I Am OK, Nothing To Worry ಎಂದ ಅರ್ಜುನ್ ಜನ್ಯ..

ಫೆಬ್ರವರಿ 26ರಂದು ಎದೆ ನೋವಿನಿಂದ ಆಸ್ಪತ್ರೆ ಸೇರಿ ಸದ್ಯ ವಿಶ್ರಾಂತಿ ಪಡೆಯುತ್ತಿರುವ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ತಮ್ಮ ಅಭಿಮಾನಿಗಳಿಗೆ ಸಂದೇಶವನ್ನು ಕಳುಹಿಸಿದ್ದಾರೆ. ಸರಿಗಮಪ ವೇದಿಕೆ ಮುಖಾಂತರ ವಿಡಿಯೋ ಸಂದೇಶವನ್ನು ಕಳುಹಿಸಿದ್ದು,’ನಿಮ್ಮೆಲ್ಲರ ಪ್ರೀತಿ,ಹಾರೈಕೆಯಿಂದ ಚೆನ್ನಾಗಿದ್ದೇನೆ ಆದಷ್ಟು ಬೇಗ ಭೇಟಿ ಆಗುತ್ತೇನೆ ಅಂತ ಹೇಳಿದ್ದಾರೆ. ಕಾರಣಾಂತರಗಳಿಂದ ಆರೋಗ್ಯ ತಪ್ಪಿತು, ನಿಮ್ಮೆಲ್ಲರ ಪ್ರೀತಿ, ಹಾರೈಕೆ, ಆಶೀರ್ವಾದದಿಂದ ಗುಣಮುಖನಾಗಿದ್ದೇನೆ. ನನ್ನ ಮೇಲೆ ನನ್ನ ಕುಟುಂಬದ ಮೇಲೆ ತೋರಿದ ಪ್ರೀತಿಗೆ ಧನ್ಯವಾದಗಳು, ಹೀಗೆ ನಿಮ್ಮೆಲ್ಲರ ಪ್ರೀತಿ ನಮ್ಮ ಮೇಲೆ ಇರಲಿ, ಸರಿಗಮಪ ಸೆಟ್ ಅನ್ನು ತುಂಬಾ ಮಿಸ್ ಮಾಡ್ಕೋತಿನಿ, ಆದಷ್ಟು ಬೇಗ ನಿಮ್ಮನ್ನು ಭೇಟಿ ಮಾಡುತ್ತೇನೆ ,I Am OK Nothing To Worry ಅಂತ ಅರ್ಜುನ್ ಜನ್ಯ ಹೇಳಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top