IPLಗೆ ಹೋಗದಿರಲು ಹರ್ಭಜನ್‌ ಕೊಟ್ಟ ಕಾರಣ ಏನು ಗೊತ್ತಾ..?

ಐಪಿಎಲ್‌ ಶುರುವಾಗಲು ಇನ್ನು ಕೇವಲ 14 ದಿನಗಳು ಬಾಕಿ ಇದೆ. ಹೀಗಿರುವಾಗಲೇ ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಒಂದ ಹಿಂದೆ ಒಂದು ಶಾಕಿಂಗ್‌ ನ್ಯೂಸ್‌ಗಳು ಬರ್ತಾ ಇದೆ. ನಿನ್ನೆ ಹರ್ಭಜನ್‌ ಸಿಂಗ್‌ ಈ ಬಾರಿಯ ಐಪಿಎಲ್‌ನಲ್ಲಿ ಭಾಗವಹಿಸುವುದಿಲ್ಲ ಎಂದು ವೈಯುಕ್ತಿಕ ಕಾರಣ ನೀಡಿ ಐಪಿಎಲ್‌ನಿಂದ ಹೊರ ಉಳಿದಿದ್ರು, ಇನ್ನು ಬಜ್ಜಿ ಯಾಕೆ ಐಪಿಎಲ್‌ನಿಂದ ಹೊರ ಉಳಿದ್ರು, ಚೆನ್ನೈ ಟೀಂನಲ್ಲಿ ಎಲ್ಲವೂ ಸರಿ ಇಲ್ವಾ ಅನ್ನೋ ಮಾತುಗಳು ಸಹ ಕೇಳಿ ಬರ್ತಾ ಇತ್ತು, ಹೀಗಿರುವಾಗಲೇ ಇದೀಗ ಹರ್ಭಜನ್‌ ಸಿಂಗ್‌ ಐಪಿಎಲ್‌ನಿಂದ ದೂರ ಉಳಿಯಲು ಕಾರಣವನ್ನು ತಿಳಿಸಿದಿದ್ದಾರೆ. ಐಪಿಎಲ್‌ನಿಂದ ಹೊರಗುಳಿದಿರುವ ಬಗ್ಗೆ ತಮ್ಮ ಟ್ವೀಟರ್‌ನಲ್ಲಿ ಹೇಳಿಕೊಂಡಿರೋ ಭಜ್ಜಿತಾಯಿಯ ಆರೋಗ್ಯ ಸರಿ ಇಲ್ಲದ ಕಾರಣ ಐಪಿಎಲ್‌ನಲ್ಲಿ ಭಾಗವಹಿಸುತ್ತಿಲ್ಲ ಎಂದು ಹೇಳಿದ್ದಾರೆ.

ತಮ್ಮ ಟ್ವೀಟರ್‌ನಲಿ ʻ ವೈಯುಕ್ತಿಕ ಕಾರಣದಿಂದ ಈ ವರ್ಷದ ಐಪಿಎಲ್‌ನಲ್ಲಿ ನಾನು ಆಡುತ್ತಿಲ್ಲ. ಸಂಕಷ್ಟದಲ್ಲಿ ಕುಟುಂಬದ ಜೊತೆ ಇರಲು ಇಷ್ಟು ಪಡುತ್ತೇನೆ. ಸಿಎಸ್‌ಕೆ ಮ್ಯಾನೇಜ್‌ಮೆಂಟ್‌ ಬೆಂಬಲವನ್ನು ನೀಡಿದೆ ಟೂರ್ನಿಯಲ್ಲಿ ಸಿಎಸ್‌ಕೆ ತಂಡಕ್ಕೆ ಶುಭವಾಗಲಿ ಎಂದು ಹಾರೈಸಿದ್ದಾರೆ. ಇನ್ನು ಈ ವಿಚಾರವಾಗಿ ಸಿಎಸ್‌ಕೆ ಸಿಇಒ ಕಾಶಿ ವಿಶ್ವನಾಥನ್‌ ಹರ್ಭಜನ್‌ ಐಪಿಎಲ್‌ನಲ್ಲಿ ಲಭ್ಯವಿಲ್ಲದರ ಬಗ್ಗೆ ಮಾಹಿತಿ ನೀಡಿದ್ದು, ಸಂಕಷ್ಟದ ಸಮಯದಲ್ಲಿ ಭಜ್ಜಿ ತೆಗೆದುಕೊಂಡ ನಿರ್ಧಾರವನ್ನು ಬೆಂಬಲಿಸುವುದಾಗಿ ಹೇಳಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top