IPL 2021 ಭಾರತದಲ್ಲಿ ನಡೆಯೋದು ಡೌಟ್

ಆಸ್ಟ್ರೇಲಿಯಾದ ವಿರುದ್ಧ ನಾಳೆಯಿಂದ ನಡೆಯಲಿರೋ ಮೂರನೇ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾ 11ರ ಬಳಗ ಪ್ರಕಟವಾಗಿದ್ದು, ತಂಡದಲ್ಲಿ ಎರಡು ಪ್ರಮುಖ ಬದಲಾವಣೆ ಮಾಡಲಾಗಿದೆ. ಕನ್ನಡಿಗೆ ಮಾಯಾಂಕ್ ಅಗರ್‍ವಾಲ್ ಅವರನ್ನು ತಂಡದಿಂದ ಕೈಬಿಟ್ಟಿದ್ದು ಅವರ ಸ್ಥಾನಕ್ಕೆ ರೋಹಿತ್ ಶರ್ಮಾ ತಂಡವನ್ನು ಸೇರಿಕೊಂಡಿದ್ದಾರೆ.

ಇನ್ನು ಗಾಯದ ಸಮಸ್ಯೆಯಿಂದ ಟೂರ್ನಿಯಿಂದಲೇ ಹೊರಗುಳಿದ ಉಮೇಶ್ ಯಾದವ್ ಬದಲಿಗೆ ಆರ್‍ಸಿಬಿಯ ಭರವಸೆಯ ಬೌಲರ್, ಟೀಂ ಇಂಡಿಯಾದ ಫ್ಯೂಚರ್ ಸ್ಟಾರ್ ಬೌಲರ್ ಆದ ನವದೀಪ್ ಸೈನಿ ಆಯ್ಕೆಯಾಗಿದ್ದು ಆ ಮೂಲಕ ಟೆಸ್ಟ್‍ಗೆ ನವದೀಪ್ ಸೈನಿ ಪಾದಾರ್ಪಣೆ ಮಾಡುತ್ತಿದ್ದಾರೆ. ಈಗಾಗಲೇ ತಂಡ ಪ್ರಕಟವಾಗಿದ್ದು, ಮೂರನೇ ಟೆಸ್ಟ್ ಪಂದ್ಯದಲ್ಲಿ ಯಾವರೀತಿ ಪ್ರದರ್ಶನ ಕಾಣಲಿದೆ ಕಾದುನೋಡ ಬೇಕು, ಇನ್ನು ತಂಡದಲ್ಲಿ ಆರ್‍ಸಿಬಿಯ ಪ್ರಮುಖ ಬೌಲರ್‍ಗಳು ಸ್ಥಾನವನ್ನು ಪಡೆದಿದ್ರೆ, ಇತ್ತ ಸರಣಿಯಲ್ಲಿ ಆಯ್ಕೆಯಾಗಿದ್ದ ಕನ್ನಡಿಗರು ಮೂರನೇ ಟೆಸ್ಟ್ ಪಂದ್ಯದಲ್ಲಿ ಆಡದೇ ಇರೋದು ಬೇಸರ ತರಿಸಿದೆ.

ಬಿಸಿಸಿಐ ಮುಂದಿನ ಐಪಿಎಲ್‍ಗೆ ಈಗಾಗಲೇ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದು. ಈಗಾಗಲೇ ಜನವರಿ 4ರಂದು ಐಪಿಎಲ್ ಕಮಿಟಿ ಸಭೆ ಸೇರಿದ್ದು, 2021ರ ಐಪಿಎಲ್ ವಿಚಾರವಾಗಿ ಚರ್ಚೆಯನ್ನು ನಡೆಸಿದೆಯಂತೆ, ಇನ್ನು ಫೆಬ್ರವರಿ 11ರಂದು ಹರಾಜು ಪ್ರಕ್ರಿಯೆಗೆ ತಾತ್ಕಾಲಿಕ ದಿನಾಂಕವನ್ನು ನಿಗದಿ ಮಾಡಿದ್ದು, ಜನವರಿ 21ರ ಒಳಗೆ ಎಲ್ಲಾ ಫ್ರಾಂಚೈಸಿಗಳು ಆಟಗಾರರನ್ನು ಬಿಡುಗಡೆ ಮಾಡುವಂತೆ ಹೇಳಿದೆ ಐಪಿಎಲ್ ಕಮಿಟಿ.

ಈ ಬಾರಿ ಮೆಗಾ ಆಕ್ಷನ್ ನಡೆಸುವ ಪ್ಲಾನ್‍ನಲ್ಲಿ ಬಿಸಿಸಿಐ ಇತ್ತು ಆದ್ರೆ ಕೊರೋನಾ ಹಾವಳಿಯಿಂದಾಗಿ ಮಿನಿ ಆಕ್ಷನ್‍ಗೆ ಬಿಸಿಸಿಐ ಸಿದ್ಧತೆ ನಡೆಸುತ್ತಿದೆ. ಇನ್ನು ಹರಾಜು ಪ್ರಕ್ರಿಯೆಗೂ ಮುಂಚೆ ಸಯದ್ ಮುಷ್ತಾಕ್ ಅಲಿ ಟೂರ್ನಿ ನಡೆಸುತ್ತಿದ್ದು, ಆ ಮೂಲಕ ದೇಸೀ ಪ್ರತಿಭೆಗಳ ಮೇಲೆ ಈ ಬಾರಿ ಬಿಸಿಸಿಐ ಹೆಚ್ಚು ಕಣ್ಣಿಟ್ಟಿದೆ.
ಇನ್ನು ಐಪಿಎಲ್ 14ನೇ ಆವೃತ್ತಿಯನ್ನು ಭಾರತದಲ್ಲಿ ನಡೆಸಲು ಬಿಸಿಸಿಐ ಚಿಂತನೆ ನಡೆಸಿದ್ದು, ಐಪಿಎಲ್ ವೇಳೆಯಲ್ಲಿ ಕೊರೋನಾ ನಿಯಂತ್ರಣ ಯಾವ ರೀತಿ ಇರಲಿದೆ ಅನ್ನೋ ಆಧಾರದ ಮೇಲೆ ಐಪಿಎಲ್ 14ನೇ ಆವೃತ್ತಿ ಆಯೋಜನೆ ನಿರ್ಧಾರವಾಗಲಿದೆ.

ನಿಮ್ಮ ಪ್ರಕಾರ ಐಪಿಎಲ್ 14ನೇ ಆವೃತ್ತಿಯನ್ನು ಭಾರದಲ್ಲಿ ಆಯೋಜನೆ ಮಾಡಬೇಕಾ ಇಲ್ಲ 13ನೇ ಆವೃತ್ತಿ ರೀತಿ ಬೇರೆ ದೇಶದಲ್ಲಿ ಆಯೋಜನೆ ಮಾಡಬೇಕಾ ಕಾಮೆಂಟ್ ಮಾಡಿ ತಿಳಿಸಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top