ಜೋಳದರಾಶಿ ಗುಡ್ಡವನ್ನು ಪ್ರವಾಸಿತಾಣವನ್ನಾಗಿಸಲು 27 ಕೋಟಿ ಅನುದಾನ

ಇತ್ತೀಚೆಗೆ ಹೊಸಪೇಟೆಯ ಜನತೆಗೆ ಜೋಳದರಾಶಿ ಗುಡ್ಡ ಜಾಗಿಂಗ್, ವಾಕಿಂಗ್ ಗೆ ಹೋಗಲು ಆಕರ್ಷಿಸುತ್ತಿದ್ದು ಬೆಟ್ಟದ ಮೇಲಿಂದ ಪೋಟೋ, ವಿಡಿಯೋಗಳನ್ನು ಕ್ಲಿಕ್ಕಿಸಿಕೊಂಡು ಸುಂದರ ಹೊಸಪೇಟೆ ನಗರ ಹಾಗೂ ಟಿಬಿ ಡ್ಯಾಂ ಅನ್ನು ವೀಕ್ಷಿಸಲು ಹೋಗುತ್ತಿರುವುದು ಹೆಚ್ಚಾಗುತ್ತಿದೆ

ಜೋಳದರಾಶಿ ಗುಡ್ಡವನ್ನು ಪ್ರವಾಸಿತಾಣವನ್ನಾಗಿಸಿ, ಜನರನ್ನು ಆಕರ್ಷಿಸುವ ಸಲುವಾಗಿ ಸಕಲ ಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಲಾಗಿದೆ. ಈ ನಿಟ್ಟಿನಲ್ಲಿ ಬರೋಬ್ಬರಿ 27 ಕೋಟಿ ಅನುದಾನವನ್ನು ಮೀಸಲಿರಿಸಲಾಗಿದ್ದು, ಇದರ ಪ್ರಾರಂಭಿಕವಾಗಿ 10 ಕೋಟಿ ರೂ ವೆಚ್ಚದಲ್ಲಿ ರಸ್ತೆ, ಬೀದಿದೀಪ, ಮತ್ತು ನೀರಿನ ವ್ಯವಸ್ಥೆ ಜೊತೆಯಲ್ಲಿ ಮೂಲ ಭೂತ ಸೌಕರ್ಯ ಒದಗಿಸುವುದಕ್ಕಾಗಿ ಟೆಂಡರ್‌ ಕರೆಯಲಾಗುವುದು ಎಂದು ಅರಣ್ಯ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಆನಂದ್‌ ಸಿಂಗ್‌ ತಿಳಿಸಿದ್ದಾರೆ.

ಬಳ್ಳಾರಿ ಪ್ರಾದೇಶಿಕ ವಿಭಾಗ ಹಾಗೂ ಹೊಸಪೇಟೆ ಪ್ರಾದೇಶಿಕ ವಲಯದ ಸಂಯುಕ್ತಾಶ್ರಯದಲ್ಲಿ ನಗರದ ಜೋಳದರಾಶಿ ಗುಡ್ಡ ಪ್ರದೇಶದಲ್ಲಿ ಹಸಿರೀಕರಣ ಕಾರ್ಯಕ್ರಮದಲ್ಲಿ ಸಸಿ ನಡೆವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಸಚಿವ ಆನಂದ್‌ ಸಿಂಗ್‌

ಜೋಳದರಾಶಿ ಗುಡ್ಡವನ್ನು ಆಕರ್ಷಣೀಯ ತಾಣವನ್ನಾಗಿಸುವ ನಿಟ್ಟಿಲ್ಲಿ, ಜೋಳದ ಗುಡ್ಡದ ಮೇಲ್ಭಾಗದಲ್ಲಿ ಸ್ವಾಮಿ ವಿವೇಕಾನಂದರ ಬೃಹತ್‌ ಪ್ರತಿಮೆಯನ್ನು ಕೂಡ ನಿರ್ಮಿಸಲಾಗುವುದು ಎಂದು ಹೇಳಿದ್ದಾರೆ.

ಕಾಡನ್ನು ಮತ್ತು ಕಾಡು ಪ್ರಾಣಿಗಳನ್ನು ರಕ್ಷಿಸಿಸುವ ಸಲುವಾಗಿ ಅರಣ್ಯ ಇಲಾಖೆ ವಿಶೇಷವಾಗಿ ಶ್ರಮವನ್ನು ಪಡುತ್ತಿದೆ. ಅರಣ್ಯ ಇಲಾಖೆಯ ಜೊತೆಯಲ್ಲಿ ಜನರು ಸಹ ಅರಣ್ಯ ಸಂರಕ್ಷಣೆಗೆ ಸಾಥ್‌ ನೀಡಬೇಕು ಎಂದು ಈ ಸಂದರ್ಭದಲ್ಲಿ ಹೇಳಿದ್ರು.

ಅರಣ್ಯ ಇಲಾಖೆ ಸಿಬ್ಬಂದಿಗಳು ಶ್ರಮಪಟ್ಟು ಗಿಡ ಮರಗಳನ್ನು ಬೆಳೆಸುವುದರ ಜೊತೆ ಸಂರಕ್ಷಣೆ ಮಾಡುತ್ತಿದ್ದಾರೆ. ಗುಡ್ಡದ ಪ್ರದೇಶದಲ್ಲಿ ನೀರಿನ ಸಮಸ್ಯೆಯಾದರೆ ಹನಿ ನೀರಾವರಿ ಸೌಲಭ್ಯವನ್ನು ಇಲಾಖೆಯ ವತಿಯಿಂದ ಕೊಡಲಾಗುವುದು, ಜೊತೆಗೆ ಮಳೆಗಾಲವನ್ನು ಉಪಯೋಗಿಸಿಕೊಂಡು ಹಸಿರೀಕರಣ ಕಾರ್ಯಕ್ರಮವನ್ನು ಸಾರ್ಥಕಗೊಳಿಸಬೇಕು ಎಂದು ಸಚಿವರು ಹೇಳಿದ್ರು.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top