ಹೊನ್ನಾಳಿ ಹೋರಿ ರೇಣುಕಾಚಾರ್ಯಗೆ ಹೋರಿ ಡಿಚ್ಚಿ..?

ಹೊನ್ನಾಳಿ ಹೋರಿ ಎಂದೇ ಖ್ಯಾತಿಯಾಗಿರೋ ಹೊನ್ನಾಳಿ ತಾಲೂಕಿನ ಶಾಸಕ ಮಾಜಿ ಸಚಿವ ರೇಣುಕಾ ಚಾರ್ಯ ಮೇಲೆ ಹೋರಿ ಎಗರಿ ದೊಡ್ಡ ಅನಾಹುತದಿಂದ ಪಾರಾಗಿದ್ದಾರೆ ಶಾಸಕರು..

ದೀಪಾವಳಿ ಅಂಗವಾಗಿ ನಡೆಸುವ ಹೋರಿ ಬೆದರಿಸುವ ಕಾರ್ಯಕ್ರನದಲ್ಲಿ ಪಾಲ್ಗೊಂಡಿದ್ದ ರೇಣುಕಾಚಾರ್ಯರನ್ನು ಅವರ ಬೆಂಬಲಿಗರು ಹೊತ್ತು ಮೆರವಣಿಗೆ ಮಾಡುವ ವೇಳೆ ಮೆರವಣಿಗೆ ಮಾಡುತ್ತಿದ್ದ ಜನರ ಮಧ್ಯೆ ಹೋರಿಯೊಂದು ಎಗರಿ ಬಿದ್ದಿದೆ ಅದೃಷ್ಟವಶಾತ್ ಶಾಸಕರಿಗೆ ಯಾವುದೇ ಅಪಾಯವಾಗಿಲ್ಲ..

ಇನ್ನು ಸ್ವಲ್ಪದರಲ್ಲೇ ರೇಣುಕಾಚಾರ್ಯ ಅವರು ಪಾರಾಗಿದ್ದು ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ಮನೆಮಾಡಿತ್ತು..

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top