IPLನಲ್ಲಿ ವಿರಾಟ್‌ ಕೊಹ್ಲಿಗೆ ಇವನದ್ದೇ ಟೆನ್ಶನ್‌

ವಿರಾಟ್‌ ಕೊಹ್ಲಿ ಕ್ರಿಕೆಟ್‌ ಜಗತ್ತಿನ ರನ್‌ ಮಷಿನ್‌, ಯಾವುದೇ ಬೌಲರ್‌ ಇರಲಿ ಅವರು ಹಾಕೋ ಬಾಲ್‌ಗೆ ರನ್‌ ಹೊಳೆ ಹರಿಸೋ ರನ್‌ ಸರದಾರ, ವಿರಾಟ್‌ ವಿಕೆಟ್‌ ಪಡೆಯಬೇಕು ಅಂದ್ರೆ ಬೌಲರ್‌ಗಳು ಇನ್ನಿಲ್ಲದ ಹರಸಾಹಸವನ್ನೇ ಪಡ್ತಾರೆ, ವಿರಾಟ್‌ ಕೊಹ್ಲಿ ಕ್ರಿಸ್‌ನಲ್ಲಿ ಹೆಚ್ಚು ಹೊತ್ತು ಇದ್ದಾರೆ ಅಂದ್ರೆ ಎದುರಾಳಿ ತಂಡಕ್ಕೆ ನಡುಕ ಶುರುವಾಗಿ ಬಿಡುತ್ತೆ. ವಿರಾಟ ಆ ಮಟ್ಟಕ್ಕೆ ಫಿಲ್ಡ್‌ನಲ್ಲಿ ಅಬ್ಬರಿಸುತ್ತಾರೆ. ತಾವು ಫಿಲ್ಡ್‌ಗೆ ಇಳಿದ್ರು ಅಂದ್ರೆ ಒಂದಾದರು ದಾಖಲೆಯನ್ನು ಜೊತೆಯಲ್ಲಿ ತೆಗೆದುಕೊಂಡು ಹೋಗೋದು ಅವರ ಜಾಯಮಾನ, ಅಂತಹ ಕ್ರಿಕೆಟ್‌ ಜಗತ್ತಿನ ಚಕ್ರವರ್ತಿ, ರನ್‌ ಮಷಿನ್‌ಗೆ ಐಪಿಎಲ್‌ನಲ್ಲಿ ಒಬ್ಬ ವಿಲನ್‌ ಇದ್ದಾನೆ ಅಂದ್ರೆ ನೀವು ನಂಬಲೇ ಬೇಕು ಆ ಒಬ್ಬ ವ್ಯಕ್ತಿ ವಿರಾಟ್‌ ಕೊಹ್ಲಿಯನ್ನು ಇನ್ನಿಲ್ಲದಂತೆ ಕಾಡುತ್ತಿದ್ದಾನೆ.

ಇಂಡಿಯಾದಲ್ಲಿ ಆಗಲಿ, ವಿದೇಶಿ ನೆಲದಲ್ಲಿ ಆಗಲಿ, ಯಾವುದೇ ಬೌಲರ್‌ ಇರಲಿ ಅಬ್ಬರಿಸೋ ವಿರಾಟ್‌, ಆ ಒಬ್ಬ ಬೌಲರ್‌ ಮುಂದೆ ಮಡಿಯೂರಿ ಕುಳಿತು ಬಿಡುತ್ತಾರೆ. ರನ್‌ ಹೊಳೆ ಹರಿಸೋ ಸಮಯದಲ್ಲಿ ಆ ವ್ಯಕ್ತಿ ಬೌಲಿಂಗ್‌ಗೆ ಬಂದ್ರೆ ಸಾಕು ವಿರಾಟ್‌ ಆ ವ್ಯಕ್ತಿಯ ಬೌಲಿಂಗ್‌ ಅನ್ನು ನಿಧಾನವಾಗಿ ಆಡಿ ಮುಗಿಸಿ ಬಿಡೋಣ ಅನ್ನೋ ಮನಸ್ಸಿಗೆ ಬಂದು ಬಿಡುತ್ತಾರೆ. ಇನ್ನು ವಿರಾಟ್‌ಗೆ ಕಾಡುತ್ತಿರೋ ಆ ವ್ಯಕ್ತಿ ಬೇರೆಯಾರು ಅಲ್ಲ ವಿರಾಟ್‌ ಜೊತೆ ಟೀಂ ಇಂಡಿಯಾದಲ್ಲಿ ಆಡಿರೋ , ಸದ್ಯ ಸನ್‌ರೈಸರ್ಸ್‌ ಹೈದರಬಾದ್‌ ಬರ ಭರ್ಜರಿ ಪ್ರದರ್ಶನ ನೀಡ್ತಾ ಇರೋ ಸ್ವಿಂಗ್‌ ಬೌಲರ್‌ ಅಂತಾನೇ ಫೇಮಸ್‌ ಆಗಿರೋ ಸಂದೀಪ್‌ ಶರ್ಮಾ.

ಈ ಬಾರಿಯ ಐಪಿಎಲ್‌ನಲ್ಲಿ ವಿರಾಟ್‌ ಕೊಹ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ಕೊಂಚ ಎಡವಿದ್ರು, ತಾವು ಕ್ರಿಸ್‌ನಲ್ಲಿ ಇರೋವಷ್ಟು ಸಮಯ ಬೌಲರ್‌ಗಳಿಗೆ ನಡುಕ ಹುಟ್ಟಿಸಿದ್ದಾರೆ. ಆದ್ರೆ ಸಂದೀಪ್‌ ಶರ್ಮಾ ಬೌಲಿಂಗ್‌ನಲ್ಲಿ ಮಾತ್ರ ರನ್‌ಗಳಿಸಲು ಕಷ್ಟಪಡುವಂತಹ ಪರಿಸ್ಥಿತಿ ಉಂಟಾಗಿದೆ. ಈ ಬಾರಿಯ ಐಪಿಎಲ್‌ನಲ್ಲಿ ಸನ್‌ರೈಸರ್ಸ್‌ ಹೈದರಬಾದ್‌ ವಿರುದ್ಧದ ಎರಡನೇ ಪಂದ್ಯದಲ್ಲಿ ವಿರಾಟ್‌ ಸಂದೀಪ್‌ ಶರ್ಮಾಗೆ ವಿಕೆಟ್‌ ಒಪ್ಪಿಸೋ ಮೂಲಕ 2013ರಿಂದ ಇಲ್ಲಿಯ ವರೆಗೂ ವಿರಾಟ್‌ ಸಂದೀಪ್‌ ಶರ್ಮಾ ಅವರಿಗೆ ಒಟ್ಟು 7 ಬಾರಿ ವಿಕೆಟ್‌ ಒಪ್ಪಿಸೋ ಮೂಲಕ ಸಂದೀಪ್‌ ಶರ್ಮಾ ವಿರಾಟ್‌ ವಿರುದ್ಧ ಮೇಲುಗೈ ಸಾಧಿಸೋ ಹಾಗಿ ಮಾಡಿದ್ದು , ಸದ್ಯ ಐಪಿಎಲ್‌ ಇತಿಹಾಸದಲ್ಲಿ ಒಬ್ಬ ಬೌಲರ್‌ ಒಬ್ಬ ಬ್ಯಾಟ್ಸ್‌ಮನ್‌ ಅನ್ನು ಅತಿಹೆಚ್ಚು ಬಾರಿ ಔಟ್‌ ಮಾಡಿರೋ ದಾಖಲೆಯನ್ನು ಸಂದೀಪ್‌ ಶರ್ಮಾ ಮಾಡಿದ್ದಾರೆ.

2013ರಿಂದ ವಿರಾಟ್‌ ಕೊಹ್ಲಿ ಸಂದೀಪ್‌ ಶರ್ಮಾ ಅವರ ಒಟ್ಟು 50 ಎಸೆತಗಳನ್ನು ಎದುರಿಸಿದ್ದು, ಇದರಲ್ಲಿ 69ರನ್‌ಗಳನ್ನು ಮಾತ್ರ ಕಲೆಹಾಕುವಲ್ಲಿ ವಿರಾಟ್‌ ಯಶಸ್ವಿಯಾಗಿದ್ದಾರೆ. 50 ಎಸೆತದಲ್ಲಿ 21 ಟಾಟ್‌ಬಾಲ್‌ ಆಡಿದ್ದು, 10 ಬೌಂಡರಿ 1 ಸಿಕ್ಸರ್‌ ಸಿಡಿಸಿ 138 ಸ್ಟ್ರೈಕ್‌ರೇಟ್‌ ಜೊತೆಯಲ್ಲಿ 7 ಬಾರಿ ಸಂದೀಪ್‌ ಶರ್ಮಾಗೆ ವಿಕೆಟ್‌ ಒಪ್ಪಿಸಿದ್ದಾರೆ. ಈ ಎಲ್ಲಾ ಲೆಕ್ಕಾಚಾರಗಳನ್ನು ನೋಡಿದಾಗ ವಿರಾಟ್‌ಗೆ ಸಂದೀಪ್‌ ಶರ್ಮಾ ಭಯ ಕಾಡುತ್ತಿದೆಯಾ ಅನ್ನೋ ಪ್ರಶ್ನೇ ಉದ್ಭವಾಗುತ್ತದೆ.

ಇನ್ನು ಇಂದಿನ ಪಂದ್ಯದಲ್ಲಿ ಡೇವಿಡ್‌ ವಾರ್ನರ್‌ ಸಂದೀಪ್‌ ಶರ್ಮಾ ಮೂಲಕ ವಿರಾಟ್‌ ಕೊಹ್ಲಿಯನ್ನು ಟಾರ್ಗೆಟ್‌ ಮಾಡೋ ಪ್ಲಾನ್‌ ಕೂಡ ಮಾಡಿಕೊಂಡಿದ್ದು, ಇದಕ್ಕೆ ಉತ್ತರವಾಗಿ ವಿರಾಟ್‌ ಕೊಹ್ಲಿ ಸಂದೀಪ್‌ ಶರ್ಮಾರನ್ನು ಟಾರ್ಗೆಟ್‌ ಮಾಡ್ತಾರ ಕಾದುನೋಡ ಬೇಕು.

ನಿಮ್ಮ ಪ್ರಕಾರ ಸಂದೀಪ್‌ ಶರ್ಮಾ ಬೌಲಿಂಗ್‌ನಲ್ಲಿ ವಿರಾಟ್‌ ಕೊಹ್ಲಿ ವೀಕ್‌ ಆಗಿದ್ದಾರಾ, ಇಂದಿನ ಪಂದ್ಯದಲ್ಲಿ ವಿರಾಟ್‌ ಸಂದೀಪ್‌ ಅನ್ನು ಟಾರ್ಗೆಟ್‌ ಮಾಡ್ತಾರಾ ನೀವ್‌ ಏನ್‌ ಹೇಳ್ತೀರಾ ಕಾಮೆಂಟ್‌ ಮಾಡಿ ತಿಳಿಸಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top