ಪುನೀತ್‌ಗೆ ಚಾಲೆಂಜ್‌ ಹಾಕಿದ ರಕ್ಷಿತ್‌ ಶೆಟ್ಟಿ..!

ಅವನೇ ಶ್ರೀಮನ್ನಾರಾಯಣ ಚಿತ್ರ ಬಿಡುಗಡೆಯ ಬ್ಯೂಸಿಯಲ್ಲಿರೋ ಸಿಂಪಲ್‌ ಸ್ಟಾರ್‌ ರಕ್ಷಿತ್‌ ಶೆಟ್ಟಿ, ಚಿತ್ರದ ಪ್ರಮೋಷನ್‌ ಸಖತ್‌ ಆಗೇ ಮಾಡುತ್ತಿದ್ದಾರೆ. ಈಗಾಗಲೇ ಒಂದು ಹಂತದ ಪ್ರಮೋಷನ್‌ ಕೆಲಸ ಮುಗಿಸಿ, ಚೆನ್ನೈಗೆ ಹಾರಿರೋ ರಕ್ಷಿತ್‌, ಮರಿನಾ ಬೀಚ್‌ನಲ್ಲಿ ಸುತ್ತಾಡುತ್ತಿದ್ದಾರೆ. ಇತ್ತೀಚೆಗೆ ಅವನೇ ಶ್ರೀಮನ್ನಾರಾಯಣ ಚಿತ್ರ ಹ್ಯಾಂಡ್ಸಪ್‌ ಹಾಡು ಸಖತ್‌ ವೈರಲ್‌ ಆಗಿದ್ದು ಎಲ್ಲರ ಮೆಚ್ಚುಗೆ ಪಡೆಯುವದರ ಜೊತೆಯಲ್ಲಿ ಟಿಕ್‌ಟಾಕ್‌ನಲ್ಲಿ ಟ್ರೆಂಡಿಂಗ್‌ ಆಗಿದೆ. ಆಷ್ಟೇ ಅಲ್ಲದೇ ಈ ಹಾಡಿನ ಸ್ಟೆಪ್ಸ್‌ ಅನ್ನು ಟಿಕ್‌ಟಾಕ್‌ ಮಾಡಿ ಅನೇಕ ನಟ ನಟಿಯರು ಶೇರ್‌ ಮಾಡಿಕೊಂಡಿದ್ದಾರೆ. ಇದೇ ಡಿಸೆಂಬರ್‌ 27ಕ್ಕೆ ಅವನೇ ಶ್ರೀಮನ್ನಾರಾಯಣ ರಿಲೀಸ್‌ ಆಗ್ತಾ ಇದ್ದು, ಚಿತ್ರದ ಪ್ರಮೋಷನ್‌ ಸಲುವಾಗಿ ಚೆನ್ನೈನಲ್ಲಿ ಬೀಡುಬಿಟ್ಟಿರುವ ರಕ್ಷಿತ್‌ ಶೆಟ್ಟಿ ಮರೀನಾ ಬೀಚ್‌ನಲ್ಲಿ ಹ್ಯಾಂಡ್ಸಪ್‌ ಹಾಡಿಗೆ ಸ್ಟೆಪ್ಸ್‌ ಹಾಕಿದ್ದಾರೆ. Read : ಡಿ. 27ಕ್ಕೆ ಕನ್ನಡದಲ್ಲಿ ಮಾತ್ರ ರಿಲೀಸ್‌ ಆಗ್ತಿದೆ ʻಅವನೇ ಶ್ರೀಮನ್ನಾರಾಯಣʼ..!

ಸ್ಟೆಪ್ಸ್‌ ಹಾಕುವುದರ ಜೊತೆಯಲ್ಲಿ ಈ ಸ್ಟೆಪ್ಸ್‌ ಅನ್ನು ಪುನೀತ್‌ ರಾಜ್‌ಕುಮಾರ್‌ ಮಾಡಬೇಕು ಅನ್ನೋ ಸವಾಲನ್ನು ಹಾಕಿ. ತಮ್ಮ ಟ್ವೀಟರ್‌ ಖಾತೆಯಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಇನ್ನು ಪುನೀತ್‌ ರಾಜ್‌ಕುಮಾರ್‌ ಜೊತೆಯಲ್ಲಿ ದೂದ್‌ ಪೇಡಾ ದಿಗಂತ್‌, ಸಂಯುಕ್ತ ಹೆಗಡೆ ಮತ್ತು ಇಮ್ರಾನ್‌ ಸರ್ದಾರಿಯಾ ಅವರಿಗೂ ಚಾಲೆಂಜ್‌ ಹಾಕಿ ವಿಡಿಯೋವನ್ನು ಶೇರ್‌ ಮಾಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top