IPL 2021ನಲ್ಲಿ RCBಗೆ ಬೇಕೇ ಬೇಕು ಈ 5ಜನ

ಐಪಿಎಲ್ 2020ಯಲ್ಲಿ ಆರ್‍ಸಿಬಿ ಪ್ರಾರಂಭದಲ್ಲಿ ಉತ್ತಮ ಪ್ರದರ್ಶನ ನೀಡಿದ್ರು, ಕೊನೆಯ ಹಂತದಲ್ಲಿ ಆರ್‍ಸಿಬಿ ಬ್ಯಾಟಿಂಗ್ ಮತ್ತು ಬೌಲಿಂಗ್‍ನಲ್ಲಿ ಎಡವಿದ್ದರಿಂದಾಗಿ ಕಪ್ ಗೆಲ್ಲುವ ಆಸೆಯನ್ನು ಕೈಬಿಡಬೇಕಾಯ್ತು, ಇದೀಗ ಮುಂದಿನ ಐಪಿಎಲ್‍ಗೆ ಆರ್‍ಸಿಬಿ ಈಗಲೇ ತಯಾರಿಯನ್ನು ನಡೆಸುತ್ತಿದ್ದು, ಮುಂದಿನ ಐಪಿಎಲ್‍ನಲ್ಲಿ ಬಲಿಷ್ಠ ತಂಡವನ್ನು ಕಟ್ಟಲು ಯೋಜನೆಯನ್ನು ಹಾಕಿಕೊಳ್ಳುತ್ತಿದೆ. ಇನ್ನು ಮುಂದಿನ ಐಪಿಎಲ್‍ನಲ್ಲಿ ಬಿಸಿಸಿಐ ಮೆಗಾ ಆಕ್ಷನ್ ಕೂಡ ಕರೆಯಲಿದೆ ಅನ್ನೋ ಮಾಹಿತಿ ಇದ್ದು, ಈ ಬಿಡ್ಡಿಂಗ್‍ನಲ್ಲಿ ಆರ್‍ಸಿಬಿ ಈ ಆಟಗಾರರನ್ನು ತೆಗೆದುಕೊಳ್ಳುವ ಮೂಲಕ ತಂಡವನ್ನು ಬಲಿಷ್ಠ ಮಾಡಿಕೊಳ್ಳುವ ಪ್ರಯತ್ನವನ್ನು ಮಾಡ ಬೇಕು, ಹಾಗಾದ್ರೆ ಯಾವ ಯಾವ ಆಟಗಾರರ ಮೇಲೆ ಹೆಚ್ಚು ಗಮನ ಹರಿಸಬೇಕು ಅನ್ನೋದನ್ನು ನಾವ್ ಇವತ್ತು ನೋಡೋಣ

ಮೊದಲನೇಯದಾಗಿ ಆಸ್ಟ್ರೇಲಿಯಾದ ಎಡಗೈ ವೇಗದ ಬೌಲರ್ ಮಿಚಲ್ ಸ್ಟಾರ್ಕ್ ಮೇಲೆ ಆರ್‍ಸಿಬಿ ಹೆಚ್ಚು ಗಮನ ಹರಿಸಬೇಕು, ಹೌದು ಐಪಿಎಲ್‍ನಲ್ಲಿ ಆರ್‍ಸಿಬಿ ಪರ ಆಡಿರೋ ಮಿಚೆಲ್ ಸ್ಟಾರ್ಕ್ ಕಳೆದ ಐಪಿಎಲ್‍ನಿಂದ ದೂರ ಉಳಿದಿದ್ರು, ಇದೀಗ ಮುಂದಿನ ಐಪಿಎಲ್‍ನಲ್ಲಿ ಸ್ಟಾರ್ಕ್ ಆಡುವ ಆಸಕ್ತಿ ತೋರಿದ್ದು, ಆರ್‍ಸಿಬಿ ಇವರನ್ನು ಬಿಡ್ಡಿಂಗ್‍ನಲ್ಲಿ ತನ್ನತ್ತ ಸೆಳೆದುಕೊಳ್ಳುವ ಪ್ರಯತ್ನ ಮಾಡಬೇಕು. ಇನ್ನು ಆರ್‍ಸಿಬಿ ಬೌಲಿಂಗ್ ವಿಭಾಗದಲ್ಲಿ ಹೆಚ್ಚು ಒತ್ತುಕೊಡಬೇಕಾಗಿರುವುದರಿಂದ ಸ್ಟಾರ್ಕ್ ಅವರನ್ನು ತಂಡಕ್ಕೆ ಆಯ್ಕೆ ಮಾಡಿಕೊಳ್ಳುವುದು ಬೆಸ್ಟ್ ಆಪ್ಶನ್ ಅಂತಾನೇ ಹೇಳಬಹುದು.

ಎರಡನೇ ಆಯ್ಕೆ ನೋಡೋದಾದ್ರೆ, ಆರ್‍ಸಿಬಿ ಆಲ್‍ರೌಂಡರ್ ಕೊರತೆ ಹೆಚ್ಚಾಗಿದ್ದು, ವಿದೇಶಿ ಕೋಟಾದಲ್ಲಿ ಆರ್‍ಸಿಬಿ ಶಕೀಬ್ ಉಲ್ ಹಸನ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವ ಪ್ರಯತ್ನವನ್ನು ಮಾಡಬೇಕಾಗುತ್ತದೆ. ಶಕೀಬ್ ಮಿಡಲ್ ಆರ್ಡರ್‍ನಲ್ಲಿ ತಂಡಕ್ಕೆ ಬಲತಂದುಕೊಡುವ ಜೊತೆಯಲ್ಲಿ ಬೌಲಿಂಗ್‍ನಲ್ಲೂ ತಂಡಕ್ಕೆ ಗೆಲುವನ್ನು ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ. ಒಂದು ವರ್ಷದ ನಿಷೇದದಿಂದಾಗಿ ಐಪಿಎಲ್‍ನಿಂದ ದೂರವಿದ್ದ ಶಕೀಬ್ ಇದೀಗ ನಿಷೇದವನ್ನು ಮುಕ್ತಾಯ ಗೊಳಿಸಿದ್ದು ಮುಂದಿನ ಆಕ್ಷನ್‍ನಲ್ಲಿ ಲಭ್ಯವಿರುವುದರಿಂದ ಆರ್‍ಸಿಬಿ ಇವರ ಮೇಲೆ ಹೆಚ್ಚು ಗಮನ ಹರಿಸಬೇಕಾಗುತ್ತದೆ.

ಇನ್ನು ಆರ್‍ಸಿಬಿಗೆ ಬ್ಯಾಟಿಂಗ್ ವಿಭಾಗದಲ್ಲಿ ಪ್ರಮುಖ ಓಪನಿಂಗ್ ಬ್ಯಾಟ್ಸಮನ್ ಕೊರತೆ ಹೆಚ್ಚಾಗಿ ಕಾಣುತ್ತಿದ್ದು, ಈ ಬಾರಿಯ ಆಕ್ಷನ್‍ನಲ್ಲಿ ಆರ್‍ಸಿಬಿ ಓಪನರ್ ಬ್ಯಾಟ್ಸಮನ್‍ಗಳ ಕಡೆ ಹೆಚ್ಚು ಗಮನ ಕೊಡಬೇಕು. ಹಾಗಾಗಿ ಈ ಬಾರಿ ಆರ್‍ಸಿಬಿ ಬಿಡ್ಡಿಂಗ್‍ನಲ್ಲಿ ಇಂಗ್ಲೆಂಡ್ ತಂಡದ ಪ್ರಮುಖ ಆಟಗಾರರಾದ ಜೆಸ್ಸಿನ್ ರಾಯ್ ಮತ್ತು ಡೇವಿಡ್ ಮಲನ್ ಮೇಲೆ ಹೆಚ್ಚಿನ ಗಮನ ಹರಿಸಬೇಕಾಗುತ್ತದೆ. ಹೌದು ಟಿ20 ಸ್ಪೆಷಲಿಸ್ಟ್ ಆದ ಜೆಸ್ಸಿನ್ ರಾಯ್ ಮತ್ತು ಟಿ20 ಫಾರ್ಮೆಟ್‍ನ ನಂಬರ್ 1 ಆಟಗಾರನಾದ ಡೆಮಿಡ್ ಮಲನ್ ಅವರನ್ನು ಬಿಡ್ಡಿಂಗ್‍ನಲ್ಲಿ ಉತ್ತಮ ಮೊತ್ತಕ್ಕೆ ಖರೀದಿ ಮಾಡುವ ಪ್ರಯತ್ನ ಆರ್‍ಸಿಬಿ ಮಾಡಿದ್ರೆ ತಂಡದಲ್ಲಿ ಓಪನಿಂಗ್ ಬ್ಯಾಟಿಂಗ್‍ನಲ್ಲಿ ಇರುವ ಸಮಸ್ಯೆಯನ್ನು ಸರಿದೂಗಿಸಿಕೊಳ್ಳ ಬಹುದಾಗಿದೆ.

ಇನ್ನು ಮುಂಬೈ ಮತ್ತು ಕೊಲ್ಕಾತ್ತಾ ನೈಟ್‍ರೈಡರ್ಸ್ ತಂಡದಲ್ಲಿ ಪೊಲಾರ್ಡ್ ಮತ್ತು ಆಂಡ್ರೋ ರೆಸೆಲ್ ರೀತಿಯಲ್ಲಿ ಡೌನ್ ಆರ್ಡರ್‍ನಲ್ಲಿ ಆಡುವ ಆಟಗಾರನ ಆಯ್ಕೆಯಲ್ಲಿ ಮನಸು ಮಾಡಬೇಕಾಗಿದ್ದು, ಇದಕ್ಕೆ ಬೆಸ್ಟ್ ಆಪ್ಶನ್ ಅಂದ್ರೆ ವಿಂಡೀಸ್‍ನ ಹೊಡಿಬಡಿ ದಾಂಡಿಗ ಕಾಲ್ರೋಸ್ ಬ್ರೆತ್‍ವೇಟ್ ಈ ಆಟಗಾರರ ಬೌಲಿಂಗ್‍ನಲ್ಲೂ ಕಮಾಲ್ ಮಾಡೋ ಜೊತೆಯಲ್ಲಿ ಬ್ಯಾಟಿಂಗ್‍ನಲ್ಲೂ ಅಗತ್ಯವಿರೋ ಟೈಂನಲ್ಲಿ ಸಿಡಿಯೋದ್ರಲ್ಲಿ ಯಾವುದೇ ಅನುಮಾನವಿಲ್ಲ..ಹಾಗಾಗಿ ಈ ಪ್ರಮುಖ ವಿದೇಶಿ ಆಟಗಾರರ ಮೇಲೆ ಈ ಬಾರಿಯ ಬಿಡ್ಡಿಂಗ್‍ನಲ್ಲಿ ಆರ್‍ಸಿಬಿ ಕಣ್ಣಿಡುವ ಮೂಲಕ ತಂಡವನ್ನು ಬಲಪಡಿಸಿಕೊಳ್ಳುವ ಪ್ರಯತ್ನವನ್ನು ಮಾಡಬೇಕು.

ನಿಮ್ಮ ಪ್ರಕಾರ ಆರ್‍ಸಿಬಿ ತಂಡ ಇನ್ನಷ್ಟು ಬಲಗೊಳ್ಳಬೇಕಾದ್ರೆ ಯಾವ ವಿದೇಶಿ ಆಟಗಾರರನ್ನು ತಂಡಕ್ಕೆ ಮುಂದಿನ ಆಕ್ಷನ್‍ನಲ್ಲಿ ತೆಗೆದುಕೊಳ್ಳ ಬೇಕು.ಕಾಮೆಂಟ್ ಮಾಡಿ ತಿಳಿಸಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top