ಎಣ್ಣೆ ಹೊಡೆಯುವುದರಲ್ಲಿ ಮಹಿಳೆಯರ ಪ್ರಮಾಣ ಹೆಚ್ಚು..! ಈ ಸ್ಟೋರಿ ಓದಿ ಗೊತ್ತಾಗುತ್ತೆ..!

ನಮ್ಮ ದಿನನಿತ್ಯದ ಜೀವನದಲ್ಲಿ ಮದ್ಯಪಾನ ಸೇವನೆ ಮಾಡೋದು ಕೆಲವರಿಗೆ ದಿನ ನಿತ್ಯದ ಅಭ್ಯಾಸವಾಗಿ ಹೋಗಿದೆ, ಇ‌ನ್ನು ಈ ವಿಚಾರದಲ್ಲಿ ಗಂಡು ಹೆಣ್ಣು ಎಂಬ ಭೇಧ ಭಾವ ಈಗ ಇಲ್ಲದಂತಾಗಿದೆ. ಆದ್ರೆ ಮದ್ಯಸೇವನೆಯಲ್ಲಿ ಮಹಿಳೆಯರ ಪ್ರಮಾಣ ಕೂಡ ಗಣನೀಯವಾಗಿ ಏರಿಕೆಯಾಗಿದೆ‌ ಅಂದ್ರೆ ನೀವೂ ನಂಬಲೇ ಬೇಕು. ಹೌದು ಇತ್ತಿಚಿಗೆ ದೆಹಲಿಯಲ್ಲಿ ಅಗೈಸ್ಟ್ ಡಂಗನ್ ಡ್ರೈನ್ ನಡೆಸಿದ ಸಮೀಕ್ಷೆಯಲ್ಲಿ 5000 ಮಹಿಳೆಯರಲ್ಲಿ ಸಮೀಕ್ಷೆ ನಡೆಸಿದಾಗ ಅದರಲ್ಲಿ ಶೇ20 ರಷ್ಟು ಮಹಿಳೆಯರು ಮದ್ಯಪಾನ ಮಾಡುತ್ತೇವೆ ಅಂತ ಹೇಳಿಕೆಯನ್ನು ನೀಡಿದ್ದಾರೆ.

ಮಹಿಳೆಯರು ಮದ್ಯಪಾನ ಮಾಡಲು ಕಾರಣ ಏನು ಅಂತ ನೋಡುತ್ತಾ ಹೋದಾಗ ಕಂಡು ಬಂದ ಕಾರಣಗಳು ಇವು

  • ಕಾಕ್ ಟೇಲ್ ಮತ್ತು ಬೆರ್ರಿ ಸೇವನೆಯಿಂದ ಮಹಿಳೆಯರಿಗೆ ವಿಶ್ರಾಂತಿ ದೊರೆಯುತ್ತದೆ ಎಂಬ ಟಾಕ್ ಜಾಸ್ತಿ ಪ್ರಚಲಿತವಾಗಿದ್ದು
  • ಕೆಲಸದ ಒತ್ತಡ ಮತ್ತು ಖಿನ್ನತೆ, ಒಂಟಿತನವನ್ನು‌ ದೂರವಾಗಿಸಿಕೊಳ್ಳುವ ಸಲುವಾಗಿ ಮಹಿಳೆಯರು ‌ಮದ್ಯಪಾನದ ಮೊರೆ ಹೋಗುತ್ತಿದ್ದಾರೆ.
  • ಇನ್ನು ಸಾಮಾಜಿಕವಾಗಿ ಒಡನಾಟ ನಡೆಸುವ ವೇಳೆ ಮದ್ಯಪಾನ ಈಗ ಸಾಮಾನ್ಯವಾಗಿದ್ದು ಮದ್ಯಪಾನ ಮಾಡುವುದರಿಂದ ತಪ್ಪೇನು ಅನ್ನೋ ಮನೋಭಾವನೆ ಇರುವುದು.
  • ಇನ್ನು ಸಮೀಕ್ಷೆಯಲ್ಲಿ 42% 18 ರಿಂದ 30ವರ್ಷ ವಯಸ್ಸಿನವರು ಮದ್ಯಪಾನ ಅದೊಂದು ಹವ್ಯಾಸ ಅಂತ ಹೇಳಿದ್ದಾರೆ.
  • 31 ರಿಂದ 45 ವರ್ಷ ವಯಸ್ಸಿನವರು ಮದ್ಯಪಾನ ಸೋಷಿಯಲ್ ಸ್ಟೇಟಸ್ ಅಂತ ಹೇಳಿದ್ದಾರೆ.
  • ಇ‌ನ್ನು 60 ವರ್ಷ ಮೇಲ್ಪಟ್ಟ ಹಿರಿಯರು ಕೆಲವೊಂದು ಭಾವನಾತ್ಮ ಕಾರಣಗಳಿಂದಾಗಿ‌ ಮದ್ಯಪಾನ ಮಾಡುತ್ತೇವೆ ಅಂತ ಹೇಳಿದ್ದಾರೆ.

ಈ ಎಲ್ಲಾ ಮಾನದಂಡಗಳನ್ನು ಇಟ್ಟುಕೊಂಡು ಮದ್ಯಪಾನ ಮಾಡುವವರಲ್ಲಿ ಮಹಿಳೆಯರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ ಅಂತ ಹೇಳಲಾಗ್ತಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top