ನೀವೂ ಮನೆಯಲ್ಲಿ ಇದನೆಲ್ಲಾ ಮಾಡಿದ್ರೆ ನಿಮ್ಮ ಮನೆಗೆ ಶಾಂತಿ,ನೆಮ್ಮದಿ, ಎಲ್ಲಾ ನಿಮ್ಮ ಬಳಿ ಬರುತ್ತೆ..!

ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ಒಂದಿಲ್ಲೊಂದು ಕಷ್ಟ, ಭಾದೆಗಳು ಇದ್ದೆ ಇರುತ್ತದೆ. ಇನ್ನು ಮನೆಯಲ್ಲಿ ಸುಖ,ಶಾಂತಿ,ನೆಮ್ಮದಿ, ಜೀವನಕ್ಕೆ ದುಡ್ಡು ಬೇಕಾದ್ರೆ ನಾವು ಕೆಲವೊಮ್ಮೆ ದೇವರ ಮೊರೆ ಹೋಗೋದು ಇದೆ, ಆದ್ರೆ ಮನೆಯಲ್ಲೇ ಈ ಎಲ್ಲಾ ಅಂಶಗಳನ್ನು ಅಳವಡಿಕೊಂಡರೆ ನಿಮ್ಮ ಮನೆಯಲ್ಲಿ ನೆಮ್ಮದೆ,ಶಾಂತಿ, ಧನ ಲಾಭದ ಜೊತೆಯಲ್ಲಿ ಜೀವನವೂ ಸುಖಮಯವಾಗಿರುತ್ತದೆ.

  1. ನೀವೂ ಮನೆಯಲ್ಲಿ ಪ್ರತಿ ದಿನ ಉಪಯೋಗಿಸಿದ ಹೂ, ಮತ್ತು ಎಲೆಯ ವಸ್ತುಗಳನ್ನು ಒಣಸಿದ ಮೇಲೆ ಅವುಗಳನ್ನು ಮನೆಯಲ್ಲಿ ಇಟ್ಟುಕೊಳ್ಳಲು ಹೋಗ ಬೇಡಿ, ಅದರಿಂದ ನೆಗೆಟಿವ್ ಎನರ್ಜಿ ಉಂಟಾಗುವುದರಿಂದ ಅವುಗಳನ್ನು ಮನೆಯಲ್ಲಿ ಇಟ್ಟು ಕೊಳ್ಳದೇ ಹೊರ ಹಾಕಿ.
  2. ಮನೆಯಲ್ಲಿ ಯಾವ ಕೋಣೆಯಲ್ಲೇ ಆಗಲಿ ನೀರಿನ ನಲ್ಲಿ ಸರಿ ಇಲ್ಲದೆ ಹೋಗಿದ್ರೆ ಅನ್ನು ಮೊದಲು ಸರಿಪಡಿಸಿ ಅದು ಎಂದು ಮನೆಯ ವಾತಾವರಣಕ್ಕೆ ಸರಿ ಬರುವುದಿಲ್ಲ.
  3. ಪಾರಿವಾಳಗಳನ್ನು ಮನೆಯಲ್ಲಿ ಸಾಕುವುದು ಸಹ ಒಳಿತಲ್ಲ ಅಂತ ಹೇಳ್ತಾರೆ, ಮನೆಯಲ್ಲಿ ಪಾರಿವಾಳದ ಗೂಡುಗಳಿದ್ರೆ ಅದರಿಂದ ಕಷ್ಟ ನಷ್ಟ ಹೆಚ್ಚಾಗುತ್ತೆ ಅನ್ನೋ ಮಾತಿದೆ ಆದ್ದರಿಂದ ಮನೆಯಲ್ಲಿ ಪಾರಿವಾಳ ಗೂಡುಗಳನ್ನು ಇಡುವುದು ಸೂಕ್ತವಲ್ಲ.
  4. ಮನೆಯಲ್ಲಿ ಜೇಡರ ಬಲೇ ಕಟ್ಟದಂತೆ ನೋಡಿಕೊಳ್ಳಿ, ಅದು ಅದೃಷ್ಟವನ್ನು ಮನೆಯಿಂದ ಹೋಗಲಾಡಿಸುತ್ತೆ, ಅಲ್ಲದೇ ಮನೆಯಲ್ಲಿ ನೆಗೆಟಿವ್ ಎನರ್ಜಿಯನ್ನು ಹೆಚ್ಚಿಸುತ್ತದೆ.
  5. ಬಾಗಿಲ ಎದುರು ದೇವರ ಫೋಟೋವನ್ನು ಮನೆಯ ಬಾಗಿಲಿಗೆ ಹಾಕುವುದರಿಂದ ನೆಗೆಟಿವ್ ಎನರ್ಜಿ ಮನೆಯೊಳಗೆ ಸುಳಿಯುವುದಿಲ್ಲ, ಮನೆಯಲ್ಲಿ ನಷ್ಟವೂ ಆಗೋದಿಲ್ಲ.
  6. ಒಡೆದ ಕನ್ನಡಿಯನ್ನು ಮನೆಯಲ್ಲಿ ಇಟ್ಟುಕೊಳ್ಳಲು ಹೋಗಬೇಡಿ, ಅದು ನಷ್ಟಕ್ಕೆ ಕಾರಣವಾಗುತ್ತದೆ, ಅಲ್ಲದೇ ಒಡೆದ ಕನ್ನಡಿ ಮನಸ್ಸುಗಳನ್ನು ಒಡೆದು ಹಾಕುತ್ತದೆ ಅನ್ನೋ ಮಾತುಗಳಿವೆ ಹಾಗಾಗಿ ಕನ್ನಡಿ ಮನೆಯಲ್ಲಿ ಒಡೆದು ಹೋದ್ರೆ ತಕ್ಷಣ ಮನೆಯಿಂದ ಹೊರ ಹಾಕಿ.
  7. ಮನೆಯಲ್ಲಿ ಎಲ್ಲರಿಗೂ ಟೆನ್ಷನ್, ದುಃಖ, ಭಯ, ಚಿಂತೆ ಹೆಚ್ಚಾಗಿದ್ದರೆ, ಮನಸ್ತಾಪ, ಜಗಳ ಇದ್ದರೆ, ನೆಗೆಟಿವ್ ಎನರ್ಜಿ ಹೆಚ್ಚಾಗಿದ್ದರೆ ಮನೆಯನ್ನು ಉಪ್ಪು ನೀರಿನಿಂದ ತೊಳೆಯಿರಿ ಹಾಗೂ ಸ್ನಾನದ ಬಕೆಟ್‍ನಲ್ಲಿ ಎರಡು ಸ್ಪೂನ್ ಉಪ್ಪುನ್ನು ಹಾಕಿ ಮಿಕ್ಸ್ ಮಾಡಿ ಒಮ್ಮೆ ಸ್ನಾನ ಮಾಡಿ

ಈ ರೀತಿಯ ಕೆಲವು ಅಂಶಗಳನ್ನು ಮನೆಯಲ್ಲಿ ಮಾಡುವುದರಿಂದ ಮನೆಯಲ್ಲಿ ಧನಾತ್ಮಕ ಅಂಶಗಳು ಮನೆಯಲ್ಲಿ ಸುಳಿಯುತ್ತದೆ, ಅಲ್ಲದೇ ಮನೆಯಲ್ಲಿ ಧನಲಾಭದ ಜೊತೆ ಸುಖ, ಶಾಂತಿ ನೆಮ್ಮದಿ, ಮನೆಯಲ್ಲಿ ನೆಲೆಸುತ್ತದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top