IPL ಬಿಟ್ಟು ಕಾಶ್ಮೀರ ಪ್ರವಾಸದಲ್ಲಿರೋ ಸುರೇಶ್‌ ರೈನಾ..!

ಮಿಸ್ಟರ್‌ ಐಪಿಎಲ್‌ ಈ ಬಾರಿ ಐಪಿಎಲ್‌ನಿಂದ ವೈಯುಕ್ತಿಕ ಕಾರಣಗಳನ್ನು ನೀಡಿ ಹೊರ ಬಂದಿದ್ದು, ಭಾರತಕ್ಕೆ ಮರಳಿರೋದು ಎಲ್ಲರಿಗೂ ಗೊತ್ತಿರೋ ವಿಷ್ಯ, ಆದ್ರೆ ಸುರೇಶ್‌ ರೈನಾ ಇದೀಗ ಏನ್‌ ಮಾಡ್ತಾ ಇದ್ದಾರೆ ಮತ್ತೆ ಐಪಿಎಲ್‌ಗೆ ವಾಪಾಸ್‌ ಆಗ್ತಾರ ಅಂತ ಎಲ್ಲಾ ಕೇಳ್ತಾ ಇದ್ರು, ಇನ್ನು ಸುರೇಶ್‌ ರೈನಾ ಕೂಡ ಅವಕಾಶವಾದ್ರೆ ಮತ್ತೆ ಐಪಿಎಲ್‌ನಲ್ಲಿ ಭಾಗವಹಿಸುವುದಾಗಿ ಹೇಳಿದ್ರು, ಸೋಶಿಯಲ್‌ ಮೀಡಿಯಾದಲ್ಲಿ ತಾವು ಕ್ರಿಕೆಟ್‌ ಪ್ರಾಕ್ಟಿಸ್‌ ಮಾಡುವ ವಿಡಿಯೋ,ಫೋಟೋಗಳನ್ನು ಶೇರ್‌ ಮಾಡುವು ಮೂಲಕ ಅಭಿಮಾನಿಗಳಿಗೆ ಖುಷಿ ನೀಡುತ್ತಿದ್ದರು.

ಆದ್ರೀಗ ಸುರೇಶ್‌ ರೈನಾ ಐಪಿಎಲ್‌ನಿಂದ ದೂರವಿದ್ದು ಕಾಶ್ಮೀರ ಪ್ರವಾಸದಲ್ಲಿದ್ದಾರೆ. ಸುರೇಶ್‌ ರೈನಾ ಕಾಶ್ಮೀರ ಕ್ರಿಕೆಟ್‌ ಅಭಿವೃದ್ಧಿ ಬಗ್ಗೆ ಮಾತನಾಡಿದ್ರು, ಇದೀಗ ಪ್ರವಾಸದ ವೇಳೆ ಕ್ರಿಕೆಟ್‌ ಕ್ಲಬ್ಸ್‌ ಮತ್ತು ಸೇನಾ ಶಿಬಿರಗಳಿಗೆ ಭೇಟಿ ನೀಡಿದ್ದಾರೆ. ಸದ್ಯ ಈ ಫೋಟೋಗಳನ್ನು ಶೇರ್‌ ಮಾಡಿಕೊಂಡಿದ್ದು ಸಂತಸ ವ್ಯಕ್ತ ಪಡಿಸಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top