ಕ್ರಿಕೆಟ್ ನಿಂದ ಸಿನಿಮಾಗೆ ಎಂಟ್ರಿಕೊಟ್ಟ ಇರ್ಫಾನ್ ಪಠಾಣ್..!

irphan patha first movie in tamil

ಟೀಂ ಇಂಡಿಯಾದಲ್ಲಿ ಸ್ವಿಂಗ್ ಬೌಲಿಂಗ್ ಮೂಲಕವೇ ಎದುರಾಳಿಗಳಲ್ಲಿ ನಡುಕ ಹುಟ್ಟಿಸುತ್ತಿದ್ದ ಎಡಗೈ ಬೌಲರ್ ಇರ್ಫಾನ್ ಪಠಾಣ್ ಸದ್ಯ ಟೀಂ ಇಂಡಿಯಾದಲ್ಲಿ ಅವಕಾಶವಿಲ್ಲದೇ ಟೀಂ ಇಂಡಿಯಾದಿಂದ ದೂರ ಉಳಿದಿದ್ದಾರೆ. ಆದ್ರೆ ಈಗ ಅಭಿಮಾನಿಗಳಿಗೆ ಮೈದಾನದಲ್ಲಿ ರಂಜಿಸಿ ಈಗ ಬೆಳ್ಳಿತೆರೆ ಮೇಲೆ ಅಭಿಮಾನಿಗಳನ್ನು ರಂಜಿಸಲು ಸಿದ್ಧತೆ ಮಾಡಿಕೊಳ್ತಾ ಇದ್ದಾರೆ.

ಹೌದು ತಮಿಳಿನ ವಿಕ್ರಮ್ 58 ಚಿತ್ರಕ್ಕೆ ಪಠಾಣ್ ಗೆ ಆಫರ್ ಬಂದಿದ್ದು. ಈ ಚಿತ್ರವನ್ನು ಜ್ಞಾನ ಮುತ್ತು ನಿರ್ದೇಶನ ಮಾಡ್ತಾ ಇದ್ದು. ನಿರ್ದೇಶಕರು ಪಠಾಣ್ ಗೆ ಆಫರ್ ನೀಡಿದಾಗ ಪಠಾಣ್ ಕೂಡ ಶಾಕ್ ಆಗಿದ್ರಂತೆ. ಈ ಚಿತ್ರದಲ್ಲಿ ಪಠಾಣ್ ಪೊಲೀಸ್ ಆಫಿಸರ್ ಆಗಿ ಕಾಣಿಸಿಕೊಳ್ಳಲಿದ್ದೀರ ಅಂತ ಹೇಳಿದಾಗ ಪಠಾಣ್ ಸ್ಪಲ್ಪ ಯೋಚನೆ ಮಾಡಲು ಸಮಯ ಕೇಳಿದ್ದಾರಂತೆ. ಇನ್ನು ತಮಿಳಿಗೂ ಪಠಾಣ್ ಗೂ ನಂಟಿದ್ದು ಈ ಹಿಂದೆ ಚೆನ್ನೈ ಸೂಪರ್ ಕಿಂಗ್ಸ್ ಪರ ಐಪಿಎಲ್ ಕೂಡ ಆಡಿದ್ರು ಇವೆಲ್ಲವನ್ನು ಬಂಡವಾಳ ಮಾಡಿಕೊಳ್ಳಲು ನಿರ್ದೇಶಕ ಮುತ್ತು ಮುಂದಾಗಿದ್ದಾರೆ. ಅದೇನೇ ಇದ್ರು ಮೈದಾನದಲ್ಲಿ ರಂಜಿಸಿದ್ದ ಪಠಾಣ್ ಈಗ ಬೆಳ್ಳಿತೆರೆ ಮೇಲೆ ಅಭಿಮಾನಿಗಳನ್ನು ಹೇಗೆ ರಂಜಿಸಲಿದ್ದಾರೆ ಕಾದು ನೋಡಬೇಕು.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top