IPL 2021ನಲ್ಲಿ #RCB ಕಣ್ಣಿಟ್ಟಿದೆ ಈ ಆಟಗಾರನ ಮೇಲೆ

ಆರ್‌ಸಿಬಿ ಈ ಬಾರಿಯ ಐಪಿಎಲ್‌ನಲ್ಲಿ ಕಪ್‌ ಗೆಲ್ಲಲು ಸಾಧ್ಯವಾಗ ನಂತರ ಇದೀಗ ಆರ್‌ಸಿಬಿ ತಂಡದ ವಿಚಾರದಲ್ಲಿ ಹಲವು ತಜ್ಞರು ತಮ್ಮದೇ ತಮ್ಮದೇ ಪರಮಾರ್ಶೆಗಳನ್ನು ಮಾಡುತ್ತಿದ್ದಾರೆ. ಇನ್ನು ಆರ್‌ಸಿಬಿ ಪ್ರಾಂಜೈಸಿಗಳು ತಂಡದಲ್ಲಿ ಆಟಗಾರರನ್ನು ಆಯ್ಕೆಮಾಡುವಲ್ಲಿ ಯಡವುತ್ತಿದೆ ಅನ್ನೋ ಮಾತುಗಳನ್ನು ಸಹ ಕ್ರಿಕೆಟ್‌ ತಜ್ಞರು ಹೇಳುತ್ತಿದ್ದಾರೆ.

ಇದೀಗ ಕ್ರಿಕೆಟ್‌ ದಿಗ್ಗಜ ಬ್ರಿಯಾನ್‌ ಲಾರ್‌ ಆರ್‌ಸಿಬಿ ಪ್ರಾಂಚೈಸಿಗಳು ಈ ಆಟಗಾರನನ್ನು ತಂಡದಿಂದ ಕೈ ಬಿಟ್ಟು ತಪ್ಪು ಮಾಡಿತು ಅಂತ ಹೇಳಿದ್ದಾರೆ. ಹೌದು ಇಂದು ಮುಂಬೈ ಮತ್ತು ಡೆಲ್ಲಿ ವಿರುದ್ಧ ಐಪಿಎಲ್‌ 2020 ಫೈನಲ್‌ ಪಂದ್ಯ ನಡೀತಾ ಇದ್ದು, ಡೆಲ್ಲಿ ಪರವಾಗಿ ಈ ಬಾರಿ ಉತ್ತಮವಾಗಿ ಆಟವಾಡಿ ಪಂದ್ಯವನ್ನು ಗೆಲ್ಲುವಲ್ಲಿ ಪ್ರಮುಖವಾದ ಪಾತ್ರವಹಿಸಿದ ವ್ಯಕ್ತಿ ಅಂದ್ರೆ ಅದು ಅಲೌರೌಂಡರ್‌ ಸ್ಟೋಯ್ನಿಸ್‌.

ಕಳೆದ ಬಾರಿ ಆರ್‌ಸಿಬಿ ಪರ ಆಡಿದ್ದ ಸ್ಟೋಯ್ನಿಸ್‌ ಹೇಳಿಕೊಳ್ಳುವಂತಹ ಪ್ರದರ್ಶನವನ್ನು ನೀಡಿರಲಿಲ್ಲ, ಅದ್ದರಿಂದ ಕಳೆದ ಆಕ್ಷನ್‌ನಲ್ಲಿ ಆರ್‌ಸಿಬಿ ಸ್ಟೋಯ್ನಿಸ್‌ ಅವರನ್ನು ತಂಡದಿಂದ ಕೈ ಬಿಟ್ಟಿತ್ತು, ನಂತರ ಅವರು ಡೆಲ್ಲಿಯ ಪಾಲಾಗಿದ್ರು, ಈ ಬಾರಿಯ ಐಪಿಎಲ್‌ ಸ್ಟೋಯ್ನಿಸ್‌ ಅಮೋಘ ಪ್ರದರ್ಶನ ನೀಡುವ ಮೂಲಕ ತಂಡವನ್ನು ಫೈನಲ್‌ಗೆ ಪ್ರವೇಶಗಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ರು, ಇದೀಗ ಬ್ರಿಯಾನ್‌ ಲಾರಾ ಆರ್‌ಸಿಬಿ ಸ್ಟೋಯ್ನಿಸ್‌ ನಂತಹ ಆಲ್‌ರೌಂಡರ್‌ ನನ್ನು ಅನಾವಶ್ಯಕವಾಗಿ ಬಿಟ್ಟುಕೊಟ್ಟಿತು, ಅವರಿಗೆ ಮಿಡಲ್‌ ಆರ್ಡರ್‌ನಲ್ಲಿ ಆತ ಬೇಕಿತ್ತು. ಇದೀಗ ನೋಡಿ ಡೆಲ್ಲಿ ತಂಡದಲ್ಲಿ ಆತ ಆಟದಲ್ಲಿ ಧಮಾಕಾವನ್ನು ಮಾಡುತ್ತಿದ್ದಾರೆ ಅಂತ ಹೇಳಿದ್ದು, ಆರ್‌ಸಿಬಿ ಈ ಆಟಗಾರನನ್ನು ಬಿಟ್ಟು ತಪ್ಪು ಮಾಡಿತು ಅಂತ ಹೇಳಿದ್ದಾರೆ.

ಇನ್ನು ಈಗಾಗಲೇ ಆರ್‌ಸಿಬಿ ಮುಂದಿನ ಐಪಿಎಲ್‌ಗಾಗಿ ಈಗಿನಿಂದಲೇ ತಯಾರಿಯನ್ನು ಮಾಡಿಕೊಳ್ಳಲು ಸಿದ್ಧತೆ ನಡೆಸುತ್ತಿದೆ. ಇನ್ನೇನೂ ಐದು ತಿಂಗಳಲ್ಲಿ ಮತ್ತೆ ಐಪಿಎಲ್‌ ಶುರುವಾಗಲಿದೆ ಅನ್ನೋ ಮಾಹಿತಿಯನ್ನ ಸ್ವತಃ ಬಿಸಿಸಿಐ ಆಧ್ಯಕ್ಷ ಸೌರವ್‌ ಗಂಗೂಲಿ ಹೇಳಿದ್ದು, ಜನವರಿ ಅಥವಾ ಫೆಬ್ರವರಿಯಲ್ಲಿ ಆಟಗಾರರ ಬಿಡ್ಡಿಂಗ್‌ ಪ್ರಕ್ರಿಯೆ ನಡೆಯಲಿದೆ ಅಂತ ಹೇಳಲಾಗುತ್ತಿದೆ, ಇನ್ನು ಈಗಾಗಲೇ ಎಲ್ಲಾ ಪ್ರಾಂಚೈಸಿಗಳು ಪ್ರಮುಖ ಆಟಗಾರರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳುವ ನಿಟ್ಟಿನಲ್ಲಿ ಪ್ಲಾನ್‌ ಮಾಡಿಕೊಳ್ತಾ ಇವೆ.ಇದೀಗ ಆರ್‌ಸಿಬಿ ಕೂಡ ಮುಂದಿನ ಐಪಿಎಲ್‌ನಲ್ಲಿ ತಂಡದಲ್ಲಿ ಪ್ರಮುಖ ಸರ್ಜರಿ ಮಾಡುವುದಾಗಿ ಮೈಕ್‌ ಹಸನ್‌ ಹೇಳಿದ್ದು, ಮುಂದಿನ ಐಪಿಎಲ್‌ನಲ್ಲಿ ಯಾವೆಲ್ಲಾ ಆಟಗಾರರು ತಂಡದಿಂದ ಹೊರಹೊಗಲಿದ್ದಾರೆ ಅಂತ ಕಾದುನೋಡ ಬೇಕು, ಹೀಗಿರಬೇಕಾದ್ರೆ ಇದೀಗ ವಿರಾಟ್‌ ಮತ್ತು ಮೈಕ್‌ ಹಸನ್‌ ಈ ಒಬ್ಬ ಆಟಗಾರನ ಮೇಲೆ ಪ್ರಮುಖವಾಗಿ ಕಣ್ಣಿದ್ದಾರೆ, ಈ ಬಾರಿಯ ಐಪಿಎಲ್‌ನಲ್ಲಿ ಬ್ಯಾಟಿಂಗ್‌ ವಿಭಾಗದಲ್ಲಿ ಫಾರಿನ್‌ ಪ್ಲೇಯರ್ಸ್‌ ಆದ ಅರೋನ್‌ ಫಿಂಚ್‌, ಜೋಸೆಫ್‌ ಫಿಲಿಪೆ, ಮೊಯೀನ್‌ ಅಲಿ ತಂಡಕ್ಕೆ ಉತ್ತಮ ಕೊಡುಗೆ ನೀಡದ ಹಿನ್ನೆಲೆ ಈ ಮೂರಲ್ಲಿ ಯಾರನ್ನ ಕೈ ಬಿಡ್ತಾರೆ ಅನ್ನೋ ಕುತೂಹಲ ಇದ್ದು, ಇದೀಗ ಈ ಫಾರಿನ್‌ ಪ್ಲೇಯರ್‌ ಮೇಲೆ ಆರ್‌ಸಿಬಿ ಕಣ್ಣಿಟ್ಟಿದೆ, ಹೌದು ಇಂಗ್ಲೆಂಡ್‌ ತಂಡದ ಬ್ಯಾಟ್ಸಮನ್‌ ಡೇವಿಡ್‌ ಮಲನ್‌ ಮೇಲೆ ಇದೀಗ ಆರ್‌ಸಿಬಿ ಮುಂದಿನ ಐಪಿಎಲ್‌ಗೆ ಕಣ್ಣಿದೆ, ಇನ್ನು ಡೇವಿಡ್‌ ಮಲನ್‌ ಸದ್ಯ ಟಿ೨೦ ಇಂಟರ್‌ನ್ಯಾಷನಲ್‌ ಫಾರ್ಮೆಟ್‌ನಲ್ಲಿ ನಂಬರ್‌ವನ್‌ ರ್ಯಾಕಿಂಗ್‌ನಲ್ಲಿ ಇದ್ದು, ಆಡಿರೋ 16 ಪಂದ್ಯದಲ್ಲಿ 682ರನ್‌ಗಳನ್ನು ಸಿಡಿಸಿದ್ದು, ಇದರಲ್ಲಿ ಒಂದು ಶತಕ 7 ಅರ್ಧ ಶತಕ ಕೂಡ ಇದೆ. ಸದ್ಯ 2021ರ ಐಪಿಎಲ್‌ ಬಿಡ್ಡಿಂಗ್‌ನಲ್ಲಿ ಆರ್‌ಸಿಬಿ ಈ ಆಟಗಾರನ ಮೇಲೆ ಕಣ್ಣಿಟ್ಟಿದೆ, ಹಾಗಾದ್ರೆ ಈ ಸ್ಫೋಟಕ ಬ್ಯಾಟ್ಸಮನ್‌ ಬಗ್ಗೆ ನಿಮ್ಮ ಅಭಿಪ್ರಾಯವೇನು, ಆರ್‌ಸಿಬಿ ತಂಡದಲ್ಲಿ ಯಾವ ಫಾರಿನ್‌ ಪ್ಲೇಯರ್‌ ಬದಲಿಗೆ 2021ರ ಐಪಿಎಲ್‌ ಬಿಡ್ಡಿಂಗ್‌ನಲ್ಲಿ ತಂಡಕ್ಕೆ ತೆಗೆದುಕೊಳ್ಳ ಬೇಕು ಕಾಮೆಂಟ್‌ ಮಾಡಿ ತಿಳಿಸಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top