ಜೊತೆಜೊತೆಯಲಿ ಅನಿರುಧ್ ಮಗನ ಈ ವಿಡಿಯೋ ಈಗ ಸಖತ್ ವೈರಲ್..!

jothe jotheyalli anirudh son viral video

ಬೆಳ್ಳಿತೆರೆಯಲ್ಲಿ ತಮ್ಮ ಅದೃಷ್ಟ ಪರೀಕ್ಷೆಮಾಡಿ ತಕ್ಕ ಮಟ್ಟಿಗೆ ಯಶಸ್ಸು ಕಂಡು ಸ್ವಲ್ಪ ಸಮಯ ದೂರವಿದ್ದ ಅನಿರುಧ್ ಗೆ ಅದೃಷ್ಟ ತಂದುಕೊಟ್ಟಿದ್ದು ಕಿರುತೆರೆ. ಜೀಕನ್ನಡದಲ್ಲಿ ಪ್ರಸಾರವಾಗುತ್ತಿರೋ ಜೊತೆಜೊತೆಯಲಿ ಧಾರಾವಾಹಿ ಶುರುವಾದ ಮೊದಲ ದಿನದಿಂದ ಇಲ್ಲಿಯವರೆಗೆ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗೋ ಜೊತೆಯಲ್ಲಿ ಟಿಆರ್ ಪಿಯಲ್ಲೂ ನಂಬರ್ ಒನ್ ಪಟ್ಟ ಅಲಂಕರಿಸಿಬಿಟ್ಟಿದೆ, ಇನ್ನು ಆರ್ಯವರ್ಧನ್ ಮತ್ತು ಅನು ಪಾತ್ರಕ್ಕೆ ಜನ ಫಿಧಾ ಆಗಿದ್ದು ಸದ್ಯ ಕಿರುತೆರೆಯಲ್ಲಿ ‌ಅನಿರುಧ್ ಈಗ ನಂಬರ್ 1 ಸ್ಟಾರ್ ನಟ ಆದ್ರೆ ಈಗ ಸುದ್ದಿಯಾಗಿರೋದು ಮಾತ್ರ ಅನಿರುಧ್ ಅಲ್ಲ ಬದಲಿಗೆ ಅನಿರುಧ್ ಮಗ ಹೌದು ಅನಿರುಧ್ ಮಗ ಜ್ಯೇಷ್ಠವರ್ಧನ್ ಹೃತಿಕ್ ರೋಷನ್ ಫ್ಯಾನ್ ಆಗಿದ್ದು ಹೃತಿಕ್ ಸಿನಿಮಾದ ಒಂದು ಹಾಡಿಗೆ ಸ್ಟೆಪ್ಸ್ ಹಾಕಿರೋ ವಿಡಿಯೋವನ್ನು ಅನಿರುಧ್ ಶೇರ್ ಮಾಡಿದ್ದು ಆ ವಿಡಿಯೋ ಈಗ ವೈರಲ್ ಆಗಿದೆ..

ನೃತ್ಯ ಅಂತ ಬಂದಾಗ ಹೃತಿಕ್ ಅವರು ಅದ್ಭುತ… ನನ್ನ ಸುಪುತ್ರರಾದ ಜ್ಯೇಷ್ಠವರ್ಧನ ಅವರು ಅವರ ಬಗ್ಗೆ ಇರತಕಂತಹ ಪ್ರೀತಿ ನ ಹೀಗೆ ತೋರಿಸಿದ್ದಾರೆ…. when it comes to dancing, Hrithik is one of the best. This is my son Jyestavardhan ji's way of showing his love towards him… #Anirudh

Posted by Anirudh on Wednesday, 30 October 2019

ಅಲ್ಲದೇ ನೋಡುಗರಿಂದ ಮೆಚ್ಚುಗೆ ಸಿಕ್ಕಿದ್ದು ಮುಂದಿನ ದಿನಗಳಲ್ಲಿ‌ ಸ್ಯಾಂಡಲ್ವುಡ್ ‌ಸ್ಟಾರ್ ಆಗೋದ್ರಲ್ಲಿ ಡೌಟಿಲ್ಲ ಅಂತಿದ್ದಾರೆ, ನೋಡೋಕೂ ಹೀರೋ ರೀತಿ ಇದ್ದು ಚಿತ್ರರಂಗಕ್ಕೆ ಆದಷ್ಟು ಬೇಗ ಪರಿಚಯಿಸಿ ಅನ್ನುತ್ತಿದ್ದಾರೆ ಆರ್ಯವರ್ಧನ್ ಅಭಿಮಾನಿಗಳು

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top