IPL ವಿಚಾರವಾಗಿ ಶಾಕಿಂಗ್‌ ಹೇಳಿಕೆ ನೀಡಿದ ಅನಿಲ್‌ ಕುಂಬ್ಳೆ..!

ಐಪಿಎಲ್‌ ೨೦೨೦ ಶುರುವಾಗಲು ಇನ್ನು ಕೇವಲ 10 ದಿನ ಬಾಕಿ ಇದ್ದು, ಈಗಾಗಲೇ ಎಲ್ಲಾ ತಂಡಗಳು ದುಬೈಗೆ ತೆರಳಿ ತಮ್ಮ ಅಭ್ಯಾಸವನ್ನು ಶುರುಮಾಡಿದೆ. ಇನ್ನು ಖಾಲಿ ಸ್ಟೇಡಿಯಂನಲ್ಲಿ ಈ ಬಾರಿ ಐಪಿಎಲ್‌ ನಡೀತಾ ಇದ್ದು,ಎಲ್ಲಾ ತಂಡಗಳು ಭರ್ಜರಿ ತಾಲೀಮು ನಡೆಸುತ್ತಿವೆ. ಇನ್ನು ಇತ್ತಿಚೆಗೆ ಅನಿಲ್‌ ಕುಂಬ್ಳೆ ಆನ್‌ಲೈನ್‌ನಲ್ಲಿ ಮಾತನಾಡುವ ವೇಳೆ ಐಪಿಎಲ್‌ ವಿಚಾರವಾಗಿ ಒಂದು ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಐಪಿಎಲ್‌ನಲ್ಲಿ ಪ್ರತಿತಂಡದಲ್ಲಿ ಭಾರತೀಯ ಹೆಡ್‌ ಕೋಚ್‌ ಇಲ್ಲದೇ ಇರುವುದು ತುಂಬಾ ಬೆಸರವಾಗುತ್ತದೆ. ಅದು ಮುಂದಿನ ದಿನಗಳಲ್ಲಿ ಆಗಬೇಕು ಎಂದು ಹೇಳಿಕೊಂಡಿದ್ದಾರೆ. ಇನ್ನು ಐಪಿಎಲ್‌ನಲ್ಲಿ ಭಾರತೀಯ ಹೆಡ್‌ ಕೋಚ್‌ ಅನಿಲ್‌ ಕುಂಬ್ಳೆ ಏಕೈಕ ವ್ಯಕ್ತಿಯಾಗಿದ್ದು, ಮುಂದಿನ ದಿನಗಳಲ್ಲಿ ಎಲ್ಲಾ ತಂಡದಲ್ಲೂ ಮುಖ್ಯ ಕೋಚ್‌ ಭಾರತೀರಯರಾಗಿರಬೇಕು ಎಂದು ಬಯಸುತ್ತೇನೆ ಎಂದು ಹೇಳಿದ್ದಾರೆ.

ಗೇಲ್‌ ತಂಡದಲ್ಲಿ ಆಡುತ್ತಾರ..?

ಇನ್ನು ಆನ್‌ಲೈನ್‌ ಸಂಭಾಷಣೆ ವೇಳೆ 40 ವರ್ಷದ ಗೇಲ್‌ ಎಲ್ಲಾ ಮ್ಯಾಚ್‌ನಲ್ಲೂ ಆಡುತ್ತಾರ ಎಂದು ಕೇಳಿದ ಪ್ರಶ್ನೆಗೆ ಅನಿಲ್‌ ಕುಂಬ್ಳೆ ಗೇಲ್‌ ತಂಡದಲ್ಲಿ ಕೇವಲ ಆಟಗಾರರನಾಗಿ ಆಡುವುದಿಲ್ಲ, 40 ವರ್ಷದ ಗೇಲ್‌ ತಂಡದ ಮಾರ್ಗದರ್ಶಕರಾಗಿಯೂ ಇರುತ್ತಾರೆ. ಅವರ ಅನುಭವವನ್ನು ತಂಡಕ್ಕಾಗಿ ಕೊಡುತ್ತಾರೆ . ಅಲ್ಲದೇ ಟಾಪ್‌ ಆರ್ಡರ್‌ನಲ್ಲಿ ಈಗಲೂ ಗೇಲ್‌ ರನ್‌ ಮೇಷಿನ್‌ ಎಂದು ಅನಿಲ್‌ ಕುಂಬ್ಳೆ ಹೇಳಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top