ಸರ್ಬಿಯಾದ ಚೆಲುವೆಗೆ ಕ್ಲೀನ್ ಬೋಲ್ಡ್ ಆದ ಕ್ರಿಕೆಟರ್ ಹಾರ್ಧಿಕ್ ಪಾಂಡ್ಯ..!

ಟೀಂ ಇಂಡಿಯಾದ ಆಲ್ ರೌಂಡರ್ ಹಾರ್ಧಿಕ್ ಪಾಂಡ್ಯ ತನ್ನ ಬ್ಯಾಟ್ ಮೂಲಕ ಎದುರಾಳಿ ಬೌಲರ್ ಗಳ ಬಾಲ್ ಗಳ‌ನ್ನು ಸಿಕ್ಸರ್ ಗೆ ಅಟ್ಟುವ ಈ ಹುಡುಗ ತನ್ನ ಬೌಲಿಂಗ್ ಮೂಲಕ ಬ್ಯಾಟ್ಸ್ ಮನ್ ಗಳನ್ನು ಕ್ಲೀನ್ ಬೋಲ್ಡ್ ಮಾಡಿ ಪೆವಿಲಿಯನ್ ಗೆ ಕಳುಹಿಸಿಸುತ್ತಾನೆ‌, ಆದ್ರೆ ಈ ಬಾರಿ ಹಾರ್ಧಿಕ್ ಪಾಂಡ್ಯ ಈಗ ತಾನೇ ಕ್ಲೀನ್ ಬೋಲ್ಡ್ ಆಗಿದ್ದಾರೆ. ಆದ್ರೆ ಬೋಲ್ಡ್ ಆಗಿರೋದು ಕ್ರಿಕೆಟ್ ನಲ್ಲಿ ಅಲ್ಲ ಬದಲಿಗೆ ಲವ್ವಲ್ಲಿ.

ಹೌದು ಸರ್ಬಿಯಾದ ಚೆಲುವೆ ‘ನತಾಶಾ ಸ್ಟೈನಕೊವಿಕ್’ ನೋಟಕ್ಕೆ ಈಗ ಕ್ಲೀನ್ ಬೋಲ್ಡ್ ಆಗಿದ್ದಾರೆ ಹಾರ್ಧಿಕ್, ಹಾರ್ಧಿಕ್ ನತಾಶ ಜೊತೆ ಲವ್ವಲ್ಲಿ ಬಿದ್ದಿದ್ದು ಈಗ ನತಾಶ ಅವರನ್ನು ತಮ್ಮ ಕುಟುಂಬಕ್ಕೂ ಸಹ ಪರಿಚಯ ಮಾಡಿಕೊಟ್ಟಿದ್ದಾರೆ, ಅಲ್ಲದೇ ಇತ್ತೀಚೆಗೆ ಪಾರ್ಟಿಯೊಂದಕ್ಕೆ ಹಾರ್ಧಿಕ್ ಪಾಂಡ್ಯ ನತಾಶ ಜೊತೆ ಹೋಗಿದ್ದು ಅಲ್ಲಿ ತಮ್ಮ ಸ್ನೇಹಿತರಿಗೆ ನತಾಶ ಅವರನ್ನು ತನ್ನ ಗರ್ಲ್ ಫ್ರೆಂಡ್ ಅಂತ ಪರಿಚಯ ಕೂಡ ಮಾಡಿಕೊಟ್ಟಿದ್ದಾರಂತೆ, ಅಲ್ಲದೇ ಇದೇ ಪಾರ್ಟಿಗೆ ತನ್ನ ಅಣ್ಣ ಮತ್ತು ಅತ್ತಿಗೆ ಸಹ ಭಾಗಿಯಾಗಿದ್ದು ಅವರಿಗೆ ನತಾಶ ಳನ್ನು ಪರಿಚಯ ಮಾಡಿಕೊಟ್ಟಿದ್ದಾರೆ.

ಈ ಮೂಲಕ ಹಾರ್ಧಿಕ್ ಲವ್ವಲ್ಲಿ ಬಿದ್ದಿರೋ ವಿಷಯ ಎಲ್ಲಾ ಕಡೆ ಹರಿದಾಡ್ತಾ ಇದ್ದು ಈ ಸರ್ಬಿಯಾ ಬ್ಯೂಟಿಯನ್ನು ಮದುವೆಯಾಗೋ ಬಗ್ಗೆ ಎಲ್ಲಿಯೂ ತುಟಿ ಬಿಚ್ಚಿಲ್ಲ ಹಾರ್ಧಿಕ್ ಪಾಂಡ್ಯ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top