IPLನ ಪಾಕಿಸ್ತಾನ್‌ ಆಟಗಾರರನ್ನು ಆಡಿಸಿ ಪ್ಲೀಸ್‌

ಐಪಿಎಲ್‌ ಭಾರತದ ಪಾಲಿಗೆ ಒಂದು ರೀತಿಯಲ್ಲಿ ಹಬ್ಬ, ಅದು ಒಂದು ರೀತಿಯಲ್ಲಿ ಜಾತ್ರೆ..ಇಲ್ಲಿ ಕ್ರಿಕೆಟ್‌ ಪ್ಲೇಯರ್‌ಗಳು ತಮ್ಮ ಪ್ರತಿಭೆಯನ್ನು ತೋರಿಸಲು ಇರೋ ಒಂದೊಳ್ಳೇ ವೇದಿಕೆ, ಅದು ಭಾರತೀಯ ಆಟಗಾರರಿರಲಿ, ವಿದೇಶಿ ಆಟಗಾರರಿರಲಿ, ತಮ್ಮ ಪ್ರತಿಭೆಯನ್ನು ತೋರಿಸೋ ಮೂಲಕ ಹಣ, ಜನಪ್ರಿಯತೆ ಎರಡು ಸಿಗೋ ವೇದಿಕೆ ಅಂತಾನೇ ಹೇಳಬಹುದು, ಈ ಒಂದು ಟೂರ್ನಿಯಿಂದಾಗಿ ಅದೆಷ್ಟೋ ಪ್ರತಿಭೇಗಳು ಬೆಳಕಿಗೆ ಬರುವಂತಾಗಿದೆ. ಪ್ರಪಂಚದಾದ್ಯಂತ ಅಭಿಮಾನಿಗಳಿದ್ದು, ತಮ್ಮ ನೆಚ್ಚಿನ ತಂಡ ಮತ್ತು ನೆಚ್ಚಿನ ಆಟಗಾರನ ಆಟವನ್ನು ನೋಡಲು ಹಾತೋರೆಯುತ್ತಿದ್ದಾರೆ. ಇನ್ನು ಈ ಬಾರಿಯ ಐಪಿಎಲ್‌ ಕೊರೋನಾ ಹಾವಳಿಯ ನಡುವೆಯೂ ಯುಎಇಯಲ್ಲಿ ಯಶಸ್ವಿಯಾಗಿ ನಡೆಸುವ ಮೂಲಕ ಕೊನೆಯ ಹಂತಕ್ಕೆ ಬಂದು ತಲುಪಿದೆ. ಈ ಬಾರಿ ಐಪಿಎಲ್‌ ಕಪ್‌ ಯಾರು ಗೆಲ್ಲಲಿದ್ದಾರೆ ಅನ್ನೋ ಕುತೂಹಲ ಈಗಾಗಲೇ ಹೆಚ್ಚಾಗಿದೆ. ಇದೀಗ ಐಪಿಎಲ್‌ ಕೊನೆಯ ಹಂತಕ್ಕೆ ಬಂದಿರುವ ವೇಳೆಯಲ್ಲಿ ಪಾಕ್‌ ಮಾಜಿ ಆಟಗಾರ ವಾಸಿಂ ಅಕ್ರಮ ಐಪಿಎಲ್‌ ಬಗ್ಗೆ ಹೇಳಿಕೆಯೊಂದನ್ನು ನೀಡಿದ್ದಾರೆ. ಐಪಿಎಲ್‌ನಲ್ಲಿ ಪ್ರಪಂಚದ ನಾನಾ ದೇಶಗಳ ಕ್ರಿಕೆಟ್‌ ಆಟಗಾರರು ಪಾಲ್ಗೋಳಲ್ಲು ಅವಕಾಶವನ್ನು ಕಲ್ಪಿಸಿಕೊಡಲಾಗಿದೆ. ಆದ್ರೆ ಪಾಕ್‌ ಆಟಗಾರರಿಗೆ ಐಪಿಎಲ್‌ನಲ್ಲಿ ಆಡುವ ಅವಕಾಶವನ್ನು ನಿಷೇಧಿಸಲಾಗಿದೆ. ಐಪಿಎಲ್‌ ಮೊದಲ ಅವೃತಿಯಲ್ಲಿ ಪಾಕ್‌ ಆಟಗಾರರು ಆಡಿದ್ದು ಬಿಟ್ಟರೆ ಉಳಿದ ಯಾವುದೇ ಐಪಿಎಲ್‌ ಸೀಸನ್‌ನಲ್ಲೂ ಪಾಕ್‌ ಆಟಗಾರರು ಆಡಿಲ್ಲ, ಇದಕ್ಕೆ ಎರಡು ದೇಶಗಳ ನಡುವೆ ಇರೋ ಒಂದಿಷ್ಟು ಆತರಿಂಕ ಸಮಸ್ಯೆಯಿಂದಾಗಿ ಪಾಕ್‌ ಆಟಗಾರರಿಗೆ ಐಪಿಎಲ್‌ನಲ್ಲಿ ಆಡಲು ಅವಕಾಶವನ್ನು ಕಲ್ಪಿಸಿಕೊಡಲು ಸಾಧ್ಯವಾಗುತ್ತಿಲ್ಲ, ಆದ್ರೆ ಇದೀಗ ಈ ವಿಚಾರವಾಗಿ ಪಾಕಿಸ್ತಾನದ ಮಾಜಿ ಆಟಗಾರ ವಾಸಿಂ ಅಕ್ರಂ ತಮ್ಮ ಹೇಳಿಕೆಯೊಂದನ್ನು ನೀಡಿದ್ದಾರೆ.

ಪಾಕಿಸ್ತಾನದ ಆಟಗಾರರು ಐಪಿಎಲ್‌ನಲ್ಲಿ ಆಡುವಂತಾಗಬೇಕು, ಆಗ ಪಾಕ್‌ನಲ್ಲಿ ಇರೋ ಕ್ರಿಕೆಟ್‌ ಪ್ರತಿಭೆಗಳು ಬೆಳಕಿಗೆ ಬರಲು ಸಾಧ್ಯವಾಗುತ್ತದೆ, ಜೊತೆಗೆ ಉತ್ತಮ ಪ್ರದರ್ಶನವನ್ನು ತೋರಲು ಇದೊಂದು ಉತ್ತಮ ವೇದಿಕೆಯಾಗಿದೆ ಹೀಗಾಗಿ ಪಾಕಿಸ್ತಾನದ ಆಟಗಾರರು ಐಪಿಎಲ್‌ನಲ್ಲಿ ಆಡುವಂತೆ ಆಗಬೇಕು, ಅವರಿಗೆ ಅವಕಾಶ ಕಲ್ಪಿಸಿ ಕೊಡಬೇಕು ಅನ್ನೋ ಮಾತುಗಳುನ್ನು ಹೇಳಿದ್ದು, ಇದರ ಜೊತೆಯಲ್ಲಿ ಪಾಕ್‌ ಟಿ ೨೦ ಲೀಗ್‌ನಲ್ಲೂ ಸಹ ಭಾರತೀಯ ಆಟಗಾರರು ಆಡಬೇಕು ಅಂತನೂ ಹೇಳಿದ್ದಾರೆ. ಆದ್ರೆ ಬಿಸಿಸಿಐ ನಿಯಮದ ಪ್ರಕಾರ ಭಾರತೀಯ ಕ್ರಿಕೆಟ್‌ ಆಟಗಾರರು ಬಿಸಿಸಿಐಗೆ ಅಧೀನಕ್ಕೆ ಒಳಪಡದೆ ಇರೋ ಟೂರ್ನಿಯಲ್ಲಿ ಆಡಲು ಕೂಡ ಅವಕಾಶವಿರುವುದಿಲ್ಲ.

ಒಟ್ಟಿನಲ್ಲಿ ಐಪಿಎಲ್‌ ಅನ್ನೋದು ತಮ್ಮ ಪ್ರತಿಭೆಯನ್ನು ತೋರಿಸಲು ಉತ್ತಮವಾದ ವೇದಿಕೆಯಾಗಿದ್ದು, ಈ ನಿಟ್ಟಿನಲ್ಲಿ ಇದೀಗ ಪಾಕಿಸ್ತಾನದ ಆಟಗಾರರಿಗೆ ಐಪಿಎಲ್‌ನಲ್ಲಿ ಅವಕಾಶ ಸಿಗಬೇಕು ಅನ್ನೋ ಮಾತುಗಳನ್ನು ವಾಸಿಮ್‌ ಅಕ್ರಂ ಅವರು ಹೇಳಿದ್ದಾರೆ.

ನಿಮ್ಮ ಪ್ರಕಾರ ವಾಸಿಂ ಅಕ್ರಂ ಹೇಳಿದ ರೀತಿ ಪಾಕ್‌ ಆಟಗಾರರಿಗೆ ಐಪಿಎಲ್‌ ಟೂರ್ನಿಯಲ್ಲಿ ಆಡಲು ಅವಕಾಶ ಕೊಡಬೇಕಾ. ಭಾರತೀಯ ಕ್ರಿಕೆಟ್‌ ಆಟಗಾರರ ವಿಚಾರದಲ್ಲಿ ಬೇರೆ ಬೇರೆ ಟೂರ್ನಿಗಳಲ್ಲಿ ಆಡುವ ಸಲುವಾಗಿ ಬಿಸಿಸಿಐ ನಿಯಮವನ್ನು ಸಡಿಲ ಗೊಳಿಸಬೇಕ ನೀವ್‌ ಏನ್‌ ಹೇಳ್ತೀರಾ ಕಾಮೆಂಟ್‌ ಮಾಡಿ ತಿಳಿಸಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top