ಹುಚ್ಚಾ ವೆಂಕಟ್ ಮೇಲೆ ದಾಳಿ ಮಾಡಿದ ಮಡಿಕೇರಿ ಗ್ರಾಮಸ್ಥರು..!

huccha-venkat latest news

ಹುಚ್ಚಾ ವೆಂಕಟ್ ಮಾನಸಿಕ ಪರಿಸ್ಥಿತಿ ಸರಿ ಇಲ್ಲದ ಹಾಗೇ ಕಾಣುತ್ತಿದೆ, ಇತ್ತೀಚೆಗೆ ಚೆನ್ನೈನಲ್ಲಿ ಕೊಳಕು ಬಟ್ಟೆ ಹಾಕಿಕೊಂಡು, ಕಾಲಿಗೆ ಚಪ್ಪಲಿ ಇಲ್ಲದೇ ಓಡಾಡುತ್ತಿದ್ದ ವಿಡಿಯೋ ವೈರಲ್ ಆಗಿತ್ತು, ಅಲ್ಲದೇ ಸಹಾಯ ಮಾಡಿದ ವ್ಯಕ್ತಿಗೆ ಥಳಿಸಿದ್ದಾ‌ನೆ ಅನ್ನೋ ಸುದ್ದಿಯೀ ಹರಿದಾಡಿತ್ತು, ಆದ್ರೆ ಈಗ ಮಡಿಕೇರಿಯಲ್ಲೂ ತನ್ನ ಹುಚ್ಚಾಟವನ್ನು ಆಡಿ ಮಡಿಕೇರಿ ಗ್ರಾಮಸ್ಥರಿಂದ ಧರ್ಮದೇಟು ತಿಂದ ಘಟನೆ ನಡೆದಿದೆ, ಮಡಿಕೇರಿಯಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ಸ್ಟ್ಯಾಂಡ್ ಬಳಿ ನಿಂತಿದ್ದ ಮಾರುತಿ 800ಕಾರಿನ ಗಾಜನ್ನು ಪುಡಿ ಪುಡಿ ಮಾಡಿದ್ದಾನೆ, ಇನ್ನು ಕಾರಿನ ಡೋರ್ ಮುರಿಯಲು ಹೋದಾಗ ಅಲ್ಲಿದ್ದ ಜನರು ವೆಂಕಟ್ ಮೇಲೆ ದಾಳಿ ಮಾಡಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಇನ್ನು ಮಾನಸಿಕ ಸ್ಥಿಮಿತ ಕಳೆದುಕೊಂಡಿರೋ ಹುಚ್ಚಾವೆಂಕಟ್ ಮೇಲೆ ಥಳಿತ ಮಾಡಿರೋದು ಸರಿಯಲ್ಲ, ಆ ವ್ಯಕ್ತಿಗೆ ಸೂಕ್ತ ಚಿಕಿತ್ಸೆ ನೀಡುವುದು ಒಳ್ಳೆಯದು ಅಂತ ಕೆಲವರು ಹೇಳ್ತಾ ಇದ್ದಾರೆ, ಆದ್ರೆ ಜನರು ಮಾತ್ರ ಇದ್ಯಾವುದನ್ನು ಅರಿಯದೆ ಹುಚ್ಚಾ ವೆಂಕಟ್ ಹುಚ್ಚಾಟಕ್ಕೆ ಬೇಸತ್ತು ವೆಂಕಟ್ ಮೇಲೆ ದಾಳಿ ನಡೆಸಿರೋದು ವಿಷಾದದ ಸಂಗತಿಯೇ ಸರಿ, ಆದಷ್ಟು ಬೇಗ ವೆಂಕಟ್ ಗೆ ಚಿಕಿತ್ಸೆ ಕೊಡಿಸುವುದು ಸೂಕ್ತ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top