IPLನಲ್ಲಿ ಚೆನ್ನೈ ಟೀಂ ಮೊದಲು ಆಡೋದು ಡೌಟ್‌..!

ಐಪಿಎಲ್‌ ಶುರುವಾಗಲು ಇನ್ನು ಕೇವಲ ೨೦ ದಿನಗಳು ಇರಬೇಕಾದ್ರೆ, ಐಪಿಎಲ್‌ಗೆ ಒಂದರ ಹಿಂದೆ ಒಂದು ಶಾಕಿಂಗ್‌ ಸುದ್ದಿಗಳು ಬರ್ತಾ ಇದೆ, ಒಂದು ಕಡೆ ಎಲ್ಲಾ ಸುರಕ್ಷತೆಗಳ ನಡುವೆ ಚೆನ್ನೈ ಟೀಂಗೆ ಕೊರೋನಾ ಪಾಸಿಟಿವ್‌ ವಕ್ಕರಿಸಿದ್ರೆ, ಇತ್ತ ಸುರೇಶ್‌ ರೈನಾ ಐಪಿಎಲ್‌ ಶುರುವಾಗು ಮೊದಲೇ ಟೂರ್ನಿಯಿಂದ ಹೊರ ಬಂದಿದ್ದಾರೆ. ಇದೀಗ ಚೆನ್ನೈ ಸೂಪರ್‌ ಕಿಂಗ್ಸ್‌ ಅಭಿಮಾನಿಗಳಿಗೆ ಮತ್ತೊಂದು ಶಾಕಿಂಗ್‌ ಸುದ್ದಿ ಬಂದಿದೆ, ಐಪಿಎಲ್‌ ಸೆಪ್ಟೆಂಬರ್‌ ೧೯ರಿಂದ ಶುರುವಾಗಲಿದ್ದು, ಐಪಿಎಲ್‌ ಪ್ರಾರಂಭಿಕ ಪಂದ್ಯಗಳಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ಮೈದಾನಕ್ಕೆ ಇಳಿಯಲು ಸಾಧ್ಯವಿಲ್ಲ, ಸದ್ಯ ಐಪಿಎಲ್‌ ಟೂರ್ನಿಯ ಟೈಂ ಟೇಬಲ್‌ ಹೊರಬಂದಿಲ್ಲವಾದರು, ಟೂರ್ನಿ ಟೈಂ ಟೇಬಲ್‌ ಬಂದರೆ ಅದರಲ್ಲಿ ಅಚ್ವರಿ ಬದಲಾವಣೆ ಬರೋದು ಖಂಡಿತ, ಇದರಿಂದಾಗಿ ಪ್ರಾರಂಭಿಕ ಪಂದ್ಯಗಳಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಮೈದಾನಕ್ಕೆ ಇಳಿಯೋದು ಅನುಮಾನವಾಗಿ.

ಚೆನ್ನೈ ತಂಡದಲ್ಲಿ ಕೊರೋನಾ ಪಾಸಿಟಿವ್‌ ಬಂದ ಹಿನ್ನೆಲೆಯಲ್ಲಿ ತಂಡವನ್ನು ಇನ್ನಷ್ಟು ದಿನ ಕ್ವಾರಂಟೇನ್‌ನಲ್ಲಿ ಇಡಲು ಐಪಿಎಲ್‌ ಕಮಿಟಿ ನಿರ್ಧರಿಸಿರುವ ಹಿನ್ನೆಲೆಯಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ಅಭಿಮಾನಿಗಳಿಗೆ ಶಾಕ್‌ ನೀಡಿದೆ. ಸದ್ಯ ಐಪಿಎಲ್‌ ಶುರುವಾಗುವ ಮೊದಲೇ ಅನೇಕ ವಿಘ್ನಗಳು ಉಂಟಾಗಿದ್ದು,ಮುಂದಿನ ದಿನಗಳಲ್ಲಿ ಯಾವೆಲ್ಲಾ ಬದಲಾವಣೆಯಾಗಲಿದೆ ಕಾದುನೋಡಬೇಕು.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top