ದೇಶದ ಏಕೈಕ ಮಹಿಳಾ ಕಮಾಂಡೋ ಟ್ರೇನರ್ ಡಾ.ಸೀಮಾ !

49 ವರ್ಷದ ಸೀಮಾ ರಾವ್ ಇದುವರೆಗೆ ಭೂ ಸೇನೆ, ವಾಯು ಸೇನೆ, ನೌಕಾ ಸೇನೆಗೆ ಟ್ರೇನಿಂಗ್ ಕೊಟ್ಟಿದ್ದಾರೆ. ಅಲ್ಲದೇ ವಿಶ್ವದಲ್ಲೇ ಕೇವಲ 5 ಮಹಿಳೆಯರು ಬ್ರೂಸ್ ಲೀ ರವರ ವಿಶೇಷ ಮಾರ್ಷಲ್ ಆರ್ಟ್ ಕಲೆಯಾದ `ಜೀತ್ ಕುನ್ ಡೊ’ ಕಲೆ ಕಲೆತಿದ್ದಾರೆ. ಆ ಸಾಧನೆ ಮಾಡಿರುವ ಮಹಿಳೆಯರಲ್ಲಿ ಇವರೂ ಒಬ್ಬರು.

ಡಾ. ಸೀಮಾ ರಾವ್ ದೇಶದ ಪ್ರಥಮ ಹಾಗೂ ಏಕೈಕ ಮಹಿಳಾ ಕಮಾಂಡೋ ಟ್ರೇನರ್ ಆಗಿದ್ದಾರೆ. ಇವರಿಗೆ ಭಾರತದ `ಸುಪರ್ ವುಮೆನ್’ ಅಂತನೂ ಕರೆಯುತ್ತಾರೆ. 49 ವರ್ಷದ ಸೀಮಾ ರಾವ್ ಕಳೆದ 20 ವರ್ಷದಿಂದ ಯಾವುದೇ ಸರ್ಕಾರಿ ಸಹಾಯವಿಲ್ಲದೆ ಉಚಿತವಾಗಿ ಏರ್ ಫೋರ್ಸ್, ಪ್ಯಾರಾ ಮಿಲಿಟರಿ ಫೋರ್ಸ್‍ಗಳಿಗೆ ಕಮಾಂಡೋ ಟ್ರೇನಿಂಗ್ ನೀಡುತ್ತಿದ್ದಾರೆ. ಡಾ.ಸೀಮಾ ರಾವ್ ಸಶಸ್ತ್ರಬಲ ಜವಾನರಿಗೆ ರಿಫ್ಲೆಕ್ಸ್ ಫೈರ್ ಅಂದರೆ ಕೇವಲ ಅರ್ಧ ಸೆಕೆಂಡ್ ಸಮಯದಲ್ಲಿ ಶೂಟ್ ಮಾಡುವ ಟ್ರೇನಿಂಗ್ ನೀಡುತ್ತಿದ್ದಾರೆ. ಇವರು ಹೇಳುವಂತೆ ಯಾವುದೇ ಮಹಿಳೆ ಪುರುಷರ ಸಮಾನ ಇರುತ್ತಾಳೆ. ಅವಳು ಪುರುಷನು ಮಾಡುವ ಎಲ್ಲಾ ಕೆಲಸಗಳನ್ನು ಮಾಡುವ ಶಕ್ತಿಯನ್ನು ಹೊಂದಿರುತ್ತಾಳೆ. ಧೈರ್ಯವಂತ ಮಹಿಳೆಗೆ ಎಂದಿಗೂ ಗೆಲುವು ಸಿಕ್ಕೆ ಸಿಗುತ್ತೆ ಎಂದಿದ್ದಾರೆ.

ಮಹಿಳೆಯರಾಗಿ ಈ ಕ್ಷೇತ್ರಕ್ಕೆ ಬರಲು ಏನು ಕಾರಣ ಎನ್ನುವ ಪ್ರಶ್ನೆಗೆ ಉತ್ತರಿಸಿರುವ ಡಾ.ಸೀಮಾ ನಾನು ಚಿಕ್ಕವಳಿದ್ದಾಗ ತುಂಬಾ ವೀಕ್ ಆಗಿದ್ದೆ, ಆ ವೀಕ್‍ನೆಸ್‍ನ ದೂರ ಮಾಡಲು ಮಾರ್ಷಲ್ ಆರ್ಟ್ಸ್ ಕಲಿತೆ ಇದೇ ವೇಳೆ ನನ್ನ ಮದುವೆ ಮೇಜರ್ ದೀಪಕ್ ರಾವ್ ಜೊತೆ ಆಯ್ತು ಹೀಗೆ ಒಮ್ಮೆ ಆರ್ಮಿ ಟ್ರೇನಿಂಗ್ ಸ್ಕೂಲ್ ಬಳಿ ಹೋಗುತ್ತಿರುವಾಗ ಏಕಾಏಕಿ ನಾನು ಏಕೆ ಟ್ರೇನಿಂಗ್ ನೀಡಬಾರದೆಂದು ಅನೇಕ ಆಫೀಸರ್ ಗಳನ್ನು ಭೇಟಿ ಮಾಡಿ ಟ್ರೇನಿಂಗ್ ಕೊಡಲು ಸ್ಟಾರ್ಟ್ ಮಾಡಿದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.
ಇಂದು ಇವರು ಅನೇಕ ಮಹೀಳೆಯರಿಗೆ ಸ್ಪೂರ್ತಿ, ಇವರಿಗೆ ನಮ್ಮ ಕಡೆಯಿಂದ ಸಲಾಂ

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top