ಪತ್ನಿಯನ್ನು ಬರ್ಬರ ಹತ್ಯೆಮಾಡಿದ ಪತಿ ಶವದ ಜೊತೆ ಏನು ಮಾಡಿದ ಗೊತ್ತಾ.?

ಪತ್ನಿಯ ಶೀಲ ಶಂಕಿಸಿ ಪಾಪಿ‌ ಪತಿಯೊಬ್ಬ ಪತ್ನಿಯನ್ನು ಬರ್ಬರವಾಗಿ ಹತ್ಯೆ

ಪತ್ನಿಯ ಶೀಲ ಶಂಕಿಸಿ ಪಾಪಿ‌ ಪತಿಯೊಬ್ಬ ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ವಿಜಯಪುರದಲ್ಲಿ ನಡೆದಿದೆ.

ವಿಜಯಪುರ ಜಿಲ್ಲೆಯ ಕಾಸಗೇರಿ ನಿವಾಸಿಯಾದ ಮಲ್ಲಿಕಾರ್ಜುನ್ ಪವಾರ ತನ್ನ ಪತ್ನಿ ಸೋನಾಬಾಯಿ ಪವಾರ ಶೀಲ ಶಂಕಿಸಿ ಸುತ್ತಿಗೆಯಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿದ್ದಲ್ಲದೇ, ಪತ್ನಿಯ ಶವದ ಮುಂದೆ ಫೋಟೋ ತೆಗೆದು ಆ ಫೋಟೋವನ್ನು ಪತ್ನಿಯ ಕುಟುಂಬಸ್ಥರಿಗೆ ಕಳುಹಿಸಿ ವಿಕೃತ ಮೆರೆದಿದ್ದಾನೆ. ಬಸವನಬಾಗೇವಾಡಿಯ ಎನ್.ಟಿ.ಪಿ.ಸಿ ಬಳಿಯ ಕೂಡಗಿ ತಾಂಡಾ ನಿವಾಸಿ ಮಲ್ಲಿಕಾರ್ಜುನ ಪವಾರ ಅದೇ ಗ್ರಾಮದ ನಿವಾಸಿ ಸೋನಾಬಾಯಿ ಎಂಬುವರನ್ನು 13 ವರ್ಷಗಳ ಹಿಂದೆ ಮದುವೆಯಾಗಿದ್ದನು.

Read : ವಾಟ್ಸಾಪ್ ಗ್ರೂಪ್ ಮಾಡಿ ಲಕ್ಷ ಲಕ್ಷ ಗಳಿಸಿ.?!

ಮುಂಬೈನ ಖಾಸಗಿ ವಾಹಿನಿಯಲ್ಲಿ ಮೇಕಪ್ ಮ್ಯಾನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಮಲ್ಲಿಕಾರ್ಜುನ್ ತಿಂಗಳಿಗೊಮ್ಮೆ ಮನೆಗೆ ಬಂದು ಹೋಗುತ್ತಿದ್ದ. ಆದ್ರೆ ಕೆಲವು ವರ್ಷಗಳಿಂದ ಪತ್ನಿಯ ಶೀಲ ಶಂಕಿಸಿ ಮನೆಯಲ್ಲಿ ವಿಪರೀತ ಜಗಳವಾಡುತ್ತಿದ್ದ. ಈ ಸಂಬಂಧ ಹಿರಿಯರು ಹಲವು ಬಾರಿ ರಾಜಿ ಸಂಧಾನ ಮಾಡಿದ್ದರು, ಆದರು ಜಗಳ ನಿಂತಿರಲಿಲ್ಲ. ಮೂರು ದಿನಗಳ ಹಿಂದೆ ಮಲ್ಲಿಕಾರ್ಜುನ ಮುಂಬಯಿನಿಂದ ವಿಜಯಪುರಕ್ಕೆ ಬಂದಿದ್ದನು.

ಕಳೆದ ರಾತ್ರಿ ಪತಿ, ಪತ್ನಿ ನಡುವೆ ಜಗಳವಾಗಿದೆ. ಈ ವೇಳೆ ಪತ್ನಿ ಸೋನಾಬಾಯಿಯನ್ನ ಸುತ್ತಿಗೆಯಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ ಮಲ್ಲಿಕಾರ್ಜುನ. ನಂತರ ಪತ್ನಿಯ ಶವದ ಫೋಟೋ ತೆಗೆದು ಅವುಗಳನ್ನು ಪತ್ನಿ ಮನೆಯವರಿಗೆ ವಾಟ್ಸಾಪ್ ಮಾಡಿ ವಿಕೃತಿ ಮೆರೆದಿದ್ದಾನೆ.ಪತ್ನಿ ಮನೆಯವರ ದೂರು ಹಿನ್ನೆಲೆಯಲ್ಲಿ ಪತಿ ಮಲ್ಲಿಕಾರ್ಜುನನ್ನ ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಗಾಂಧಿ ಚೌಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಬೇಸಿಗೆಯಲ್ಲಿ ಶೆಕೆಯ ಜೊತೆ ಹೊಟ್ಟೆಉರಿ, ಗ್ಯಾಸ್, ಎದೆಉರಿ ಇದ್ದರೆ ಹೀಗೆ ಮಾಡಿ ಸಾಕು

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top