IPL ಮತ್ತು ಟೀಂ ಇಂಡಿಯಾದಲ್ಲಿ ಕನ್ನಡಿಗರದ್ದೇ ಕಮಾಲ್

ಆಸ್ಟ್ರೇಲಿಯಾ ಪ್ರವಾಸಕ್ಕೆ ಟೀಂ ಇಂಡಿಯಾ ಪ್ರಕಟವಾಗಿದ್ದು,ಐಪಿಎಲ್ ಮುಗಿಯಿತ್ತಿದ್ದಂತೆ ಟೀಂ ಇಂಡಿಯಾ ಪ್ರವಾಸ ಕೈಗೊಳ್ಳಲಿದೆ.ಮೂರು ಏಕದಿನ,ಮೂರು ಟಿ 20,ನಾಲ್ಕು ಟೆಸ್ಟ್ ಪಂದ್ಯಗಳನ್ನು ಆಡುತ್ತಿದ್ದು,ಇದೀಗ ಬಲಿಷ್ಠ ತಂಡವನ್ನು ಆಯ್ಕೆ ಮಾಡಲಾಗಿದೆ.ಇನ್ನು ಈ ಬಾರಿಯ ಆಸ್ಟ್ರೇಲಿಯಾ ಪ್ರವಾಸದಲ್ಲಿ ಮೂರು ಜನ ಕನ್ನಡಿಗರು ಸ್ಥಾನ ಪಡೆಯುವ ಮೂಲಕ ಐಪಿಎಲ್ ಜೊತೆಯಲ್ಲಿ ಟೀಂ ಇಂಡಿಯಾದಲ್ಲಿ ಕಮಾಲ್ ಮಾಡೋಕೆ ರೆಡಿಯಾಗುತ್ತಿದ್ದಾರೆ. ಈಗಾಗಲೇ ಐಪಿಎಲ್ ನಲ್ಲಿ ಕಮಾಲ್ ಮಾಡುತ್ತಿರೋ ಕನ್ನಡಿಗರಾದ ಮನಿಷ್ ಪಾಂಡೆ,ಕೆಎಲ್ ರಾಹುಲ್ ಮತ್ತು‌ ಮಾಯಾಂಕ್ ಅಗರ್ ವಾಲ್ ಟೀಂ ಇಂಡಿಯಾದಲ್ಲಿ ಆಸ್ಟ್ರೇಲಿಯಾ ಪ್ರವಾಸಕ್ಕೆ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ನೀಡೋ‌ ಮೂಲಕ ತಂಡದ ಗೆಲುವಿಗೆ ಈ ಕನ್ನಡಿಗರು ಪ್ರಮುಖ ಪಾತ್ರವಹಿಸಿದ್ದು ಈ ಮೂಲಕ ಬಿಸಿಸಿಐ ಗಮನ ಸೆಳೆದಿದ್ದು ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.ಇನ್ನು ಕೆಎಲ್ ರಾಹುಲ್ ಮೂರು ಮಾದರಿಯ ಪಂದ್ಯದಲ್ಲಿ ಸ್ಥಾನ ಪಡೆದುಕೊಂಡಿದ್ದು, ಇದರಲ್ಲಿ ಏಕದಿನ ಮತ್ತು ಟಿ20 ಎರಡಕ್ಕೂ ಉಪನಾಯಕನಾಗಿ ಬಡ್ತಿಯನ್ನು ಪಡೆದುಕೊಂಡಿದ್ದಾರೆ.ಇನ್ನು ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ನೀಡೋ ಮೂಲಕ ಟೀಂ ಇಂಡಿಯಾದಲ್ಲಿ ಮಾಯಾಂಕ್ ಅಗರ್ ವಾಲ್ ಕೂಡ ಸ್ಥಾನ ಪಡೆದುಕೊಂಡಿದ್ದು ಮಾಯಾಂಕ್ ಕೂಡ ಮೂರು ಮಾದರಿಯಲ್ಲೂ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಇನ್ನು ಹೈದರಬಾದ್ ತಂಡದ ಪರ ಉತ್ತಮ ಪ್ರದರ್ಶನ ನೀಡ್ತಾ ಇರೋ ಮನೀಶ್ ಪಾಂಡೆ ಕೂಡ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದು, ಏಕದಿನ ಮತ್ತು ಟಿ20ಯಲ್ಲಿ ಸ್ಥಾನಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈ‌ಮೂಲಕ ಮೂರು ಜನ ಕನ್ನಡಿಗರು ಟೀಂ ಇಂಡಿಯಾದಲ್ಲಿ ಕಮಾಲ್ ಮಾಡೋಕೆ ಸಿದ್ಧತೆ ಮಾಡಿಕೊಳ್ತಾ ಇದ್ದಾರೆ. ಐಪಿಎಲ್ ನಲ್ಲಿ ಈ‌ಮೂರು ಜನ‌ಆಟಗಾರರು ಉತ್ತಮ‌ ಪ್ರದರ್ಶನ ನೀಡುತ್ತಿದ್ದು,ಈ ಬಾರಿ ಬಿಸಿಸಿಐ ತಂಡದ ಆಯ್ಕೆಯಲ್ಲಿ ಉತ್ತಮ ನಿರ್ಧಾರವನ್ನು‌ ತೆಗೆದುಕೊಂಡಿದೆ ಅಂತಾನೇ ಹೇಳಬಹುದು.

ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿರೋ ಈ‌ ಮೂರು ಕನ್ನಡಿಗರು ತಂಡದಲ್ಲಿ ಯಾವ ರೀತಿ ಕಮಾಲ್ ಮಾಡಬಹುದು ಕಾಮೆಂಟ್ ಮಾಡಿ ತಿಳಿಸಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top