ವಿಶೇಷ ಚೇತನ ಮಗನ IAS ಕನಸಿಗೆ ಹೆಗಲಾದ ಮಹಾತಾಯಿ..! ಇದು ಮನಕಲಕುವ ಕಥೆ..!

ias dreams

ಜಗತ್ತಿನಲ್ಲಿ ಶ್ರೇಷ್ಠವಾದ ಸ್ಥಾನ ಏನಾದ್ರೂ ಇದೆ ಅಂದ್ರೆ ಅದು ತಾಯಿ ಸ್ಥಾನ. ಕೋಟಿ ಕೋಟಿ ಕೊಟ್ಟರು ತಾಯಿ ಸ್ಥಾನ ತುಂಬಲು ಯಾರಿಂದಲೂ ಸಾಧ್ಯವಾಗುವುದಿಲ್ಲ ಅನ್ನೋ ಮಾತು ಜಗತ್‌ ಪ್ರಸಿದ್ಧಿ.. ಅಂತಹ ಮಹಾತಾಯಿ ಸ್ಟೋರಿ ಇದು, ಹೌದು ತನ್ನ ವಿಶೇಷಚೇತನ ಮಗನ IAS ಕನಸಿಗೆ ಹೆಗಲಾಗಿ ನಿಂತಿದ್ದಾಳೆ ಈ ಮಹಾತಾಯಿ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಕಡುದರಹಳ್ಳಿಯ ನಿವಾಸಿ ಜಯಲಕ್ಷ್ಮಿ ಈ ಮಹಾತಾಯಿ. ಜಗತ್ತು ಬೆಳೆದಂತೆ ನಮಗೆ ಎಲ್ಲವೂ ಕೈಗೆಟಕುವ ಈ ಕಾಲದಲ್ಲಿ ಈ ಗ್ರಾಮದಲ್ಲಿ ಮಾತ್ರ ಸಾರಿಗೆ ವ್ಯವಸ್ಥೆ ಇಲ್ಲದೆ ಜನ ಈಗಲೂ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇನ್ನು ಸರಿಯಾದ ವ್ಯವಸ್ಥೆ ಇಲ್ಲದೇ ಅದೆಷ್ಟೋ ಮಂದಿ ತಮ್ಮ ಮಕ್ಕಳ ವಿದ್ಯಾಭ್ಯಾಸವನ್ನು ಮೊಟಕು ಗೊಳಿಸಿದ್ದು ಇದ್ದು. ಆದ್ರೆ ಇದ್ಯಾವ ನೆಪಗಳು ಮಗನ ವಿದ್ಯಾಭ್ಯಾಸಕ್ಕೆ ತೊಡಕಾಗಬಾರದು ಎಂದು ಗಟ್ಟಿ ಮನಸ್ಸು ಮಾಡಿತ ಈ ತಾಯಿ, ತನ್ನ ವಿಶೇಷಚೇತನ ಮಗನಾದ ರಾಜೇಶ್‌ ಬಾಬುನನ್ನು ಪ್ರತಿ ನಿತ್ಯ ತನ್ನ ಹೆಗಲ ಮೇಲೆ ಹೊತ್ತುಕೊಂಡು ನಾಲ್ಕು ಕಿಲೋಮೀಟರ್‌ ಹೋಗಿ ಶಾಲೆಯಲ್ಲಿ ಓದಿಸುತ್ತಿದ್ದಾಳೆ.


ಏಳನೇ ತರಗರತಿಯವರೆಗೆ ತಮ್ಮ ಗ್ರಾಮದಲ್ಲಿಯೇ ಓದಿದ ರಾಜೇಶ್‌ ಬಾಬು ತನ್ನ ಸ್ವಂತ ಶಕ್ತಿಯಿಂದ ಓಡಾಡಲು ಶಕ್ತನಿಲ್ಲದಿದ್ದರು ಓದಿನ ಕಡೆಯ ಆಸೆ ಮಾತ್ರ ಕುಂದಲಿಲ್ಲ, ಹೀಗಾಗಿ ಓದುವ ಆಸೆಯನ್ನು ತನ್ನ ತಾಯಿಯ ಬಳಿ ಹೇಳಿಕೊಂಡಿದ್ದು ಈ ಆಸೆಗೆ ಹೆಗಲ ಆಸರೆ ನೀಡಿದ್ದಾಳೆ ಈ ಮಹಾತಾಯಿ ಜಯಲಕ್ಷ್ಮಿ,

ಇನ್ನು ಕಡುದರಹಳ್ಳಿಯಿಂದ ಮಿರಾಸಾಬಿಹಳ್ಳಿ ರಾಣಿಕೆರೆ ಹೈಸ್ಕೂಲಿಗೆ ಸುಮಾರು ನಾಲ್ಕು ಕಿಲೋಮಿಟರ್‌ ದೂರವಿದ್ದು ಪ್ರತಿದಿನ ತಾಯಿ ಹೆಗಲ ಮೇಲೆ ಹೊತ್ತು ವಿದ್ಯಾಭ್ಯಾಸ ಮಾಡಿಸುತ್ತಿದ್ದಾಳೆ. ಇನ್ನು ಜಯಲಕ್ಷ್ಮಿಗೆ ಮೂರು ಜನ ಮಕ್ಕಳಿದ್ದು, ಮೊದಲನೇ ಮಗ ರಾಜೇಶ್‌ ವಿಶೇಷಚೇತನ ಮಗುವಾಗಿದ್ದು, ಮೂರು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ತಾಯಿ ಹಗಲಿರುಳು ಶ್ರಮಿಸುತ್ತಿದ್ದಾಳೆ. ಪತಿ ಇಲ್ಲದಿದ್ದರೂ ತನ್ನ ಮೂರು ಮಕ್ಕಳನ್ನು ಉನ್ನತ ಮಟ್ಟದಲ್ಲಿ ನೋಡಬೇಕು ಅಂತ ಬಯಸುತ್ತಿದ್ದಾಳೆ ಜಯಲಕ್ಷ್ಮಿ, ಇನ್ನು ರಾಜೇಶ್‌ ಬಾಬುಗೆ ಸರ್ಕಾರ ನೀಡಿರುವ ತ್ರಿಚಕ್ರ ಸೈಕಲ್‌ ಹಾಳಾಗಿದ್ದು, ಪ್ರತಿದಿನ ತಾಯಿಯ ಹೆಗಲ ಮೇಲೆ ಶಾಲೆಗೆ ಬಂದು ವಿದ್ಯಾಭ್ಯಾಸ ಪಡೆದು IAS ಆಗುವ ಆಸೆ ಕನಸುಕಂಡಿದ್ದಾನೆ. ಇನ್ನು ರಾಶೇಜ್‌ ಮತ್ತು ಜಯಲಕ್ಷ್ಮಿಯ ಕಷ್ಟವನ್ನು ಕಂಡ ಗ್ರಾಮಸ್ಥರು ಮತ್ತು ಶಿಕ್ಷಕರು ಸರ್ಕಾರದಿಂದ ಅಗತ್ಯ ಸೌಲಭ್ಯ ಕಲ್ಪಿಸಬೇಕೆಂದು ಒತ್ತಾಯಿಸಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top