ಈ ಬಾರಿ ಐಪಿಎಲ್ ಹಬ್ಬ ಎಲ್ಲಿ ಗೊತ್ತಾ..?

ipl in dubai

ಐಪಿಎಲ್ 13 ಈ ವರ್ಷ ನಡಿಯುತ್ತೋ ಇಲ್ಲವೋ ಅನ್ನೋ ಅನುಮಾನಗಳು ಎಲ್ಲಾ ಕ್ರಿಕೆಟ್ ಪ್ರೇಮಿಗಳಲ್ಲೂ ಮನೆಮಾಡಿತ್ತು, ಇನ್ನು ಲಾಖ್‍ಡೌನ್,ಕೊರೋನಾ ಎಫೆಕ್ಟ್‍ನಿಂದಾಗಿ ಮನೆಯಲ್ಲಿ ಕುಳಿತಿರುವ ಅದೆಷ್ಟೋ ಕ್ರೀಡಾ ಪ್ರೇಮಿಗಳಿಗೆ ಬೇಸರುವು ಆಗಿದ್ದು, ಈಗ ಬೇಸರಕ್ಕೆ ಮದ್ದು ಸಿಕ್ಕಂತಾಗಿದೆ. ಬಿಸಿಸಿಐ ಏಪ್ರಿಲ್‍ನಲ್ಲಿ ಐಪಿಎಲ್ ನಡೆಯದೆ ಇದ್ದುದ್ದರಿಂದ ಈ ವರ್ಷ ಹೇಗಾದರೂ ಮಾಡಿ ಐಪಿಎಲ್ ನಡೆಸಿಯೇ ತೀರಬೇಕು ಅನ್ನೋ ಕಾರ್ಯಕ್ಕೆ ನಿಂತಿತ್ತು,

ಇನ್ನು ಟಿ 20 ವಿಶ್ವಕಪ್ ಕೂಡ ಆಸ್ಟ್ರೇಲಿಯಾ ನಡೆಸಲು ಹಿಂದೇಟು ಹಾಕುತ್ತಿರುವಾಗಲೇ ಇತ್ತ ಬಿಸಿಸಿಐ ಐಪಿಎಲ್ ನಡೆಸಿಯೇ ಬಿಡೋಣ ಅನ್ನೋ ಪ್ಲಾನ್ ಇಟ್ಟುಕೊಂಡು ವಿಶ್ವಕಪ್ ವೇಳಾ ಪಟ್ಟಿಯಲ್ಲಿಯೇ ಐಪಿಎಲ್ ಏರ್ಪಡಿಸೋಣ ಅನ್ನೋ ತೀರ್ಮಾನಕ್ಕೂ ಬಂದಿತ್ತು, ಇನ್ನು ಐಪಿಎಲ್ ಎಲ್ಲಿ ನಡೆಸೋದು ಕೊರೋನಾ ಹಾವಳಿ ಜಾಸ್ತಿಯಾಗಿರುವ ಹಿನ್ನೆಲೆ ಭಾರತದಲ್ಲಿ ನಡೆಸೋದು ಅಸಾಧ್ಯ ಎನ್ನುವ ಮಾತುಗಳು ಕೇಳಿಬರುತ್ತಿರುವ ಬೆನ್ನಲ್ಲೇ, ಶ್ರೀಲಂಕಾ ಮತ್ತು ಯುಎಇ ಐಪಿಎಲ್ ಆಯೋಜನೆಗೆ ಉತ್ಸುಕವಾಗಿ ನಿಂತಿದ್ದು, ಬಿಸಿಸಿಐಗೆ ಮನವಿಯನ್ನು ಕೂಡ ಮಾಡಿಕೊಂಡಿತ್ತು,

ಇನ್ನು ಐಪಿಎಲ್ ವಿಚಾರದಲ್ಲಿ ಈಗಾಗಲೇ ಯುಎಇಯಲ್ಲಿ ಕೆಲ ಮ್ಯಾಚ್‍ಗಳನ್ನು ನಡೆಸಿ ಯಶಸ್ವಿಯಾಗಿದ್ದ ಬಿಸಿಸಿಐ, ಯುಎಇಯಲ್ಲಿ ಐಪಿಎಲ್ ನಡೆಸಲು ಎಲ್ಲಾ ತಯಾರಿಗಳನ್ನು ನಡೆಸುತ್ತಿತ್ತು, ಇನ್ನು ಈ ವಿಚಾರವಾಗಿ ಆಗಾಗೇ ಬಿಸಿಸಿಐ ಅಧ್ಯಕ್ಷ ಗಂಗೂಲಿ ಮತ್ತು ಐಪಿಎಲ್ ಅಧ್ಯಕ್ಷ ಬ್ರಿಜೇಶ್ ಪಟೇಲ್ ಐಪಿಎಲ್ ನಡೆಸುವ ವಿಚಾರವಾಗಿ ಹೇಳಿಕೆಗಳನ್ನು ನೀಡುತ್ತಿದ್ದುರು, ಹೀಗಿರುವಾಗ ಈಗ ಬಿಸಿಸಿಐ ಮೂಲಗಳಿಂದ ಮಾಹಿತಿ ಹೊರಬಂದಿದ್ದು, ಐಪಿಎಲ್ ಸೆಪ್ಟಂಬರ್ 26 ರಿಂದ ನವೆಂಬರ್ 6ರ ವರೆಗೆ ಯುಎಇಯಲ್ಲಿ ಆಯೋಜನೆ ಮಾಡಲು ಬಿಸಿಸಿಐ ಚಿಂತನೆ ನಡೆಸಿದೆ ಅನ್ನೋ ಸುದ್ದಿ ಹೊರಬಿದ್ದಿದ್ದು, ಇನ್ನು ಅಧಿಕೃತ ಘೋಷಣೆಯಾಗುವುದೊಂದೆ ಬಾಕಿ ಎನ್ನಲಾಗುತ್ತಿದೆ.

ಇನ್ನು ಐಪಿಎಲ್ ಆಟಗಾರರನ್ನು 6 ವಾರಗಳ ಮುಂಚಿತವಾಗಿ ಯುಎಇಗೆ ಕಳುಹಿಸುವ ಮೂಲಕ ಅಲ್ಲಿಯೇ ಟ್ರೈನಿಂಗ್ ಕ್ಯಾಂಪ್‍ಗಳನ್ನು ಮಾಡಲು ಕೂಡ ಬಿಸಿಸಿಐ ಚಿಂತನೆ ನಡೆಸಿದೆಯಂತೆ, ಇನ್ನು ಅದಕ್ಕೂ ಮುಂಚಿತವಾಗಿ ಮೊಹಾಲಿ ಮತ್ತು ಧರ್ಮಶಾಲಾದಲ್ಲಿ ಟ್ರೈನಿಂಗ್ ಕ್ಯಾಂಪ್‍ಗಳನ್ನು ಆಯೋಜನೆ ಮಾಡಲು ಕೂಡ ಬಿಸಿಸಿಐ ಚಿಂತನೆ ನಡೆಸಲಾಗುತ್ತಿದೆ ಅನ್ನೋ ಮಾಹಿತಿ ಕೂಡ ಹೊರಬಿದ್ದಿದ್ದು, ಸೆಪ್ಟೆಂಬರ್ ತಿಂಗಳಲ್ಲಿ ಯುಎಇಯಲ್ಲಿ ಐಪಿಎಲ್ ನಡೆಯೋದು ಪಕ್ಕಾ ಆದಂತಾಗಿದೆ. ಇನ್ನು ಈ ವಿಷಯ ತಿಳಿದ ಕ್ರಿಕೆಟ್ ಆಭಿಮಾನಿಗಳು ಸಂಭ್ರಮಾಚರಣೆಯಲ್ಲಿದ್ದು, ಯುಎಇಯಲ್ಲಿ ಯಾವ ರೀತಿ ಪಂದ್ಯ ವೀಕ್ಷಣೆ ಇರಲಿದೆ ಅನ್ನೋ ಕುತೂಹಲ ಮನೆಮಾಡಿದೆ. ಕೊರೋನಾ ಎಫೆಕ್ಟ್‍ನಿಂದಾಗಿ ಕೇವಲ ಕ್ಲೋಸ್ ಡೋರ್ ಮ್ಯಾಚ್‍ಗಳನ್ನು ನಡೆಸಲಾಗುವುದು ಅನ್ನೋ ಮಾಹಿತಿ ಇದ್ದು, ಮ್ಯಾಚ್‍ಗಳನ್ನು ಕೇವಲ ಟಿವಿಯಲ್ಲಿ ನೋಡಿ ಎಂಜಾಯ್ ಮಾಡಲು ಅವಕಾಶ ಸಿಗಲಿದೆ.

ಒಟ್ಟಿನಲ್ಲಿ ಈ ವರ್ಷ ಐಪಿಎಲ್ ನೋಡುವ ಭಾಗ್ಯ ಇಲ್ಲ ಅನ್ನೋರಿಗೆ ದೊಡ್ಡ ಸಿಹಿಸುದ್ದಿ ಸಿಕ್ಕಿದ್ರೆ, ಇತ್ತ ಐಪಿಎಲ್ ನಡೆಯದೇ ಹೋದರೆ ನಮ್ಮ ಕೆರಿಯರ್ ಮುಕ್ತಾಯ ಅನ್ನುತ್ತಿದ್ದ ಆಟಗಾರರಿಗೆ ಲಡ್ಡು ಬಂದು ಬಾಯಿಗೆ ಬಿದ್ದಂತಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top