ಅನಾರೋಗ್ಯದಲ್ಲೂ ಹಕ್ಕು ಚಲಾಯಿಸಿ ಮಾದರಿಯಾದ ಮಹಿಳೆ!

inspiring voter

ಈ ಬಾರಿಯ ಲೋಕಸಭಾ ಚುನಾವಣೆ ಕಳೆದ ಚುನಾವಣೆಗಿಂತಲೂ ಸ್ವಲ್ಪ ಅಧಿಕವಾಗಿಯೇ ಮತದಾನ ಪ್ರಕ್ರಿಯೆ ನಡೆದಿದೆ. ಇಂದೂ ಕೂಡ 9 ರಾಜ್ಯಗಳಲ್ಲಿ ನಾಲ್ಕನೇ ಹಂತದ ಮತದಾನ ನಡೆಯುತ್ತಿದೆ. ಆದ್ರೆ ಈಗೀಗ ಮತದಾನ ಮಾಡುವ ಪರಿಜ್ಞಾನವನ್ನೇ ಮತದಾರ ಮರೆತಂತಿದೆ. ಎಲ್ಲೂ ಕೂಡ ಶೇ. 100 ರಷ್ಟು ಮತದಾನ ನಡೆಯುತ್ತಿಲ್ಲ. ಅದ್ಯಾಕೂ ಏನೋ ಮತದಾರ ತನ್ನ ಹಕ್ಕನ್ನು ಚಲಾಯಿಸೋಕೆ ನಿರುತ್ಸಾಹ ತೋರುತ್ತಿದ್ದಾನೆ. ಆದ್ರೆ ಇವರಿಗೆಲ್ಲಾ ಮಾದರಿಯಾಗುವಂತಹ ಘಟನೆ ಮುಂಬೈನಲ್ಲಿ ನಡೆದಿದೆ.

ಮುಂಬೈನಲ್ಲಿ ನಾಲ್ಕನೇ ಹಂತದ ಮತದಾನ ಪ್ರಕ್ರಿಯೆ ಚುರುಕುಗೊಂಡಿದೆ ಸಿನಿ ತಾರೆಯರು, ರಾಜಕಾರಣಿಗಳು, ಉದ್ಯಮಿಗಳಲ್ಲದೇ ಹಿರಿಯರೂ ಕೂಡ ಮತಗಟ್ಟೆಗೆ ಆಗಮಿಸಿ‌ ಮತಚಲಾಯಿಸುತ್ತಿದ್ದಾರೆ. ಇದೇ ರೀತಿ ಇಲ್ಲೋರ್ವ ಮಹಿಳೆ ಅನಾರೋಗ್ಯದಿಂದ ಬಳಲುತ್ತಿದ್ದರೂ ಮತದಾನ ಮಾಡುವ ಮೂಲಕ ಮಾದರಿಯಾಗಿದ್ದಾರೆ. ಅನಾರೋಗ್ಯ ಪೀಡಿತ ಮಹಿಳೆಯನ್ನು ಕುಟುಂಬದ ಇಬ್ಬರು ಸದಸ್ಯರು ಖುರ್ಚಿಗೆ 2 ಕೋಲು ಕಟ್ಟಿ ಅವರನ್ನು ಎತ್ತುಕೊಂಡು ಬಂದು ಮತ ಚಲಾಯಿಸಿದ್ದಾರೆ. ಮುಂಬೈ ನ ಬೂತ್ ಸಂಖ್ಯೆ 181 ರಲ್ಲಿ ಈ ದೃಶ್ಯ ಕಂಡುಬಂದಿದ್ದು, ಮತದಾನ ಮಾಡದೇ ಇರುವ ಅದೆಷ್ಟೋ ಜನಕ್ಕೆ ಇದೊಂದು ಮಾದರಿ ಅಂದ್ರೆ ತಪ್ಪಾಗಲಾರದು.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top