ನಟ ಜಗ್ಗೇಶ್ ಬೇಡಿಕೆ ಈಡೇರಿಸಿದ ರಾಯರು..! DCP ಚೆನ್ನಣ್ಣನವರ್ ಗೆ ಧನ್ಯವಾದ ಹೇಳಿದ ನವರಸನಾಯಕ..!

ನಟ ನವರಸಸ ನಾಯಕ ಜಗ್ಗೇಶ್ ಹೇಳಿ ಕೇಳಿ ರಾಯರ ಭಕ್ತರು.. ಯಾವುದೇ ಶುಭ ಕಾರ್ಯವಿರಲಿ ಏನೇ ಇರಲಿ ಸುಖ ದುಖಃಕ್ಕೆ ಅವರು ಹೋಗೋದು ರಾಯರ ಮೊರೆ. ಇತ್ತೀಚೆಗೆ ಜಗ್ಗೇಶ್ ಮತ್ತು ಪತ್ನಿ ಕಾರ್ಯಕ್ರಮಕ್ಕೆ ಹೋಗುವ ವೇಳೆ ಜಗ್ಗೇಶ್ ಸಾಮಾಜಿಕ‌ ಜಾಲತಾಣದಲ್ಲಿ ಇಬ್ಬರು ಅಂಧ ದಂಪತಿಯ ಕಂದಮ್ಮ ಕಾಣೆಯಾದ ಬಗ್ಗೆ ಓದಿ‌ ಬಹಳ ಮರುಕ ಪಟ್ಟಿದ್ದರಂತೆ ಅಲ್ಲದೇ ರಾಯರ ಬಳಿ ಆ ಮಗು ಆದಷ್ಟು ಬೇಗ ತಂದೆ ತಾಯಿ ಮಡಿಲು ಸೇರಲಿ ಅಂತ ಅಳಲು ತೋಡಿಕೊಂಡಿದ್ದಾರೆ. ತನ್ನ ಭಕ್ತನ ಮೊರೆ ಆಲಿಸಿದ ರಾಯರು ಮಗುವನ್ನು ತಂದೆ ತಾಯಿ ಮಡಿಲಿಗೆ ಸೇರಿಸಿದ್ದಾರೆ. ಇ‌ನ್ನು ಕಾಣೆಯಾದ ಮಗುವನ್ನು ಹುಡುಕುವ ಕಾರ್ಯದಲ್ಲಿ ಡಿಸಿಪಿ ಚೆನ್ನಣ್ಣವರ್ ಯಶಸ್ವಿಯಾಗಿದ್ದು. ಚೆನ್ನಣ್ಣವರ್ ಆವರಿಗೂ ನಟ ಜಗ್ಗೇಶ್ ಧನ್ಯವಾದ ಹೇಳಿದ್ದಾರೆ..
ಇನ್ನು ಕಂದಮ್ಮನ ಕಥೆಯನ್ನು ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಶೇರ್ ಮಾಡಿಕೊಂಡಿದ್ದು ಸಾಮಾಜಿಕ ಜಾಲತಾಣದಲ್ಲಿ ಬಹಳ ಮೆಚ್ಚುಗೆ ವ್ಯಕ್ತವಾಗಿದೆ..

jaggesh

ನಟ ಜಗ್ಗೇಶ್ ಫೇಸ್ ಬುಕ್ ಪೇಜ್ ನಲ್ಲಿ‌ ಏನಿದೆ ಗೊತ್ತಾ..!
ನನ್ನ ಬದುಕಿನಲ್ಲಿ ಅವಿಸ್ಮರಣೀಯ ದಿನ ಇಂದು..!!
ಮೊನ್ನೆ ನಾನು ನನ್ನ ಮಡದಿ ಪರಿಮಳ

premierpadmini #ವಿಜಯಕರ್ನಾಟಕ ಪತ್ರಿಕೆಯವರ ಓದುಗರಿಗಾಗಿ #premiershow ಏರ್ಪಡಿಸಿದ್ದರು ಹೋಗುವಾಗ ಜಾಲತಾಣದಲ್ಲಿ ಅಂದ ದಂಪತಿಗಳ ಮಗು ಕಳುವಾದ ವಿಷಯ ನೋಡಿ ತಡೆಯಲಾಗ ದುಃಖವಾಗಿ ಅತ್ತುಬಿಟ್ಟೆ..

ಎಷ್ಟು ಯತ್ನಿಸಿದರು ಆ ಘಟನೆ ಮರೆಯಲಾಗದೆ ಸಿಕ್ಕಪಟ್ಟೆ ಮಧ್ಯಸೇವನೆ ಮಾಡಿಬಿಟ್ಟೆ!ಮನೆಯಲ್ಲಿ ಎಲ್ಲರು ಕಂಗಾಲಾದರು!
ಮರುದಿನ ಬೆಳಿಗ್ಗೆ ಎದ್ದವನೆ ಸ್ನಾನಮಾಡಿ ರಾಯರ ಮೂರ್ತಿ ತಬ್ಬಿ ಆ ಮಗುವನ್ನು ಅವರಿಗೆ ಸಿಗುವಂತೆ ಮಾಡಿ ಎಂದು ಅಂಗಲಾಚಿದೆ!ನಂತರ ಉಪ್ಪಾರಪೇಟೆ ಠಾಣ ಅಧಿಕಾರಿಗಳ ಹಾಗು #Dcpchannannavar ಸಹಾಯಮಾಡಲು ಬೇಡಿದೆ..!
ಸ್ನೇಹಿತರೆ ಕೆಲವೇ ಘಂಟೆಯಲ್ಲಿ #Dcpchannannavar ಕರೆಮಾಡಿ ಮಗು ಸಿಕ್ಕವಿಷಯ ತಿಳಿಸಿದರು! ನನ್ನ ಪ್ರಭುಗಳು ರಾಯರ ಮೇಲೆ ನನ್ನ ಪ್ರೀತಿನಂಬಿಕೆ ವರ್ಣಿಸಲಾಗದ್ದು ಅವರ ಪೂಟೋ ಬಾಚಿತಬ್ಬಿಬಿಟ್ಟೆ!ಮಹಾಮಹಿಮರು ನನ್ನ ರಾಯರು!
ಇಂದು ವೈಯಕ್ತಿಕವಾಗಿ ಠಾಣೆ ಹೋಗಿ ಈ ಅದ್ಭುತ ಕಾರ್ಯಮಾಡಿದ ಆರಕ್ಷಸಿಬಂಧಿಗಳ ಧನ್ಯವಾದ ಅರ್ಪಿಸಿ ಅಂದ ದಂಪತಿಗಳಿಗೆ ಶುಭಹಾರೈಸಿ ಕೈಲಾದ ಸಹಾಯಮಾಡಿ ಭಾವುಕನಾಗಿ
ನಿರ್ಗಮಿಸಿದೆ! ಆಶ್ಚರ್ಯ ಎನು ಗೊತ್ತ ಈ ಅಂದ ದಂಪತಿಗಳದ್ದು ಪ್ರೇಮವಿವಾಹ
ಹಾಗು ಇಬ್ಬರು ಹಾಡುವ ಕಲಾವಿದರು!
ಅವರನ್ನು #ztvkannada ಗೆ ಪರಿಚಯಿಸುವ ಬರವಸೆ ನೀಡಿರುವೆ!
ದೇವರಿದ್ದಾನೆ ದೇವರಿದ್ದಾನೆ ದೇವರಿದ್ದಾನೆ
ಅಷ್ಟು ಮಾತ್ರ ಸತ್ಯ..

ಒಟ್ಟಿನಲ್ಲಿ ರಾಯರ ಭಕ್ತನಾದ ನಟ ಜಗ್ಗೇಶ್ ಗೆ ರಾಯರ ಕೃಪಕಟಾಕ್ಷದಿಂದ ಮಗು ವಾಪಾಸ್ ತಾಯಿ ಮಡಿಲು ಸೇರಿದ್ದು .ರಾಯರಿಗೆ ನಮನ ಸಲ್ಲಿಸಿ ಕಾರ್ಯದಲ್ಲಿ ಯಶಸ್ವಿಯಾದ ಡಿಸಿಪಿ ಚೆನ್ನಣ್ಣವರ್ ಅವರಿಗೆ ಧನ್ಯವಾದ ತಿಳಿಸಿದ್ರು..

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top