ಹಿ ಈಸ್‌ ಸೋ ಕ್ಯೂಟ್‌ ಎಂದ ರಶ್ಮಿಕಾ ಮಂದಣ್ಣ..!

ರಶ್ಮಿಕಾ ಮಂದಣ್ಣ ಸದ್ಯ ಸೌತ್‌ ಇಂಡಿಯಾ ಸಿನಿಮಾದ ಕ್ರಶ್‌. ಒಂದಿಲ್ಲೊಂದು ವಿಷಯಕ್ಕೆ ಸುದ್ದಿಯಾಗೋ ರಶ್ಮಿಕಾ ಇತ್ತೀಚೆಗೆ ಕಿಸ್‌ ಕೊಡೋ ಫೋಟೋ ಒಂದು ವೈರಲ್‌ ಆಗಿ ಅಭಿಮಾನಿಗಳಿಗೆ ಕಿಕ್‌ ಕೊಟ್ಟಿದ್ರು, ಇನ್ನು ಇತ್ತೀಚೆಗೆ ರಶ್ಮಿಕಾ ಅವರ ತಂದೆ ಮನೆ ಕಡೆಯೂ ಗಮನ ಕೊಡು ಮಗಳೇ ಅಂತ ಹೇಳುವ ಮೂಲಕ ರಶ್ಮಿಕಾಗೆ ಸಲಹೆಯನ್ನು ಸಹ ನೀಡಿದ್ರು, ಈಗ ಮತ್ತೆ ರಶ್ಮಿಕಾ ಆ ಒಂದು ವಿಡಿಯೋ ಮೂಲಕ ಸುದ್ದಿಯಾಗಿದ್ದಾರೆ.

ಬ್ಯಾಕ್‌ ಟು ಬ್ಯಾಕ್‌ ಸಿನಿಮಾಗಳಲ್ಲಿ ಬ್ಯೂಸಿಯಾಗಿರೋ ರಶ್ಮಿಕಾ ಸದ್ಯ ಮಹೇಶ್‌ ಬಾಬು ಅಭಿನಯದ ʻಸರಿ ಲೇರೂ ನಿಕೆವರುʼ ಚಿತ್ರ ಬಿಡುಗಡೆಗೆ ರೆಡಿಯಾಗಿದೆ. ಈ ಹಿನ್ನಲೆಯಲ್ಲಿ ಚಿತ್ರತಂಡ ಮೂರು ಹಾಡುಗಳನ್ನು ಬಿಡುಗಡೆ ಮಾಡಿದ್ದು, ಹಾಡಿಗೆ ಒಳ್ಳೇ ರೆಸ್ಪಾನ್ಸ್‌ ಕೂಡ ಸಿಕ್ಕಿದೆ. ಈಗ ಇನ್ನೊಂದು ಹಾಡನ ರಿಲೀಸ್‌ ಡೇಟ್‌ ಕೂಡ ಅನೌನ್ಸ್‌ ಮಾಡಿದೆ. ʻಹಿ ಈಸ್‌ ಸೋ ಕ್ಯೂಟ್‌ʼ ಅನ್ನೋ ಹಾಡನ್ನು ಇದೇ ಡಿಸೆಂಬರ್‌ 16ಕ್ಕೆ ಬಿಡುಗಡೆ ಮಾಡಲು ಪ್ಲಾನ್‌ ಮಾಡಿಕೊಂಡಿದೆ. ಈ ಹಿನ್ನಲೆಯಲ್ಲಿ ರಶ್ಮಿಕಾ ಮಂದಣ್ಣ ಹಾಡಿನ ಪ್ರಮೋಷನ್‌ ಮಾಡುತ್ತಿದ್ದು ʻ ಹಿ ಈಸ್‌ ಸೋ ಕ್ಯೂಟ್‌ʼ ಹಾಡನ್ನು ಟಿಕ್‌ಟಾಕ್‌ ಮಾಡಿದ್ದಾರೆ.

ರಶ್ಮಿಕಾ ಹಾಕಿರೋ ಈ ಸ್ಟೆಪ್‌ ಈಗ ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗಿದ್ದು ರಶ್ಮಿಕಾ ಅಭಿಮಾನಿಗಳು ಫಿದಾ ಆಗಿ ಹೋಗಿದ್ದಾರೆ. ಇನ್ನು ಸರಿಲೇರು ನಿಕೆವ್ವರು ಸಿನಿಮಾ ಜನವರಿ 10ರಂದು ರಿಲೀಸ್‌ಗೆ ಸಿದ್ಧತೆ ನಡೆಸುತ್ತಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top