ಅರ್ಧ ಮೀಸೆ, ಅರ್ಧ ಗಡ್ಡದಲ್ಲಿ ಮಾಜಿ ಕ್ರಿಕೆಟರ್‌ ಜಾಕ್‌ ಕಾಲಿಸ್‌..! ಯಾಕ್‌ ಹಿಂಗೆ ಗೊತ್ತಾ..?

ಸೌತ್‌ ಆಫ್ರಿಕಾದ ಮಾಜಿ ಆಲ್‌ ರೌಂಡರ್‌ ಆಟಗಾರ ಜಾಕ್‌ ಕಾಲಿಸ್‌ ತನ್ನ ಕ್ರಿಕೆಟ್‌ ಜೀವನದಿಂದ ನಿವೃತ್ತಿ ಹೊಂದಿದ ಮೇಲೆ ಆಫ್‌ ಫೀಲ್ಡ್‌ನಲ್ಲೂ ಒಂದಿಲ್ಲೊಂದು ವಿಷಯದಲ್ಲಿ ಸುದ್ದಿಯಾಗುತ್ತಿದ್ದರು, ಆದ್ರೆ ಈ ಬಾರಿ ಅವರು ಒಂದು ಮಾನವೀಯ ವಿಷಯ ಸುದ್ದಿಯಾಗಿದ್ದು, ಈ ಮೂಲಕ ಜಾಕ್‌ ಕಾಲಿಸ್‌ ಈಗ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಹೌದು ಇತ್ತಿಚೆಗೆ ಸೌತ್‌ ಆಫ್ರಿಕಾದಲ್ಲಿ ಘೆಂಡಾ ಮೃಗಗಳ ಸಾವಿನ ಸಂಖ್ಯೆ ಹೆಚ್ಚಾಗಿದ್ದು, ಇದರಿಂದ ಬೇಸರವಾಗಿರೋ ಜಾಕ್‌ ಕಾಲಿಸ್‌, ಘೆಂಡಾ ಮೃಗಗಳ ಸಂರಕ್ಷಣೆಗಾಗಿ ಹಣ ಸಂಗ್ರಹ ಮಾಡಲು ಒಂದು ವಿಭಿನ್ನ ಚಾಲೆಂಜ್‌ ಸ್ವೀಕಾರ ಮಾಡಿದ್ದಾರೆ. ಇದರಿಂದಾಗಿ ಸೌತ್‌ ಆಫ್ರಿಕಾದ ಮಾಜಿ ಸ್ಟಾರ್‌ ಆಟಗಾರ ಜಾಕ್‌ ಕಾಲಿಸ್‌ ಈಗ ತಾವು ನವೆಂಬರ್‌ ತಿಂಗಳು ಮುಗಿಯುವ ವರೆಗೂ ಅರ್ಧ ಗಡ್ಡ ಮತ್ತು ಅರ್ಧ ಮೀಸೆಯಲ್ಲಿ ಇರುವುದಾಗಿ ಚಾಲೆಂಜ್‌ ಒಂದನ್ನು ಸ್ವೀಕಾರ ಮಾಡಿದ್ದಾರೆ.

ಘೆಂಡಾ ಮೃಗಗಳ ಸಂರಕ್ಷಣೆಗಾಗಿ ಈ ರೀತಿಯ ವಿಭಿನ್ನ ಚಾಲೆಂಜ್‌ ಸ್ವೀಕಾರ ಮಾಡಿರೋ ಜಾಕ್‌ ಕಾಲಿಸ್‌ ಅವರಿಗೆ ಈಗ ಎಲ್ಲಾ ಕಡೆಯಿಂದ ಮೆಚ್ಚುಗೆ ವ್ಯಕ್ತವಾಗಿದ್ದು.. ಸದ್ಯ ಜಾಕ್‌ ಕಾಲಿಸ್‌ ಅವರ ಅರ್ಧ ಮೀಸ, ಅರ್ಧ ಗಡ್ಡ ಇರೋ ಫೋಟೋಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಕೂಡ ಆಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top