ಕೆ.ಆರ್‌.ಪೇಟೆ ಚುನಾವಣೆ ಅಖಾಡಕ್ಕೆ ಜೋಡೆತ್ತು ದರ್ಶನ್‌ – ಯಶ್‌ ಎಂಟ್ರಿ..?!

ಕೆ.ಆರ್‌.ಪೇಟೆ ಉಪಚುನಾವಣೆಗೆ ಈಗ ಮೂರು ಪಕ್ಷಗಳಿಗೂ ಪ್ರತಿಷ್ಠೆಯ ಕಣವಾಗಿದ್ದು ಮೂರ ಪಕ್ಷಗಳು ತಮ್ಮ ಸಾಮರ್ಥ್ಯ ಮೀರಿ ಪ್ರಚಾರದಲ್ಲಿ ಬ್ಯುಸಿಯಾಗಿದವೆ. ಆದ್ರೆ ಇದೇ ನಡುವೆ ಈಗ ಕೆ.ಆರ್‌.ಪೇಟೆ ಚುನಾವಣಾ ಅಖಾಡಕ್ಕೆ ಜೋಡೆತ್ತುಗಳು ಎಂಟ್ರಿ ಕೊಡ್ತಾರಾ ಅನ್ನೋ ಮಾತುಗಳು ಈಗ ಕೇಳಿ ಬರ್ತಾ ಇದೆ. ಕಳೆದ ಬಾರಿ ಮಂಡ್ಯ ಲೋಕಸಭಾ ಚುನಾವಣೆ ವೇಳೆ ಸುಮಲತಾ ಪರ ದರ್ಶನ್‌ ಮತ್ತು ಯಶ್‌ ಜೋಡೆತ್ತುಗಳ ರೀತಿ ಕೆಲಸ ಮಾಡಿ ಕಮಾಲ್‌ ಮಾಡಿದ್ರು, ಅದನ್ನೇ ಈ ಬಾರಿ ಕೆ.ಆರ್‌.ಪೇಟೆಯಲ್ಲೂ ಮಾಡಲು ಮುಂದಾಗಿದ್ದಾರೆ ಬಿಜೆಪಿಯ ನಾಯಕರು.

ಹೌದು ಮೂಲಗಳ ಪ್ರಕಾರ ಕೆ.ಆರ್‌.ಪೇಟೆ ಉಪ ಚುನಾವಣೆಯಲ್ಲಿ ಕೆ.ಸಿ ನಾರಾಯಣಗೌಡ ಪರ ಪ್ರಚಾರ ಮಾಡಲು ದರ್ಶನ್‌ ಮತ್ತು ಯಶ್‌ರನ್ನು ಕಳಿಸಿಕೊಡುವಂತೆ ಸಂಸದೆ ಸುಮಲತಾರನ್ನು ನಾರಾಯಣಗೌಡ ಮನವಿ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದ್ದು.
ಸುಮಲತಾ ಅವರು ಪ್ರಚಾರಕ್ಕೆ ಬಾರದಿದ್ದರೆ ದರ್ಶನ್‌ ಹಾಗೂ ಯಶ್‌ ಅವರನ್ನು ಕಳುಹಿಸಿಕೊಡಿ ಎಂದು ಬಿಜೆಪಿ ನಾಯಕರ ಮೂಲಕ ಸುಮಲತಾ ಮೇಲೆ ಒತ್ತಡ ಹೇರಲಾಗಿದೆ ಎಂದು ಹೇಳಲಾಗ್ತಾ ಇದೆ. ಇನ್ನು ಚುನಾವಣೆಯ ಕೊನೆಯ ಎರಡು ದಿನ ದರ್ಶನ್‌ ಮತ್ತು ಯಶ್‌ ಬಂದು ಕೆ.ಆರ್‌.ಪೇಟೆಯಲ್ಲಿ ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಪರ ಪ್ರಚಾರ ಮಾಡಿದ್ರೆ ದೊಡ್ಡ ಮಟ್ಟದಲ್ಲಿ ಬಿಜೆಪಿಗೆ ಓಟ್‌ ಬೀಳಬಹುದು ಅನ್ನೋದು ಬಿಜೆಪಿಯವರ ಲೆಕ್ಕಾಚಾರ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top