IMA ಯಲ್ಲಿ ಲಕ್ಷಾಂತರ ರೂಪಾಯಿ ಹೂಡಿಕೆ ಮಾಡಿದ್ದ ನಟಿ ಸಂಜನಾ

ಡ್ರಗ್ಸ್‌ ಕೇಸ್‌ ವಿಚಾರದಲ್ಲಿ ಜೈಲು ಸೇರಿರೋ ನಟಿ ಸಂಜನಾ ಗಲ್ರಾನಿಯವರ ವಿಚಾರಣೆ ವೇಳೆ ಹೊಸ ಹೊಸ ಸುದ್ದಿಗಳು ಹೊರ ಬೀಳುತ್ತಿವೆ. ಇದೀಗ ಸಂಜನಾ ಐಎಂಎನಲ್ಲಿ ಲಕ್ಷಾಂತರ ರೂಪಾಯಿ ಹೂಡಿಕೆ ಮಾಡಿರೋ ಬಗ್ಗೆ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ. ಐಎಂಯ ಮುಖ್ಯಸ್ಥ ಮನ್ಸೂರ್‌ ಖಾನ್‌ ಅವರನ್ನು ನಂಬಿ ಹಣ ಹೂಡಿಕೆ ಮಾಡಿ ಈಗ ಕಳೆದುಕೊಂಡಿದ್ದೇನೆ.

ಲಕ್ಷಾಂತರ ರೂಪಾಯಿ ಹಣವನ್ನು ಐಎಂಎ ದಲ್ಲಾಳಿಗಳಿಂದ ಹೂಡಿಕೆ ಮಾಡಿಸಿದ್ದರು.ಇದೀಗ ಲಕ್ಷಾಂತರ ರೂಪಾಯಿ ಹಣವನ್ನು ಕಳೆದುಕೊಂಡಿದ್ದೇನೆ ಎಂದು ಇ.ಡಿ ವಿಚಾರಣೆ ವೇಳೆ ಸಂಜನಾ ಹೇಳಿದ್ದಾರೆ.

ಹೆಚ್ಚಿನ ಬಡ್ಡಿ ಆಸೆಗೆ ಹಣ ಹೂಡಿಕೆ ಮಾಡಿದ್ದೆ, ನನ್ನ ಕೆಲವು ಸ್ನೇಹಿತರು ಸಹ ಹೂಡಿಕೆ ಮಾಡಿದ್ರು, ಆರ್ಥಿಕವಾಗಿ ಸಂಕಷ್ಟ ಎದುರಿಸುತ್ತೇಬನೆ. ನನ್ನ ಹಣ ಐಎಂಎ ಪಾಲಗಿದೆ ಎಂದು ವಿಚಾರಣೆ ವೇಳೆ ಸಂಜನಾ ಹೇಳಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top