ಮುಖದಲ್ಲಿ ಮೊಡವೆಯೇ.? ಒಂದೇ ವಾರದಲ್ಲಿ ಸಿಗಲಿದೆ ಪರಿಹಾರ.! ಹೀಗೆ ಮಾಡಿ ಅಷ್ಟೇ..!

ಮೊಡವೆ ಪ್ರಾಯದ ಒಡವೆ ಅನ್ನೋ ಮಾತಿದೆ, ಆದ್ರೆ ಮುಖದಲ್ಲಿ ಮೊಡವೆ ಬಂತೆಂದರೆ ಅಯ್ಯೋ ನನ್ನ ಮುಖವೇ ಹಾಳಾಗಿ ಹೋಯ್ತಲ್ಲ ಅಂತ ಬೇಸರ ವ್ಯಕ್ತಪಡಿಸುವವರು ಹೆಚ್ಚು, ಇನ್ನು ಮೊಡವೆ ನಿಮ್ಮ ಮುಖದಲ್ಲಿ ಸುಳಿಯದ ರೀತಿ ಮಾಡಬೇಕಾದರೆ ನೀವೂ ಏನು ಮಾಡ್ಬೇಕು ಗೊತ್ತಾ. ಅದಕ್ಕೆ ಸಿಂಪಲ್ ಮತ್ತು ಮನೆಯಲ್ಲೇ ಮಾಡಬಹುದಾದ ಕೆಲವೊಂದಿಷ್ಟು ಮಾಹಿತಿಗಳನ್ನು ನಾವ್ ನೀಡ್ತೀವಿ, ಅದನ್ನು ನೀವೂ ಪಾಲಿಸಿದ್ರೆ ನಿಮ್ಮ ಮುಖದ ಮೇಲೆ ಮೊಡವೆ ಮೂಡುವುದಿಲ್ಲ ಜೊತೆಗೆ ಮೊಡವೆಯಿಂದ ಆದ ಕಲೆಯೂ ಸಹ ಇಲ್ಲದಂತಾಗುತ್ತದೆ.

ಈ ಕೆಳಕಂಡ ಸಲಹೆಗಳನ್ನು ನೀವೂ ಪಾಲಿಸಿದ್ರೆ ನಿಮ್ಮ ಮುಖ ಮೊಡವೆಯಿಂದ ಮುಕ್ತಿ ಹೊಂದುತ್ತದೆ.

  • ದಿನಕ್ಕೆ ಮುಖವನ್ನು ನಾಲ್ಕರಿಂದ ಐದುಬಾರಿ ತೊಳೆಯಬೇಕು, ಜೊತೆಗೆ ತಲೆಯಲ್ಲಿ ಹೊಟ್ಟು ಆಗದಂತೆ ನೋಡಿಕೊಳ್ಳಿ, ಅಲ್ಲದೇ ತಲೆಗೆ ಕೆಮಿಕಲ್ ಮಿಶ್ರಿತ ಶ್ಯಾಂಪುಗಳನ್ನು ಹಾಕುವುದನ್ನು ಆದಷ್ಟು ನಿಯಂತ್ರಿಸಿ.
  • ನಿಂಬೆಹಣ್ಣಿನ ಸಿಪ್ಪೆ ಅಥವಾ ನಿಂಬೆ ಎಲೆಗಳನ್ನು ಅರಿಶಿಣದ ಜೊತೆ ಬೆರೆಸಿ ಅರೆದು ಪೇಸ್ಟ್ ರೀತಿ ಮಾಡಿಕೊಂಡು ಮುಖಕ್ಕೆ ಹಚ್ಚುವುದರಿಂದ ಮುಖದಲ್ಲಿ ಮೂಡಿರುವ ಮೊಡವೆ ಮಾಯವಾಗುತ್ತದೆ.
  • ಹಾಲನ್ನು ಕುದಿಸಿ ಅದಕ್ಕೆ ಗ್ಲಿಸರಿನ್ ಮತ್ತು ಒಂದು ಚಮಚ ನಿಂಬೆ ರಸವನ್ನು ಬೆರೆಸಿ ಮುಖಕ್ಕೆ ಲೇಪನ ಮಾಡುವುದರಿಂದ ಮೊಡವೆಯ ಕಲೆಗಳು ದೂರವಾಗುತ್ತದೆ.
  • ಆದಷ್ಟು ಮೊಡವೆಯಾದ ವೇಳೆ ಮುಖದಲ್ಲಿ ಮೊಡವೆಯನ್ನು ಚುವುಟುವುದು ಮತ್ತು ಉಗುರನ್ನು ಸೋಕಿಸುವುದು ಮಾಡಬೇಡಿ ಹಾಗೆ ಮಾಡಿದರೆ ಇನ್ನಷ್ಟು ಮೊಡವೆಗಳು ಹೆಚ್ಚಾಗುವುದರ ಜೊತೆಗೆ ಮುಖದಲ್ಲಿ ಕಲೆಗಳು ಉಳಿದುಕೊಳ್ಳುತ್ತವೆ.
  • ಸೇಬಿನ ತಿರುಳನ್ನು ಚೆನ್ನಾಗಿ ಅರೆದು ಅದನ್ನು ಮುಖಕ್ಕೆ ಸಿಂಪಡಿಸುವುದರಿಂದ ಮುಖದಲ್ಲಿ ಮೊಡವೆ ಕಡಿಮೆಯಾಗಿ ಮುಖದ ಕಾಂತಿಯನ್ನು ಹೆಚ್ಚಿಸುತ್ತದೆ.
  • ಶ್ರೀಗಂಧವನ್ನು ದಾಲ್ಚಿನ್ನಿ ಪುಡಿ ಜೊತೆ ಬೆರೆಸಿ ಮುಖಕ್ಕೆ ಲೇಪನ ಮಾಡುವುದರಿಂದ ಮೊಡವೆಗಳಿಂದ ನೀವೂ ಮುಕ್ತಿ ಪಡೆಯಬಹುದು.
  • ಆದಷ್ಟು ಕರಿದ ಮತ್ತು ಎಣ್ಣೆ ಪದಾರ್ಥಗಳಿಂದ ದೂರವಿದ್ದು, ಹಸಿ ತರಕಾರಿ, ಹಣ್ಣು ಮತ್ತು ಹಾಲನ್ನು ಕುಡಿಯುವುದರಿಂದ ಮೊಡವೆಯನ್ನು ಆದಷ್ಟು ತಡೆಗಟ್ಟಬಹುದು.
  • ಕಿತ್ತಲೆ ಸಿಪ್ಪೆಯನ್ನು ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಮುಖದಲ್ಲಿ ಮೂಡಿರುವ ಮೊಡವೆಯ ಜೊತೆ ಮೊಡವೆಯ ಕಲೆಯೂ ಸಹ ದೂರವಾಗುತ್ತದೆ.
  • ಹಾಲಿನ ಕೆನೆಗೆ ಕಡಲೆಹಿಟ್ಟು,ಅರಿಶಿಣ, ನಿಂಬೆರಸ ಬೆರಸಿ ಮುಖಕ್ಕೆ ಹಚ್ಚಿಕೊಳ್ಳುವುದರಿಂದ ನಿಮ್ಮ ಮುಖದ ಮೊಡವೆ ಇಲ್ಲದಂತಾಗಿ ಮುಖದ ಕಾಂತಿಯು ಹೆಚ್ಚಾಗುತ್ತದೆ.
  • ಸೌತೆಕಾಯಿ ರಸವನ್ನು ಮುಖಕ್ಕೆ ಹಚ್ಚುವುದರಿಂದ ಮುಖದ ಕಾಂತಿ ಹೆಚ್ಚಾಗುತ್ತದೆ ಅಲ್ಲದೇ ಮೊಡವೆಯೂ ಬರುವುದಿಲ್ಲ ಜೊತೆಗೆ ಮುಖದಲ್ಲಿ ಇರುವ ಕಪ್ಪ ಕಲೆಗಳು ಸಹ ದೂರವಾಗುತ್ತದೆ.

ಈ ರೀತಿ ಮನೆಯಲ್ಲಿಯೇ ಮೊಡವೆಯಿಂದ ದೂರವಾಗಲು ಮನೆಮದ್ದುಗಳನ್ನು ಮಾಡಿಕೊಳ್ಳುವುದರಿಂದ ನಿಮ್ಮ ತ್ವಚೆಯ ಮೇಲೂ ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ ಜೊತೆಗೆ ನಿಮ್ಮ ಜೇಬಿಗೂ ಕತ್ತರಿ ಬೀಳುವುದಿಲ್ಲ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top