ಜೂಜಾಟಕ್ಕಾಗಿ ಪತ್ನಿಯನ್ನೇ ಅಡವಿಟ್ಟ ಪತಿರಾಯ.!

ಹಿಂದೆ ಪಾಂಡವರು ಪಗಡೆಯಾಟದಲ್ಲಿ ಸೋತು ತಮ್ಮೆಲ್ಲ ಸಂಪತ್ತನ್ನು ಕಳೆದುಕೊಂಡು ಕೊನೆಗೆ ದ್ರೌಪದಿಯನ್ನು ಅಡವಿಟ್ಟು ಸೋತ ಘಟನೆ ಈಗ ಇತಿಹಾಸ, ಆದ್ರೆ ಇಲ್ಲೊಬ್ಬ ದುಷ್ಟ ಪತಿ ಜೂಜಿನ ಚಟಕ್ಕೆ ತನ್ನ ಪತ್ನಿಯನ್ನೇ ಅಡವಿಟ್ಟ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ, ಮನೆಯಲ್ಲಿಯೇ ತನ್ನ ಗೆಳೆಯರ ಜೊತೆ ಜೂಜಾಟ ಆಡುವಾಗ ಜೂಜಿನಲ್ಲಿ ಎಲ್ಲವನ್ನೂ ಸೋತ ಆ ವ್ಯಕ್ತಿ ಕೊನೆಗೆ ಕುಡಿದ ಮತ್ತಿನಲ್ಲಿ ತನ್ನ ಹೆಂಡತಿಯನ್ನೇ ಜೂಜಿನಲ್ಲಿ ಅಡವಿಟ್ಟಿದ್ದಾನೆ. ನಂತರ ಜೂಜಿನಲ್ಲಿ ಸೋತು ಪತ್ನಿಯನ್ನು ಆ ನಾಲ್ವರು ಸ್ನೇಹಿತರಿಗೆ ಬಿಟ್ಟುಕೊಟ್ಟಿದ್ದಾನೆ, ಆಗ ಆತನ ಸ್ನೇಹಿತರು ಪತಿಯ ಮುಂದೆಯೇ ಆ ಮಹಿಳೆಯ ಬಟ್ಟೆ ಹರಿದು ಅತ್ಯಾಚಾರ ಎಸಗಲು ಯತ್ನಿಸಿದ್ದಾರೆ.

ಆ ಮಹಿಳೆ ಅವರಿಂದ ತಪ್ಪಿಸಿಕೊಂಡು ಅಡುಗೆ ಮನೆ ಸೇರಿ ಬಾಗಿಲು ಹಾಕಿಕೊಂಡು ಪೊಲೀಸರಿಗೆ ಕರೆಮಾಡಿದ್ದಾಳೆ, ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಆ ನಾಲ್ವರ ಜೊತೆ ಪತಿ ಮತ್ತು ಪತ್ನಿಯನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ಪೊಲೀಸರು ಆರೋಪಿಗಳ ಬಳಿ ಹಣ ಪಡೆದು ಇದು ಗಂಡ ಹೆಂಡತಿಯ ಜಗಳ ಅಂತ ಕೇಸ್ ದಾಖಲಿಸಿ ಆರೋಪಿಗಳು ಬಿಟ್ಟುಕಳುಹಿಸಿದ್ದಾರೆ. ಈ ಸಲುವಾಗಿ ಆ ನೊಂದ ಮಹಿಳೆ ಹಿರಿಯ ಮಹಿಳಾ ಅಧಿಕಾರಿಯ ಬಳಿ ದೂರು ನೀಡಿದಾಗ, ಎಚ್ಚೆತ್ತುಕೊಂಡ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿ ಅವರಿಗೆ ಶಿಕ್ಷೆ ವಿಧಿಸಲಾಗುವುದು ಎಂದು ಹೇಳಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top