
ಐಪಿಎಲ್ ಸೀಸನ್ 12 ಇಂದು ಆರ್.ಸಿ.ಬಿ VS ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯ ಇಂದು ಚೆನ್ನೈನ ಚಿದಂಬರಂ ಸ್ಟೇಡಿಯಂನಲ್ಲಿ ಅದ್ಧೂರಿಯಾಗಿ ಆರಂಭವಾಯಿತು. ಮೊದಲ ಪಂದ್ಯದಲ್ಲೇ 70ರನ್ ಗೆ ಆರ್ ಸಿ ಬಿ ಆಲೌಟ್ ಆಗಿದೆ. ಆದ್ರೆ ಆರ್ ಸಿ ಬಿ ಫ್ಯಾನ್ಸ್ ಮಾತ್ರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಕಾರಣ ಆರ್.ಸಿ.ಬಿ ಕಳಪೆ ಪ್ರದರ್ಶನಕ್ಕೆ ಅಲ್ಲ ಬದಲಿಗೆ ಚಿದಂಬರಂ ಸ್ಟೇಡಿಯಂನ ಪಿಚ್ ಕಂಡೀಷನ್ ಗೆ. ಹೌದು ಚಿದಂಬರಂ ಪಿಚ್ ಅಕ್ಷರ ಸಹ ಬುಗುರಿಯಂತೆ ಆಡುತ್ತಿತ್ತು. ಬೌಲರ್ ಹಾಕಿದ ಪ್ರತಿಯೊಂದು ಬಾಲ್ ಕೂಡ ಬುಗುರಿಯಂತೆ ತಿರುಗಿ ಬ್ಯಾಟ್ಸ್ಮನ್ ತಲೆ ತಿರುಗುವಂತೆ ಮಾಡಿತು. ಇನ್ನು ಪ್ರತಿ ಬಾಲ್ ಆರ್ ಸಿ ಬಿ ಪ್ಲೇಯರ್ ತಿಣುಕಾಡುವಂತೆ ಮಾಡಿತು. ಒಂದ್ ಕಡೆ ಆರ್.ಸಿ.ಬಿ ಆಟಗಾರರು ತಿಣುಕಾಡ್ತಿದ್ರೆ ಇತ್ತ ಆರ್.ಸಿ.ಬಿ ಫ್ಯಾನ್ಸ್ ಪಿಚ್ ಸರಿ ಇಲ್ಲ ಅಂತ ಗೊಣಗಾಡೋಕೆ ಶುರುಮಾಡಿದ್ರು. ಒಟ್ಟಿನಲ್ಲಿ ಬುಗುರಿಯಂತೆ ಬಾಲ್ ತಿರುಗಿತಿದ್ರೆ ಇತ್ತ ಅಭಿಮಾನಿಗಳು ಅಕ್ರೋಶ ಸುಂಟರಗಾಳಿಯಂತೆ ಸುತ್ತುತ್ತಿತ್ತು..! ಇತ್ತ ಕ್ರಿಕೆಟ್ ಪರಿಣತರೂ ಸಹ ಐಪಿಲ್ ಕ್ರಿಕೆಟ್ ಗೆ ಇಂತಹ ಪಿಚ್ ಮಾಡಿರುವುದು ಸರಿ ಇಲ್ಲ ಅಂತ ಹೇಳಿದ್ದಾರೆ.
” This is an unacceptable pitch for an IPL game ” – Kumar Sangakara #CSKvRCB
— Akshay Sharma (@akshaypasu) March 23, 2019
RCB batting order today ?? #CSKvRCB #IPL2019 pic.twitter.com/KYNO7yGmMF
— Chowkidar BALA (@erbmjha) March 23, 2019