ಹೆಲ್ಮೆಟ್ ಬದಲು ತಲೆಗೆ ಪಾತ್ರೆ.! Video

ಹೊಸ ಸಂಚಾರ ನಿಯಮದಿಂದಾಗಿ‌ ಎಂಥೆಂತಾ ಯಡವಟ್ಟುಗಳು ಆಗ್ತಾ ಇವೆ ಅನ್ನೋದನ್ನು ಊಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ದುಬಾರಿ ವಾಹನ‌ ದಂಡದಿಂದ ತಪ್ಪಿಸಿಕೊಳ್ಳಲು ಒಂದೊಂದೇ ಉಪಾಯ ಹುಡುಕುತ್ತಿದ್ದಾರೆ. ಇತ್ತೀಚೆಗೆ ‌ವ್ಯಕ್ತಿಯೊಬ್ಬ ತನ್ನ ಹೆಲ್ಮೆಟ್ ಗೆ ಡಿಎಲ್,ಉಳಿದ ಡ್ಯುಪ್ಲಿಕೆಟ್ ಡಾಕ್ಯುಮೆಂಟ್ ಅಂಟಿಸಿಕೊಂಡು‌ ಕಿರಿಕಿರಿಯಿಂದ ತಪ್ಪಿಸಿಕೊಂಡಿದ್ದ. ಇ‌ನ್ನು ಬೌನ್ಸ್ ವಾಹನದ ಹೆಲ್ಮೆಟ್ ಕದ್ದು‌ ಅದನ್ನು ಬಳಸಿ ದಂಡದಿಂದ ತಪ್ಪಿಸಿಕೊಂಡಿದ್ರು, ಆದ್ರೆ ಬೌನ್ಸ್ ಸಂಸ್ಥೆ ಹಳದಿ ಹೆಲ್ಮೆಟ್ ಕಂಡರೆ ಪರಿಗಣಿಸ ಬೇಡಿ ಎಂದು ಮನವಿ‌ಕೂಡ ಮಾಡಿದೆ. ಈಗ ಇ‌ನ್ನೊಂದು ವಿಚಿತ್ರ‌ ಸಂಗತಿ ನಡೆದಿದೆ.

ರಾಜ್ ಕೋಟ್ ನಲ್ಲಿ ವ್ಯಕ್ತಿಯೊಬ್ಬ ಕೆಲಸದ ಮೇಲೆ ಬೇರೆಡೆಗೆ ಹೋಗಲು ಹೆಲ್ಮೆಟ್ ಇಲ್ಲದನ್ನು ಅರಿತ ಆ ವ್ಯಕ್ತಿ ಮನೆಯಲ್ಲಿ ಒಂದು ಪಾತ್ರೆ ತೆಗೆದುಕೊಂಡು ಅದನ್ನು ಹೆಲ್ಮೆಟ್ ರೀತಿ‌ ಬಳಸಿ ದಂಡದಿಂದ‌ ತಪ್ಪಿಸಿಕೊಳ್ಳಲು ನೋಡಿದ್ದಾನೆ. ಇ‌ನ್ನು‌ ಅದು ಆಫ್ ಹೆಲ್ಮೆಟ್ ರೀತಿ ಕಂಡಿದ್ದು ಆ ವ್ಯಕ್ತಿ ಪಾತ್ರೆ ಹೆಲ್ಮೆಟ್ ಇಟ್ಟುಕೊಂಡು ವಾಹನ ಚಲಾಯಿಸುವುದನ್ನು ದಾರಿಯಲ್ಲಿ ವ್ಯಕ್ತಿಯೊಬ್ಬ ನೋಡಿ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾ‌ನೆ. ಇದು‌ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top