ಬೀಯರ್ ಬಗ್ಗೆ ಇದೀಗ ಇಂಟ್ರಸ್ಟಿಂಗ್ ವಿಷಯವೊಂದು ಹೊರಬಿದ್ದಿದೆ.!

ಡ್ರಿಂಕ್ಕಿಂಗ್ ಅಲ್ಕೊಹಾಲ್ ಇಸ್ ಇಂಜುರಿಯಸ್ ಟು ಹೆಲ್ತ್ ಅಂತಾರೆ. ಅದರಂತೆ ಬಾಟಲ್ ಮೇಲೂ ಅದನ್ನೆ ಬರೆದಿರ‍್ತಾರೆ. ಹೀಗಾಗಿ ಮದ್ಯ ಸೇವನೆ ಕೆಟ್ಟ ಅಭ್ಯಾಸ ಅನ್ನೋದು ಜನಜನೀತ. ಆದ್ರೆ ಬೀಯರ್ ಬಗ್ಗೆ ಇದೀಗ ಇಂಟ್ರಸ್ಟಿಂಗ್ ವಿಷಯವೊಂದು ಹೊರಬಿದ್ದಿದೆ. ಅದೇನಂತ ಹೇಳ್ತಿವಿ ಓದಿ.

ಬಿಯರ್ ಕುಡಿತ ಅನ್ನೊದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತೆ. ಹೀಗಾಗಿ ಕುಡಿತ ಬೇಡ ಅನ್ನೋದು ಬಹುತೇಕ ಎಣ್ಣೆ ವಿರೋಧಿಗಳ ಏಕಮಾತ್ರ ಸ್ಲೋಗನ್. ಆದ್ರೆ ಇದೀಗ ಎಣ್ಣೆ ಪ್ರಿಯರಿಗೆ ಮತ್ತೊಂದು ಖುಷಿ ಪಡುವ ಸುದ್ದಿ ಸಿಕ್ಕಿದೆ. ಆದೇನಪ್ಪ ಅಂದ್ರೆ ಬೀಯರ್ ಕುಡಿಯೋದ್ರಿಂದ ದೇಹಕ್ಕೆ ರಿಲ್ಯಾಕ್ಸ್ ಸಿಗುತ್ತಂತೆ. ಈ ಹಿಂದೆನೇ ಬಿಯರ್ ನಿಂದ ಕಿಡ್ನಿ ಸ್ಟೊನ್ ಗಳು ಕರುಗುತ್ತವೆ ಅನ್ನೋ ಮಾಹಿತಿ ಸಿಕ್ಕಿತ್ತು. ಇದೀಗ ಅದಕ್ಕೆ ಮತ್ತೊಂದು ಬೆನೆಫಿಟ್ ಅನ್ನೊ ಹಾಗೆ ಬಿಯರ್ ಕುಡಿಯೋದ್ರಿಂದ ದೇಹದ ನೋವು ಮಾಯವಾಗುತ್ತಂತೆ. ಅಂದಹಾಗೆ ಬಿಯರ್ ಪೇನ್ ಕಿಲ್ಲರ್ ಆಗಿ ಕಾರ‍್ಯ ನಿರ್ವಹಿಸುತ್ತಂತೆ.

ಒಮ್ಮೊಮ್ಮೆ ಕೆಲವೊಂದು ಭಾರದ ಕೆಲಸ ಮಾಡಿದಾಗ ಅಥವಾ ಬಾಡಿ ಪೇನ್ ಬಂದಾಗ. ನಾರ್ಮಲಾಗಿ ನಾವೆಲ್ಲಾ ಪ್ಯಾರಾಸಿಟಮೊಲ್ ಟಾಬ್ಲೆಟ್ ತೆಗೆದುಕೊಳ್ತಿವಿ. ಇದರಿಂದ ನೋವು ನಿವಾರಣೆಯಾಗಿ ನಿದ್ದೆ ಬರುತ್ತೆ ಜೊತೆಗೆ ದೇಹಾಲ್ಯಾಸ ಹೋಗುತ್ತೆ. ಆದ್ರೆ ಇದೀಗ ಬಿಯರ್ ಕುಡಿಯೋದ್ರಿಂದನೂ ಈ ನೋವು ಕಡಿಮೆ ಮಾಡಿಕೊಳ್ಳಬಹುದು ಅಂತ ಅಧ್ಯಯನವೊಂದು ಹೇಳಿದೆ. ಗ್ರೀನ್ ವಿಚ್ ಯುನಿವರ್ಸಿಟಿ ಸಂಶೋಧಕರು ಬಿಯರ್‌ನಿಂದಾಗುವ ಆರೋಗ್ಯಕರ ಲಾಭಗಳ ಬಗ್ಗೆ ಸಂಶೋಧನೆ ನಡೆಸಿದ್ದಾರೆ. ದೇಹದಲ್ಲಿ ನೋವು ಇದ್ದಾಗ ಅಲ್ಪ ಪ್ರಮಾಣದಲ್ಲಿ ಮದ್ಯ ಸೇವನೆ ಮಾಡಿದ್ರೆ ರಕ್ತಕ್ಕೆ ೦.೦೦8 ರಷ್ಟು ಅಲ್ಕೊಹಾಲ್ ಸೇರುತ್ತದೆ. ಇದು ಬಾಡಿಯಲ್ಲಿ ಸೇರಿಕೊಂಡಾಗ ನೋವು ನಿವಾರಕವಾಗಿ ಕಾರ‍್ಯ ನಿರ್ವಹಿಸಿ ದೇಹಾಲಾಸ್ಯವನ್ನ ಹೊರಗಟ್ಟುತ್ತದೆ ಅಂತಾರೆ ಸಂಶೋಧಕರು.

ಅದೇನೆ ಇರಲಿ ಅತಿಯಾದ್ರೆ ಅಮೃತವೂ ವಿಷ ಅನ್ನೋ ಮಾತಿದೆ. ಹೀಗಾಗಿ ಯಾವುದನ್ನೂ ಅತಿಯಾಗಿ ಮಾಡಬಾರದು, ಬಿಯರ್ ಕುಡಿಯೊದ್ರಿಂದ ಕೊಂಚ ಮಟ್ಟಿಗೆ ಅನುಕೂಲ ಇದ್ರೂ ಅತಿಯಾಗಿ ಸೇವಿಸಿದ್ರೆ ಅಪಾಯ ಕಟ್ಟಿಟ್ಟ ಬುತ್ತಿ. ಹೀಗಾಗಿ ಎಣ್ಣೆ ಕುಡಿಯೋ ಮುನ್ನ ಎಚ್ಚರ ಇರಲಿ.. Little beer.. no fear.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top