ಹೂ ಬದಲು ಪುಸ್ತಕ ನೀಡಿ ಎಂದ ಶಾಸಕ. ಬಂದಿದ್ದು ಎಷ್ಟು ಸಾವಿರ ಪುಸ್ತಕ ಗೊತ್ತಾ.?

ಇನ್ನು ಮುಂದೆ ನನಗೆ ಹೂಗುಚ್ಚಗಳನ್ನು ಕೊಡಬೇಡಿ, ಪುಸ್ತಕಗಳನ್ನು ಕೊಡಿ ಎಂದು ಮಾನವಿ ಮಾಡಿದ್ದ ಶಾಸಕರೊಬ್ಬರಿಗೆ ಒರೋಬ್ಬರಿ 35000ಕ್ಕೂ ಅಧಿಕ ಪುಸ್ತಕಗಳು ಬಂದಿದ್ದು ಈಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಹೌದು ಕೇರಳದ ವಟ್ಟಿಯೂರ್ಕವು ಶಾಸಕ ಪ್ರಶಾಂತ್ ತನ್ನ ಕ್ಷೇತ್ರದ ಜನರ ಬಳಿ ನೀವೂ ನನಗೆ ಹೂ ಗುಚ್ಛಗಳನ್ನು ಕೊಡುವ ಬದಲು ಪುಸ್ತಕಗಳನ್ನು ನೀಡಿ ಎಂದು ಮನವಿಯನ್ನು ಮಾಡಿಕೊಂಡು ಫೇಸ್‍ಬುಕ್‍ನಲ್ಲಿ ಪೋಸ್ಟ್ ಒಂದನ್ನು ಹಾಕಿದ್ದರು.

ಇದೀಗ ಶಾಸಕರ ಈ ಮನವಿಗೆ ಜನರು ಸ್ಪಂದಿಸಿದ್ದು ಈಗ ಎಲ್ಲಾ ಕಡೆ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಶಾಸಕರು ತಮ್ಮ ಕ್ಷೇತ್ರದಲ್ಲಿ ಗ್ರಂಥಾಲಯ ತೆರೆಯಲು ಇಚ್ಛಿಸಿದ್ದರು. ಇದರಿಂದ ಗ್ರಂಥಾಲಯಕ್ಕೆ ಪುಸ್ತಕ ಬೇಕಾಗಿರುವುದರಿಂದ ತನ್ನ ಭೇಟಿಗೆ ಬರುವವರು ಹೂ ಗುಚ್ಛದ ಬದಲು ಪುಸ್ತಕಗಳನ್ನು ಕೊಡಿ ಎಂದು ಮನವಿಮಾಡಿಕೊಂಡಿದ್ದರು,

ಅಲ್ಲದೇ ಇದನ್ನು ಫೇಸ್‍ಬುಕ್ ಪೋಸ್ಟ್ ನಲ್ಲಿ ಶೇರ್ ಕೂಡ ಮಾಡಿದ್ದರು. ಇನ್ನು ಶಾಸಕರ ಈ ಪೋಸ್ಟ್ ನೋಡಿದ ಜನರು ಅವರ ಮನವಿಗೆ ಸ್ಪಂದಿಸಿ ತಮ್ಮ ಬಳಿ ಇದ್ದ ಪುಸ್ತಕಗಳನ್ನು ತಂದು ನೀಡಿದ್ದಾರೆ. ಇದರಿಂದ 35000ಕ್ಕೂ ಹೆಚ್ಚು ಪುಸ್ತಕಗಳು ಸಂಗ್ರವಾಗಿದ್ದು, ಅದನ್ನು ಸರ್ಕಾರಿ ಶಾಲೆಗೆ ನೀಡುವ ಮೂಲಕ ಗ್ರಂಥಾಲಯವನ್ನು ಸ್ಥಾಪಿಸಿದ್ದಾರೆ.

ಇನ್ನು ತಮಗೆ ತಂದು ಕೊಡುತ್ತಿದ್ದ ಪುಸ್ತಕಗಳನ್ನು ಪ್ರಶಾಂತ್ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡುತ್ತಿದ್ದು,ಇದಕ್ಕೆ ನೆಟ್ಟಿಗರಿಂದ ಮೆಚ್ಚುಗೆಯು ವ್ಯಕ್ತವಾಗಿತ್ತು.

ಇನ್ನು ಪುಸ್ತಕ ತಂದುಕೊಟ್ಟಿರುವವರಿಗೆ ಧನ್ಯವಾದವನ್ನು ಸಹ ಪ್ರಶಾಂತ್ ಹೇಳಿದ್ದು. ಇನ್ನು ಪ್ರಶಾಂತ್ 2018ರಲ್ಲಿ ಕೇರಳದಲ್ಲಿ ಪ್ರವಾಹ ಉಂಟಾದಾಗ ಪರಿಹಾರ ಕಾರ್ಯದಲ್ಲಿ ಸಕ್ರಿಯರಾಗಿದ್ದನ್ನು ನೋಡಿ ಅವರಿಗೆ ಜನ ಕೂಡ ಮೆಚ್ಚುಗೆ ವ್ಯಕ್ತಪಡಿಸಿ `ಮೇಯರ್ ಬ್ರೋ’ ಎಂದು ಬಿರುದು ಸಹ ನೀಡಿದ್ದರು.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top