ಜೊತೆ ಜೊತೆಯಲಿ ಈ ವಾರವೂ ನಂಬರ್ 1 ಧಾರಾವಾಹಿ..! ರೇಟಿಂಗ್ ಎಷ್ಟು ಗೊತ್ತಾ..?

ಕನ್ನಡದ ಕಿರುತೆರೆ ಇತಿಹಾಸದಲ್ಲಿ ಹೊಸ ದಾಖಲೆಯನ್ನು ಬರೆದು ಮುನ್ನುಗ್ಗುತ್ತಿದೆ, ಜೀ ಕನ್ನಡ ವಾಹಿನಿಯ ಜೊತೆ ಜೊತೆಯಲಿ ಧಾರಾವಾಹಿ ಶುರುವಾದ ಮೊದಲನೇ ವಾರದಲ್ಲೇ ಹೊಸ ಇತಿಹಾಸ ಸೃಷ್ಟಿಸೋ ಮೂಲಕ ಕಿರುತೆರೆಯ ನಂಬರ್ ಒನ್ ಧಾರಾವಾಹಿಯಾಗಿ ಹೊರಹೊಮ್ಮಿತು, ಇನ್ನು ಬೆಳ್ಳಿತೆರೆಯಲ್ಲಿ ಮಿಂಚಿ ಸ್ವಲ್ಪ ಸಮಯ ದೂರವಿದ್ದು ನಂತರ ಕಿರುತೆರೆಯಲ್ಲಿ ರಿ ಎಂಟ್ರಿ ಪಡೆದ ಅನಿರುದ್ಧ್ ಈ ಧಾರಾವಾಹಿಯಲ್ಲಿ ಆರ್ಯವರ್ಧನ್ ಆಗಿ ಮಿಂಚಿ ಎಲ್ಲರ ಗಮನ ಸೆಳೆದಿದ್ದಾರೆ, ಇನ್ನು ಅನು ಪಾತ್ರದಲ್ಲಿ ಮಿಂಚುತ್ತಿರೋ ಮೇಘನಾ ಶೆಟ್ಟಿ ಕೂಡ ಎಲ್ಲರ ಹಾಟ್ ಫೇವರೆಟ್, ಈಗಾಗಲೇ ನಂಬರ್ 1 ಪಟ್ಟ ಏರಿರಿರೋ ಜೊತೆ ಜೊತೆಯಲಿ ಧಾರವಾಹಿ.

ಎರಡನೇ ವಾರ 12.6 ಟಿ ಆರ್ ಪಿ ಬರೋ ಮೂಲಕ ಹೊಸ ದಾಖಲೆ ಬರೆದಿತ್ತು ಆದ್ರೆ ಮೂರನೇ ವಾರವೂ ಸಹ 12.8 ಟಿ ಆರ್ ಪಿ ಪಡೆಯೋ ಮೂಲಕ ಮತ್ತೆ ಹಳೇ ದಾಖಲೆಗಳನ್ನು ಧೂಳೆಬ್ಬಿಸಿ ಜೊತೆ ಜೊತೆಯಲಿ ಎಲ್ಲರ ಫೇವರೆಟ್ ಧಾರವಾಹಿಯಾಗಿದೆ, ಇನ್ನು ಶ್ರೀಮಂತ ಆರ್ಯವರ್ಧನ್ ಸಜ್ಜನಿಕೆ, ಹೆಸರು ಹಾಗೂ ಗುಣದಲ್ಲಿ ಸಿರಿ ಹೊಂದಿರುವ ಮಿಡಲ್ ಕ್ಲಾಸ್ ಅನು ಮುಗ್ಧತೆ..ಧಾರಾವಾಯಲ್ಲಿ ಬರುವ ಎಲ್ಲಾ ಪಾತ್ರಗಳನ್ನು ಮೆಚ್ಚಿಕೊಂಡಿರುವ ಪ್ರೇಕ್ಷಕ ಜೊತೆ ಜೊತೆಯಲಿ ಧಾರಾವಾಹಿಗೆ ಫುಲ್ ಮಾಕ್ರ್ಸ್ ಕೊಟ್ಟಿದ್ದಾನೆ. ಇನ್ನು ಜೊತೆಜೊತೆಯಲಿ ಧಾರಾವಾಹಿ ನೋಡುಗರರಲ್ಲಿ ಹೆಣ್ಣುಮಕ್ಕಳನ್ನು ಹಿಂದಿಕ್ಕಿ ಗಂಡಸರು ಸಹ ಈ ಧಾರಾವಾಹಿಯನ್ನು ನೋಡುತ್ತಿದ್ದಾರೆ ಅನ್ನೋದು ವಿಶೇಷ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top