ಒಂದೇ ಸ್ಟೇಡಿಯಂನಲ್ಲಿ ಐಪಿಎಲ್‌ ನಡೆಸಲು ಬಿಸಿಸಿಐ ಪ್ಲಾನ್‌..!

ಐಪಿಎಲ್‌, ಕ್ರಿಕೆಟ್‌ ಪ್ರೇಮಿಗಳಿಗೆ ಒಂದು ರೀತಿಯ ಹಬ್ಬದ ವಾತಾವರಣ ಸೃಷ್ಟಿಸೋ ಕಾರ್ಯಕ್ರಮ, ಅದೆಷ್ಟೋ ಕ್ರಿಕೆಟ್‌ ಅಭಿಮಾನಿಗಳು ಈ ಒಂದು ಟೂರ್ನಿಗಾಗಿ ಕಾಯ್ತಾ ಕುಳಿತಿರುತ್ತಾರೆ. ಈಗಾಗಲೇ 12 ಸೀಸನ್‌ಗಳನ್ನು ಎಂಜಾಯ್ ‌ಮಾಡಿರೋ ಕ್ರಿಕೆಟ್‌ ಪ್ರೇಮಿಗಳು ಸೀಸನ್‌ 13ರನ್ನು ಎಂಜಾಯ್‌ ಮಾಡಲು ಕೊರೋನಾ ಅಡ್ಡಿಯಾಗಿ ಬಿಟ್ಟಿದೆ, ಈಗಾಗಲೇ ಏಪ್ರಿಲ್‌ನಲ್ಲಿ ನಡೆಯ ಬೇಕಾಗಿದ್ದ ಐಪಿಎಲ್‌ ಸದ್ಯದ ಮಟ್ಟಿಗೆ ಕೊರೋನಾ ಹಾವಳಿಯಿಂದಾಗಿ ರದ್ದಾಗಿದ್ದು, ಐಪಿಎಲ್‌ ಪ್ರಿಯರಿಗೆ ನಿರಾಶೆ ಉಂಟಾಗಿದೆ, ಇನ್ನು ಐಪಿಎಲ್‌ ರದ್ದಾಗಿರೋದ್ರಿಂದ ಬಿಸಿಸಿಐಗೆ ಸುಮಾರು 3000 ದಿಂದ 4000 ಕೋಟಿ ನಷ್ಟವಾಗಲಿದೆ ಅಂತ ಅಂದಾಜಿಸಲಾಗುತ್ತದೆ.

ಹೀಗಿರುವಾಗ ಬಿಸಿಸಿಐ ಶಾತಾಯಗತಾಯ ಐಪಿಎಲ್‌ ಮಾಡಿಯೇ ತೀರಬೇಕು ಅನ್ನೋ ಹಠಕ್ಕೆ ಬಿದ್ದಿದ್ದು, ಹೀಗಾಗಿ ಹೊಸದೊಂದು ಪ್ಲಾನ್‌ ಅನ್ನ ಮಾಡಿಕೊಂಡಿದೆ, ಹೌದು ಈಗಾಗಲೇ ಟಿ20 ವಿಶ್ವಕಪ್‌ ರದ್ದಾಗುವ ಎಲ್ಲಾ ಲಕ್ಷಣಗಳು ಇರುವುದರಿಂದಾಗಿ, ಅಕ್ಟೋಬರ್‌ ಮತ್ತು ನವೆಂಬರ್‌ನಲ್ಲಿ ನಡೆಯ ಬೇಕಾಗಿದ್ದ ಟಿ20 ವಿಶ್ವಕಪ್‌ ಟೂರ್ನಿಯ ವೇಳ ಪಟ್ಟಿಯಲ್ಲಿಯೇ ಐಪಿಎಲ್‌ ನಡೆಸಿ ಬಿಡೋಣ ಅನ್ನೋ ಪ್ಲಾನ್‌ನಲ್ಲಿದೆ ಬಿಸಿಸಿಐ, ಇದಕ್ಕಾಗಿ ಬಿಸಿಸಿಐ ಹೊಸ ಪ್ಲಾನ್‌ ಮಾಡಿಕೊಂಡಿದ್ದು, ದೇಶದಲ್ಲೂ ಕೊರೋನಾ ಹಾವಳಿ ಇರುವುದರಿಂದಾಗಿ ಸೀಮಿತ ಪ್ರದೇಶದಲ್ಲಿ ಐಪಿಎಲ್‌ ಟೂರ್ನಿಯನ್ನು ಕ್ಲೋಸ್‌ ಡೋರ್ಸ್‌ನಲ್ಲಿ ಆಡಿಸಲು ಚಿಂತನೆಯನ್ನು ನಡೆಸ್ತಾ ಇದೆ.

ಇನ್ನು ಐಪಿಎಲ್‌ನಲ್ಲಿ ವಿದೇಶಿ ಆಟಗಾರರನ್ನು ಆಡಿಸ ಬೇಕಾ ಅಥವಾ ಕೇವಲ ದೇಶೀ ಆಟಗಾರರನ್ನು ಇಟ್ಟುಕೊಂಡು ಐಪಿಎಲ್‌ ಟೂರ್ನಿ ನಡೆಸೋದ ಅನ್ನೋ ಚಿಂತನೆಯಲ್ಲೂ ಬಿಸಿಸಿಐ ಇದ್ದು, ಇದಕ್ಕಾಗಿ ಒಂದಿಷ್ಟು ತಯಾರಿಗಳನ್ನು ಸಹ ಮಾಡಿಕೊಳ್ತಾ ಇದೆ. ಈಗಾಗಲೇ ಕೇವಲ ದೇಶೀ ಕ್ರಿಕೆಟರ್‌ನ ಬಳಸಿಕೊಂಡು ಐಪಿಎಲ್‌ ನಡೆಸಲು ಚೆನ್ನೈ ಸೂಪರ್‌ ಕಿಂಗ್ಸ್‌ ಹೊರತು ಪಡಿಸಿ ಉಳಿದೆಲ್ಲ ತಂಡಗಳು ಒಪ್ಪಿಕೊಂಡಿದೆ. ಹೀಗಿರುವಾಗ ಐಪಿಎಲ್‌ ಅನ್ನು ಎಲ್ಲಾ ಸ್ಟೇಡಿಯಂಗಳಲ್ಲಿ ಆಡಿಸುವ ಬದಲಿಗೆ , ಆಯ್ದ ಕೆಲವು ಸ್ಟೇಡಿಯಂಗಳಲ್ಲಿ ಆಡಿಸುವ ಮೂಲಕ ಐಪಿಎಲ್‌ ನಡೆಸುವ ಮನಸ್ಸನ್ನು ಮಾಡುತ್ತಿದೆ ಬಿಸಿಸಿಐ. ಒಂದು ಕಡೆ ಕೊರೋನಾ ಹಾವಳಿ ಇರುವುದರಿಂದಾಗಿ ಕೇಲವ ಆಯ್ದ ಸ್ಟೇಡಿಯಂಗಳಲ್ಲಿ ಆಡಿಸುವುದರಿಂದಾಗಿ ಇದು ಆಟಗಾರರಿಗೂ ಮತ್ತು ಟೂರ್ನಿ ನಡೆಸುವ ಆಯೋಜಕರಿಗೂ ಒಳಿತು ಅನ್ನೋ ದೃಷ್ಟಿಯಿಂದಾಗಿ ಈ ತೀರ್ಮಾನವನ್ನು ತೆಗೆದುಕೊಳ್ಳಲು ಬಿಸಿಸಿಐ ನಿರ್ಧರಿಸಿದ್ದು, ಇದಕ್ಕಾಗಿ ಸ್ಟೇಡಿಯಂ ಹುಡುಕಾಟದಲ್ಲಿದೇ, ಇನ್ನು ಬಿಸಿಸಿಐ ಮೊದಲು ಮಹಾನಗರಿ ಮುಂಬೈನಲ್ಲಿ ಐಪಿಎಲ್‌ ಟೂರ್ನಿ ನಡೆಸಲು ಪ್ಲಾನ್‌ ಮಾಡಿತ್ತು, ಆದ್ರೆ ಸದ್ಯ ಮುಂಬೈನ ವಾಂಖೆಡೆ ಮತ್ತು ಪುಣೆಯ ಸಹಾರ ಸ್ಟೇಡಿಯಂ ಈಗಾಗಲೇ ಕೊರೋನಾ ಆಸ್ಪತ್ರೆಯಾಗಿ ಪರಿವರ್ತನೆಯಾಗಿರುವುದರಿಂದ ಡಿಸೆಂಬರ್‌ ವರೆಗೆ ಈ ಸ್ಟೇಡಿಯಂಗಳಲ್ಲಿ ಐಪಿಎಲ್‌ ನಡೆಸಲು ಸಾಧ್ಯವಾಗುವುದಿಲ್ಲ, ಹೀಗಾಗಿ ಈಗ ಬಿಸಿಸಿಐ ಸ್ಟೇಡಿಯಂ ಹುಡುಕಾಟದಲ್ಲಿ ತೊಡಗಿದೆ.

ಒಂದು ಮೂಲದ ಪ್ರಕಾರ ಬೆಂಗಳೂರು ಮತ್ತು ಹೈದರಬಾದ್‌ ಸ್ಟೇಡಿಯಂಗಳನ್ನು ಬಳಸಿಕೊಂಡು ಐಪಿಎಲ್‌ 13ರನ್ನು ನಡೆಸೋ ಪ್ಲಾನ್‌ನಲ್ಲಿ ಕೂಡ ಬಿಸಿಸಿಐ ಇದೆ ಎಂದು ಹೇಳಲಾಗುತ್ತಿದ್ದು, ಇನ್ನು ಕೆಲವೇ ದಿನಗಳಲ್ಲಿ ಐಪಿಎಲ್‌ ವಿಚಾರವಾಗಿ ಹೊಸದೊಂದು ಸುದ್ದಿ ಹೊರಬರೋದಂತು ಗ್ಯಾರಂಟಿ. ಈಗಾಗಲೇ ಬಿಸಿಸಿಐ ಅಧ್ಯಕ್ಷ ಗಂಗೂಲಿ ಮತ್ತು ಐಪಿಎಲ್‌ ಅಧ್ಯಕ್ಷ ಬ್ರಿಜೇಶ್‌ ಪಟೇಲ್‌ ಐಪಿಎಲ್‌ ನಡೆಸೋ ಬಗ್ಗೆ ಮಾಹಿತಿ ಬಿಟ್ಟುಕೊಟ್ಟಿದ್ದು, ಭಾರತದಲ್ಲಿ ಅನುಮತಿ ಸಿಗದೇ ಇದ್ದ ಪಕ್ಷದಲ್ಲಿ ಹೊರ ದೇಶದಲ್ಲಿಯೂ ನಡೆಸೋ ಪ್ಲಾನ್‌ ಕೂಡ ಮಾಡಿಕೊಂಡಿದೆ.

ಒಟ್ಟಿನಲ್ಲಿ ಅಕ್ಟೋಬರ್‌ ತಿಂಗಳ ವೇಳೆ ಎಲ್ಲವೂ ಅಂದುಕೊಂಡಂತೆ ಆದ್ರೆ ಐಪಿಎಲ್‌ 13 ಕೆಲವು ಆಯ್ದ ಸ್ಟೇಡಿಯಂನಲ್ಲಿ ನಡೆಯೋ ಮೂಲಕ ಕ್ರಿಕೆಟ್‌ ಪ್ರೇಮಿಗಳಿಗೆ ರಸದೌತಣ ನೀಡೋದಂತು ಗ್ಯಾರಂಟಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top