ಕೌಂಟಿ ಕ್ರಿಕೆಟ್ ನಲ್ಲಿ ಅಬ್ಬರಿಸೋಕೆ ಆಟಗಾರರು ರೆಡಿ..!

ಇಂಡಿಯನ್ ಪ್ರೀಮಿಯರ್ ಲೀಗ್ ಇನ್ನೇನು ಮುಗಿಯುವ ಹಂತಕ್ಕೆ ಬಂದಿದೆ. ಈ ಚುಟುಕು ಕ್ರಿಕೆಟ್ ಅಭಿಮಾನಿಗಳಿಗೆ ಸಖತ್ ಮನರಂಜನೆ ನೀಡಿರೋದಂತೂ ಸುಳ್ಳಲ್ಲ. ದೇಶಿ ಆಟಗಾರರ ಜೊತೆ ವಿದೇಶಿ ಆಟಗಾರರೂ ಜೊತೆಗೂಡಿ ಒಂದೊಳ್ಳೆ ರಸದೌತಣ ನೀಡ್ತಿದ್ದಾರೆ. ಇದಾದ ಬಳಿಕ ಇಂಗ್ಲೆಂಡ್ ನ ವೇಲ್ಸ್ ನಲ್ಲಿ ವಿಶ್ವ ಕ್ರಿಕೆಟ್ ಹಬ್ಬ ಶುರುವಾಗಲಿದೆ. ಈ ವಿಶ್ವ ಕ್ರಿಕೆಟ್ ಹಬ್ಬಕ್ಕೆ ಅಭಿಮಾನಿಗಳಯ ಕಾತರದಿಂದ ಕಾಯ್ತಿರೋದಂತೂ ಸುಳ್ಳಲ್ಲ . ಇನ್ನೂ ಇದೂ ಮುಗಿದ ಮೇಲೆ ಇನ್ನೇನೂ ಅಂತ ನಿರಾಶರಾಗಬೇಡಿ. ಟೆಸ್ಟ್ ಕ್ರಿಕೆಟ್ ಪ್ರೀಯರಿಗೆ ವಿಶ್ವ ಟೆಸ್ಟ್ ಚಾಂಪಿಯನ್ ಶುರುವಾಗಲಿದೆ.

ಹೌದು.. ವಿಶ್ವ ಕ್ರಿಕೆಟ್ ಚಾಂಪಿಯನ್ ನಲ್ಲಿ ಭಾರತ ಮೊದಲ ಪಂದ್ಯವನ್ನು ವೆಸ್ಟ್ ಇಂಡೀಸ್ ವಿರುದ್ಧ ಸೆಣಸಾಡಲಿದೆ. ಇದಕ್ಕಾಗಿ ಟೀಂ ಇಂಡಿಯಾ ಆಟಗಾರರು ಪೂರ್ವ ತಯಾರಿಯಲ್ಲಿ ತೊಡಗಿದ್ದಾರೆ.

ಪೃಥ್ವಿ ಶಾ, ಅಜಿಂಕ್ಯಾ ರಹಾನೆ, ಮಯಾಂಕ್ ಅಗರ್ ವಾಲ್, ಇಶಾಂತ್ ಶರ್ಮಾ, ಆರ್. ಅಶ್ವಿನ್ ಸೇರಿ 7 ಮಂದಿ ಇಂಗ್ಲೆಂಡ್ ನಲ್ಲಿ ನಡೆಯಲಿರೋ ಕೌಂಟಿ ಕ್ರಿಕೆಟ್ ನಲ್ಲಿ ಮಿಂಚಲು ರೆಡಿಯಾಗಿದ್ದಾರೆ. ಜೂನ್ ತಿಂಗಳಲ್ಲಿ ನಡೆಯುವ ಕೌಂಟಿ ಕ್ರಿಕೆಟ್ ನಲ್ಲಿ 7 ಮಂದಿ ಭಾಗಿಯಾಗಲಿದ್ದು, ವಿಶ್ವ ಟೆಸ್ಟ್ ಚಾಂಪಿಯನ್ ಗೆ ಪೂರ್ವ ತಯಾರಿ ನಡೆಸಲಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top