ಹುರುಳಿ ಕಾಳು ಸೇವನೆ ಮಾಡಿದರೆ ಈ ಕಾಯಿಲೆ ನಿಮ್ಮ ಬಳಿ ಸುಳಿಯೋಲ್ಲ.!

ಪ್ರತಿಯೊಬ್ಬ ಮನುಷ್ಯನಿಗೂ ಆರೋಗ್ಯವೇ ಭಾಗ್ಯ, ಮನುಷ್ಯ ತನ್ನ ಜೀವಿತದ ಅವಧಿಯಲ್ಲಿ ಕೆಲಸದ ಒತ್ತಡದಲ್ಲಿ ತನ್ನ ಆರೋಗ್ಯದ ಬಗ್ಗೆ ಗಮನವನ್ನು ಹರಿಸದೆ ಜೀವನದ ಕೊನೆಗಳಿಗೆ ಹಲವು ಸಮಸ್ಯೆಗಳಿಂದ ನರಳುತ್ತಾನೆ, ಆದ್ದರಿಂದ ಪ್ರತಿದಿನ ಮನೆಯಲ್ಲಿ ಕೆಲವು ಸಿರಿಧಾನ್ಯ, ಸೊಪ್ಪು, ತರಕಾರಿ, ಹಣ್ಣುಗಳು ಸೇವನೆ ಮಾಡೋದ್ರಿಂದ ನಿಮ್ಮ ಆರೋಗ್ಯ ಭಾಗ್ಯವಾಗಿರುತ್ತದೆ.

ಇಂದು ಪ್ರತಿದಿನ ಹುರುಳಿಯನ್ನು ಹೀಗೆ ಉಪಯೋಗಿಸುವುದರಿಂದ ನಿಮ್ಮ ಆರೋಗ್ಯವನ್ನು ಹೇಗೆ ಉತ್ತಮವಾಗಿ ಇಟ್ಟುಕೊಳ್ಳಬಹುದೆಂದು ನೋಡಿ..

Read : ತಲೆ ಕೂದಲು ಉದುರುವುದಕ್ಕೆ ಇಲ್ಲಿದೆ ರಾಮಬಾಣ

ಹುರುಳಿಕಾಳನ್ನು ಈ ರೀತಿ ಉಪಯೋಗಿಸಿ ಆರೋಗ್ಯವಾಗಿರಿ..!

ಹುರುಳಿಕಾಳನ್ನು ಈ ರೀತಿ ಉಪಯೋಗಿಸಿ ಆರೋಗ್ಯವಾಗಿರಿ
  • ಹುರುಳಿ ಕಾಳಿನ ಸೂಪ್ ಮಾಡಿ ಕುಡಿಯುವುದರಿಂದ ನಿಮಗಿರುವ ಕೆಮ್ಮು,ಶೀತ,ಕಫ ಕಮ್ಮಿಯಾಗುತ್ತಾ ಹೋಗುತ್ತದೆ.
  • ಹುರುಳಿಕಾಳನ್ನು ರಾತ್ರಿ ನೆನಸಿ ಬೆಳಗ್ಗೆ ಚೆನ್ನಾಗಿ ಬೇಯಿಸಿ ಅದಕ್ಕೆ ಉಪ್ಪು,ಕರಿಮೆಣಸು,ಜೀರಿಗೆ ಬೆರಸಿ ತಿಂಡಿಯ ಸಮಯದಲ್ಲಿ ಸೇವಿಸಿದರೆ ಬೊಜ್ಜು ಮತ್ತು ದೇಹದ ತೂಕವನ್ನು ಕರಗಿಸುತ್ತದೆ.
  • ನೆನೆಸಿದ ಹುರುಳಿಕಾಳನ್ನು ಪೇಸ್ಟ್ ಮಾಡಿ ಅದನ್ನು ಊತ ಮತ್ತು ನೋವಿರುವ ಜಾಗಕ್ಕೆ ಲೇಪನ ಮಾಡಿದ್ರೆ ನೋವು‌ ಮತ್ತು ಊತ ಕಡಿಮೆಯಾಗುತ್ತೆ.
  • ಮಲಭಾದೆ ಇದ್ರೆ ಹುರುಳಿಕಾಳನ್ನು ಬೆಳಗ್ಗೆ ಕಾಲಿಹೊಟ್ಟೆಗೆ ಬೇಯಿಸದೆ ಹಾಗೆ ಸೇವಿಸಿದರೆ ಮಲವಿಸರ್ಜನೆ ಸುಲಭವಾಗುತ್ತದೆ.
  • ಇನ್ನು ಸ್ರ್ತೀ ಸಂಬಂಧಿ ಋತುಸ್ರಾವ ಸಮಸ್ಯೆ ಇದ್ದರೆ ಹುರುಳಿಕಾಳನ್ನು ಪ್ರತಿದಿನ ಸೂಪ್ ಅಥವಾ ಸಲಾಡ್ ಸೇವಿಸಿದ್ರೆ ಋತುಸ್ರಾವದ ಸಮಸ್ಯೆ ಬಗೆಹರಿಯುತ್ತದೆ.
  • ರಾತ್ರಿ ನೆನೆಸಿದ ಹುರುಳಿಕಾಳಿನ ನೀರನ್ನು ದಿನಕ್ಕೆ ಮೂರು ಬಾರಿ ಸೇವನೆ ಮಾಡೋದ್ರಿಂದ ಬಿಳಿಸ್ರಾವ ಸಮಸ್ಯೆ ಬಗೆಹರಿಯುತ್ತದೆ.
  • ಕಿಡ್ನಿಯಲ್ಲಿ ಕಲ್ಲಿನ ಸಮಸ್ಯೆ ಇದ್ದರೆ ಪ್ರತಿದಿನ ನೆನಸಿ ಬೇಯಿಸಿ ಸೇವನೆ ಮಾಡಿದ್ರೆ ಕಲ್ಲಿನ ಸಮಸ್ಯೆ ಬೇಗ ಬಗೆಹರಿಯುತ್ತದೆ.
  • ಬಿಕ್ಕಳಿಕೆ ಇದ್ದರೆ ಹುರುಳಿಕಾಳು ಸುಡುವಾಗ ಅದರ ಹೊಗೆಯನ್ನು ಬಾಯಿಗೆ ತೆಗೆದುಕೊಳ್ಳುವುದರಿಂದ ಬಿಕ್ಕಳಿಕೆ ಬೇಗ ಗುಣಮುಖವಾಗುತ್ತದೆ.

Read : ಮಳೆ ಬರುವಾಗ ಈ ರೀತಿ ಮಾಡಿದ್ರೆ ನಿಮ್ಮ ಸಂಗಾತಿಗೆ ಖುಷಿ ಪಡಿಸಬಹುದು.!

ಈ ರೀತಿ ಹುರುಳಿಕಾಳನ್ನು ಉಪಯೋಗಿಸುವುದರಿಂದ ನಿಮ್ಮ ಆರೋಗ್ಯ ಉತ್ತಮ & ಸದೃಢವಾಗಿರುತ್ತದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top