಧಾರಾವಾಹಿಯಾಗಿ ಹೊರಹೊಮ್ಮಿ ಸತತ 7 ವಾರಗಳಿಂದಲೂ ನಂಬರ್ ಒನ್ ಸ್ಥಾನ ಪಡೆದಿರೋ ಜೊತೆ ಜೊತೆಯಲಿ ಈ ವಾರ 13.5 ಟಿ.ಆರ್.ಪಿ ರೇಟಿಂಗ್ ಪಡೆಯೋ‌ ಮೂಲಕ ಮೊದಲ ಸ್ಥಾನವನ್ನು ಪಡೆದುಕೊಂಡಿದೆ.. ಇನ್ನು ಉಳಿದಂತೆ ಗಟ್ಟಿಮೇಳ, ನಾಗಿಣಿ, ಮಂಗಳಗೌರಿ ಮದುವೆ, ಅಗ್ನಿಸಾಕ್ಷಿ,ಬಿಗ್ ಬಾಸ್ ಕಾರ್ಯಕ್ರಮಗಳು ಸ್ಥಾನಗಳನ್ನು ಪಡೆದುಕೊಂಡಿದೆ..

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top