ಹೆಂಡತಿ ಮನೆಗೆ ಬರೋಲ್ಲ ಅಂತ ಹೇಳಿದಕ್ಕೆ ನೇಣು ಹಾಕಿಕೊಂಡ ಪತಿರಾಯ..!

ತವರು‌ ಮನೆಗೆ ಹೋಗಿದ್ದ ಪತ್ನಿ ಮನೆಗೆ ಬರಲಿಲ್ಲವೆಂದು ಬೇಸರಗೊಂಡ ಗಂಡ ಆತ್ಮಹತ್ಯೆ ಮಾಡಿಕೊಂಡ ಘಟನೆ ಆಂಧ್ರದ ಅಚುತಂಪುರದಲ್ಲಿ ನಡೆದಿದೆ, ನಾಲ್ಕು ತಿಂಗಳ ಹಿಂದೆ ಮದುವೆಯಾಗಿದ್ದ 22 ವರ್ಷದ ವೀರಬಾಬು ಮತ್ತು ಸತ್ಯವೇಣಿಯ ದಾಂಪತ್ಯ ಜೀವನ ಮೊದಲ ತಿಂಗಳು ಸುಖಕರವಾಗೇ ಇತ್ತು ಆದ್ರೆ ನಂತರದ ದಿನಗಳಲ್ಲಿ ಸತ್ಯವೇಣಿ ಪದೇ ಪದೇ ತವರು ಮನೆಗೆ ಹೋಗುತ್ತಿದ್ದಳು. ಈ ಬಾರೀ ದೀಪಾವಳಿ ಸಮಯದಲ್ಲೂ ಗಂಡನ ಮನೆಗೆ ಬಾರದ ಸತ್ಯವೇಣಿಯನ್ನು ಕರೆಯಲು ಹೋಗಿದ್ದ ವೀರಬಾಬು ಮಾತಿಗೆ ಬೆಲೆಕೊಡದೆ ತವರು ಮನೆಯಿಂದ ಬರಲು ಒಪ್ಪಲಿಲ್ಲ, ಇನ್ನು ಸತ್ಯವೇಣಿಯ ಮಾತನ್ನು ಅವಳ ತಂದೆ ತಾಯಿ ಬೆಂಬಲಿಸಿದ್ದರಿಂದ ವೀರಬಾಬು ಮನನೊಂದು ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಈ ಬಗ್ಗೆ ವೀರ ತಾಯಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸದ್ಯ ದೂರು ದಾಖಲಿಸಿಕೊಂಡ ಪೊಲೀಸರು ವಿಚಾರಣೆ ಶುರು ಮಾಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top