ಮಗನನ್ನು ರೈತನಾಗಿ ಮಾಡಲು 90 ಸಾವಿರ ಸಂಬಳದ ಸರ್ಕಾರಿ ಕೆಲಸ ಬಿಟ್ಟ ಮಹಾತಾಯಿ..!

ಪೋಷಕರು ತಮ್ಮ ಮಕ್ಕಳ ಮುಂದಿನ ಜೀವನ ಸುಖಕರವಾಗಿ ಇರಬೇಕು ಅಂತ ಹಗಲಿರುಳು ಶ್ರಮಿಸುತ್ತಾರೆ. ಅಲ್ಲದೇ ಅವರ ಭವಿಷ್ಯದ ಜೀವನ ಮತ್ತು ಅವರ ಸುಖಕ್ಕಾಗಿ ಅದೆಷ್ಟೋ ಖರ್ಚುಗಳನ್ನು ಮಾಡುತ್ತಾರೆ. ಆದ್ರೆ ಪೋಷಕರು ತಮ್ಮ ಮಕ್ಕಳ ಆಸೆಯನ್ನು ಪೂರೈಸುವ ಸಲುವಾಗಿ ಮಕ್ಕಳಿಗೆ ಸಮಯವನ್ನು ನೀಡುವುದನ್ನೇ ಮರೆತುಬಿಡ್ತಾರೆ. ಆದ್ರೆ ಇಲ್ಲೊಬ್ಬ ತಾಯಿ ತನ್ನ ಮಗನಿಗಾಗಿ ಕೈ ತುಂಬ ಬರುತ್ತಿರುವ ಸಂಬಳದ ಸರ್ಕಾರಿ ಕೆಲಸವನ್ನೇ ಬಿಟ್ಟಿರುವ ಅಪರೂಪದ ಘಟನೆ ರಾಜಸ್ಥಾನಲ್ಲಿ ನಡೆದಿದೆ. ರಾಜಸ್ಥಾನದ ರಾಜೇಂದ್ರ ಸಿಂಗ್‌ ಮತ್ತು ಪತ್ನಿ ಚಂಚಲ್‌ ಕೌರ್‌ ಮೂಲತಃ ರಾಜಸ್ಥಾನದ ಅಜ್ಮೀರ್‌ ನಿವಾಸಿಗಳಾಗಿದ್ದು ಈ ತಾಯಿ ತಮ್ಮ 11 ವರ್ಷದ ಮಗನನ್ನು ರೈತನನ್ನಾಗಿ ಮಾಡಲು ತಾಯಿ ಚಂಚಲ್‌ ತಮ್ಮ ಕೆಲಸವನ್ನು ಬಿಟ್ಟು ಈ ನಿರ್ಧಾರಕ್ಕೆ ಬಂದಿದ್ದಾರೆ.
ರಾಜೇಂದ್ರ ಸಿಂಗ್‌ ರೈಲ್ವೆಯಲ್ಲಿ ಕೆಲಸ ಮಾಡುತಿದ್ದು, ಚಂಚಲ್‌ ಸರ್ಕಾರಿ ಸ್ಟಾಫ್‌ ನರ್ಸ್‌ ಆಗಿ ಕೆಲಸ ಮಾಡುತ್ತಿದ್ದರು, ಇವರಿಬ್ಬರು ಮಗನ ಹಿತ ದೃಷ್ಟಿಯಿಂದ ಇಂದೋರ್‌ ಬಳಿ ಒಂದು ಹಳ್ಳಿಯಲ್ಲಿ ಒಂದೂವರೆ ಎಕರೆ ಜಮೀನು ಖರೀಸಿದ್ದು ಅಲ್ಲಿ ಅವರು ತಮ್ಮ ಮಗ ಗುರುಭಕ್ಷ್‌ ಸಿಂಗ್‌ಗೆ ರೈತನಾಗಲು ತರಬೇತಿ ನೀಡುತ್ತಿದ್ದಾರಂತೆ.

ಇನ್ನು ಇದರ ಬಗ್ಗೆ ಮಾತನಾಡುವ ದಂಪತಿಗಳು ನಾವು ಪಟ್ಟಣದಲ್ಲಿ ಎಷ್ಟು ದುಡ್ಡು ದುಡಿದರೇನು, ಒಂದು ಉತ್ತಮ ಗಾಳಿ ಸೇವನೆ ಮಾಡಲು ಸಾಧ್ಯವಾಗುವುದಿಲ್ಲ, ಮತ್ತು ನೀರಿಗಾಗಿ ಹಂಬಲಿಸಬೇಕು, ಅಷ್ಟೇ ಅಲ್ಲದೇ ಸಿಟಿ ಜೀವನದಲ್ಲಿ ಬಿಸಿಲು ಕೂಡ ನಾವು ನೋಡುವುದು ಕಷ್ಟವಾಗಿ ಹೋಗಿಬಿಟ್ಟಿದೆ, ಹೀಗಿರುವಾಗ ನಾವು ಏನೂ ಸಂಪಾದಿಸಿದ್ರು ಅದು ಪ್ರಯೋಜನಕ್ಕೆ ಬರುವುದಿಲ್ಲ, ಇದರಿಂದಾಗಿ ನಾವು ನಮ್ಮ ಮಗನಿಗೆ ಸಿಟಿ ಜೀವನದ ಬದಲು ಬೇರೆ ಜೀವನ ನೀಡಲು ನಿರ್ಧರಿಸಿದೆವು, ಆದ್ದರಿಂದ 2016ರಲ್ಲಿ ಚಂಚಲ್‌ 90ಸಾವಿರ ಸಂಬಳದ ಸರ್ಕಾರಿ ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ.

2017ರಲ್ಲಿ ಚಂಚಲ್‌ ತಮ್ಮ ಮಗನ ಜೊತೆ ಇಂದೋರ್‌ಗೆ ಶಿಫ್ಟ್‌ ಆಗಿ ಅಲ್ಲಿ ಸಾವಯುವ ಕೃಷಿಯ ಬಗ್ಗೆ ತರಬೇತಿಯನ್ನು ಪಡೆದುಕೊಂಡಿದ್ದಾರೆ. ಇದರ ಜೊತೆಯಲ್ಲಿ ಸೋಲಾರ್‌ ಕುಕ್ಕಿಂಗ್‌,ಸೋಲಾರ್‌ ಡ್ರೈಯಿಂಗ್‌ ಕಲಿತಿದ್ದಾರೆ.

ಅಷ್ಟೇ ಅಲ್ಲದೇ ಈ ಬದಲಾವಣೆಯನ್ನು ಮಗ ಹೇಗೆ ಎದುರಿಸುತ್ತಾನೆ ಅನ್ನೋ ಚಿಂತೆಯಲ್ಲಿದ್ದ ದಂಪತಿಗಳಿಗೆ ಅದು ಕಷ್ಟವೇ ಆಗಲಿಲ್ಲವೆಂದು ಹೇಳುತ್ತಾರೆ ರಾಜೇಂದ್ರ ಸಿಂಗ್‌ ಚಂಚಲ್‌ ದಂಪತಿ. ಗುರುಭಕ್ಷ್‌ ಈ ಹೊಸ ಜೀವನದಿಂದ ತುಂಬಾ ಖುಷಿಯಾಗಿದ್ದು, ನನಗೆ ಸಾವಯುವ ಕೃಷಿಯಲ್ಲಿ ತುಂಬಾನೇ ಸಹಾಯ ಮಾಡುತ್ತಾನೆ. ಜೊತೆಗೆ ಇಲ್ಲಿ ಅವನಿಗೆ ಅನೇಕ ಗೆಳೆಯರು ಸಿಕ್ಕಿದ್ದು ಅವರ ಜೊತೆ ಆಟ ಪಾಠ ಎಂದು ಇರುತ್ತಾನೆ. ಅಲ್ಲದೇ ಅವರಿಗೂ ಸೋಲಾರ್‌ ಕುಕ್ಕಿಂಗ್‌ , ಕೃಷಿಯ ಬಗ್ಗೆ ಹೇಳಿಕೊಡುತ್ತಾನೆ.
ಇನ್ನು ನಾನು ಕೆಲಸ ಬಿಟ್ಟ ಸಮಯದಲ್ಲಿ ನನ್ನ ಬಂಧುಗಳು, ಮತ್ತು ಸ್ನೇಹಿತರು ನೀನು ಕೆಲಸ ಬಿಟ್ಟು ತಪ್ಪು ಮಾಡಿದೆ ಎಂದು ಸಹ ಹೇಳಿದ್ರು, ಆದ್ರೆ ಈಗ ಗುರುಭಕ್ಷ್‌ ಇರುವ ರೀತಿ ನೋಡಿ ಕೆಲವರು ನಮ್ಮ ನಿರ್ಧಾರವನ್ನು ಪಾಲಿಸಲು ಸಹ ಮುಂದಾಗಿದ್ದಾರೆ ಎಂದು ಸಂತಸದಿಂದ ಹೇಳುತ್ತಿದ್ದಾರೆ. ಸದ್ಯ ಇಂದೋರ್‌ನಲ್ಲಿ ಸಾವಯುವ ಕೃಷಿಯಲ್ಲಿ ಬೆಳೆದ ತರಕಾರಿ ಮತ್ತು ಸೋಲಾರ್‌ ಕುಕ್ಕಿಂಗ್‌ ಮೂಲಕ ಅಡುಗೆ ಮಾಡಲಾಗುತ್ತಿದ್ದು. ಗುರುಭಕ್ಷ್‌ ವಿದ್ಯಾಭ್ಯಾಸದ ಜೊತೆಯಲ್ಲಿ ಭವಿಷ್ಯದಲ್ಲಿ ಉತ್ತಮ ರೈತನಾಗಲು ಕೃಷಿ ತರಬೇತಿಯನ್ನು ಪಡೆಯುತ್ತಿದ್ದಾನೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top