ಅಡುಗೆ ಮನೆಯಲ್ಲಿ ಇರುವ ಜೀರಿಗೆ ಮುಂದೆ ನಿಮ್ಮ ಕಾಯಿಲೆಗಳು ಜೀರೋ.!

ಮನುಷ್ಯ ತನ್ನ ದೇಹದಲ್ಲಿ ಆರೋಗ್ಯ ಸಮಸ್ಯೆ ಕಂಡು ಬಂದರೆ ತಕ್ಷಣ ಆತ ವೈದ್ಯರ ಬಳಿ ಸಲಹೆ ಪಡೆಯಲು ಹೋಗುತ್ತಾನೆ, ಆದ್ರೆ ಆ ಕಾಯಿಲೆ ನಿಮ್ಮ ದೇಹದಲ್ಲಿ ಸೋಂಕುವ ಮುನ್ನವೇ ಮನೆಯಲ್ಲಿ ಕೆಲವೊಂದು ಮದ್ದುಗಳನ್ನು ಮಾಡಿಕೊಳ್ಳುವುದರಿಂದ ನಿಮ್ಮ ಬಳಿ ಯಾವ ಕಾಯಿಲೆಯೂ ಸಹ ಸುಳಿಯುವುದಿಲ್ಲ. ಹೌದು ನೀವೂ ಪ್ರತಿ ದಿನ ನಿಮ್ಮ ಅಡುಗೆ ಮನೆಯಲ್ಲಿ ಬಳಸುವ ಜೀರಿಗೆಯಿಂದಲ್ಲೂ ನಾನಾ ಕಾಯಿಲೆಗಳನ್ನು ನಿಮ್ಮಿಂದ ದೂರವಿಡಬಹದು. Read : ತಲೆ ಕೂದಲು ಉದುರುವುದಕ್ಕೆ ಇಲ್ಲಿದೆ ರಾಮಬಾಣ

ಪ್ರತಿದಿನ ಜೀರಿಗೆಯನ್ನು ಈ ಕೆಳಕಂಡ ಮಾಹಿತಿಯೊಂದಿಗೆ ಸೇವಿಸಿದ್ರೆ ನಿಮ್ಮ ಬಳಿ ಯಾವ ಕಾಯಿಲೆಗಳು ಸಹ ಸುಳಿಯುವುದಿಲ್ಲ.

  • ನಿಮಗೆ ಹಲ್ಲುನೋವಿನ ಸಮಸ್ಯೆಯಿದ್ದರೆ ಪ್ರತಿದಿನ ಸ್ವಲ್ಪ ಜೀರಿಗೆಯನ್ನು ಬಾಯಿಯಲ್ಲಿ ಹಾಕಿಕೊಂಡು ಚೆನ್ನಾಗಿ ಅಗಿದು ತಿನ್ನುವುದರಿಂದ ಹಲ್ಲು ನೋವು ಕಡಿಮೆಯಾಗುತ್ತದೆ.
  • ನಿಮಗೆ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತಿದೆ ಎಂದು ತಿಳಿದ ಕೂಡಲೇ ಒಂದು ಚಮಚ ಜೀರಿಗೆಯನ್ನು, ಒಂದು ಚಮಚ ಏಲಕ್ಕೆ ಪುಡಿಯ ಜೊತೆ ನೀರಿನಲ್ಲಿ ಕುದಿಸಿ, ತಣ್ಣಾಗದ ನಂತರ ಅದಕ್ಕೆ ಸಕ್ಕರೆ ಮತ್ತು ನಿಂಬೆ ರಸವನ್ನು ಬೆರೆಸಿ ದಿನದಲ್ಲಿ ಮೂರು ಸಲ ಸೇವಿಸಿದರೆ ನಿಮಗೆ ಬರುವ ಹೊಟ್ಟೆ ನೋವು ಜೊತೆ ವಾಂತಿಯೂ ಕಮ್ಮಿಯಾಗುತ್ತದೆ.
  • ಬಾಣಂತಿಯರು ಜೀರಿಗೆ ಪುಡಿಗೆ ಹಾಲು, ಜೇನುತುಪ್ಪ ಸೇರಿಸಿ ಪ್ರತಿದಿನ ಕುಡಿಯುವುದರಿಂದ ತಾಯಿಯ ಎದೆಹಾಲು ಹೆಚ್ಚಾಗುತ್ತದೆ, ಜೊತೆಗೆ ಮಗುವಿನ ಜೀರ್ಣಕ್ರಿಯೆಯೂ ಸಹ ಚೆನ್ನಾಗಿ ಆಗುತ್ತದೆ.
  • ಜೀರಿಗೆಯನ್ನು ಪುಡಿಮಾಡಿ, ತೆಂಗಿನ ಹಾಲಿನಲ್ಲಿ ಬೆರೆಸಿ ಮೈಗೆ ಹಚ್ಚಿಕೊಂಡು ಒಂದು ಗಂಟೆ ಕಾಲ ಹಾಗೆ ನಂತರ ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡುವುದರಿಂದ ಮೈಯಲ್ಲಿ ಬರುವ ದುರ್ಘಂದದ ವಾಸನೆ ಬರುವುದಿಲ್ಲ ಜೊತೆ ಮೈಯಲ್ಲಿ ಬೆವರು ಗುಳ್ಳೆಗಳು ಏಳುವುದಿಲ್ಲ.
  • ಬೇಸಿಗೆಯಲ್ಲಿ ಜೀರಿಗೆ ಹಾಗೂ ಕೊತ್ತಂಬರಿ ಬೀಜವನ್ನು ಹುರಿದು ಪುಡಿ ಮಾಡಿ ಸಕ್ಕರೆ ಮತ್ತು ನೀರಿನ ಜೊತೆ ಬೆರಸಿ ಕುಡಿದರೆ ಬಾಯಾರಿಕೆ ಕಡಿಮೆಯಾಗುತ್ತದೆ. ಅಲ್ಲದೇ ಜಜ್ಜಿದ ಶುಂಠಿ ಮತ್ತು ಜೀರಿಗೆ ಪುಡಿಯನ್ನು ನೀರಿನಲ್ಲಿ ಕುದಿಸಿ, ಅದಕ್ಕೆ ನಿಂಬೆರಸ ಮತ್ತು ಜೇನುತುಪ್ಪ ಬೆರೆಸಿ ಸೇವಿಸುವುದರಿಂದ ಬೇಸಿಗೆಯ ಕಾಲದಲ್ಲಿ ದೇಹಕ್ಕೆ ಉತ್ತಮವಾಗಿರುವತ್ತದೆ.

Read : ಮುಖದಲ್ಲಿ ಮೊಡವೆಯೇ.? ಒಂದೇ ವಾರದಲ್ಲಿ ಸಿಗಲಿದೆ ಪರಿಹಾರ.! ಹೀಗೆ ಮಾಡಿ ಅಷ್ಟೇ..!

ಈ ರೀತಿ ಮನೆಯ ಉಡುಗೆ ಕೋಣೆಯಲ್ಲಿ ಸಿಗುವ ಈ ಜೀರಿಗೆಯನ್ನು ನಾವು ಕೊಟ್ಟ ಮಾಹಿತಿಯ ರೀತಿ ಅನುಸರಿಸಿದರೆ ನಿಮಗೆ ಬರುವ ಸಣ್ಣ ಪುಟ್ಟ ಕಾಯಿಲೆಗಳಿಗೆ ಮನೆಯಲ್ಲಿಯೇ ಮದ್ದು ಮಾಡಿಕೊಳ್ಳಬಹುದು.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top