ತಲೆ ಕೂದಲು ಉದುರುವುದಕ್ಕೆ ಇಲ್ಲಿದೆ ರಾಮಬಾಣ

ಈಗಿನ ಆಹಾರ ಪದ್ಧತಿ ಮತ್ತು ಜೀವನ ಶೈಲಿಯಿಂದ ಮನುಷ್ಯನ ದೇಹದಲ್ಲಿ ಅನೇಕ ಬದಲಾವಣೆಗಳು ಆಗುತ್ತಲೇ ಇರುತ್ತದೆ, ಅದರಲ್ಲಿ ಮುಖ್ಯವಾಗಿ ತಲೆ ಕೂದಲು ಉದುರುವುದು ಮತ್ತು ತಲೆಯಲ್ಲಿ ಹೊಟ್ಟು ಆಗುವುದು ಒಂದು ದೊಡ್ಡ ಸಮಸ್ಯೆಯಾಗಿ ಕಾಡ್ತಾ ಇದೆ, ಈ ಸಮಸ್ಯೆಗೆ ಮನೆಯಲ್ಲೇ ಇದೇ ರಾಮಬಾಣ. ಹೌದು ಮನೆಯಲ್ಲೇ ಈ ವಿಷಯಗಳನ್ನು ಅನುಸರಿಸಿದ್ರೆ ನಿಮಗಿರುವ ಕೂದಲು ಉದುರುವ ಸಮಸ್ಯೆಯನ್ನು ಕೆಲವೇ ದಿನಗಳಲ್ಲಿ ಬಗೆಹರಿಸಿಕೊಳ್ಳಬಹದು.

1 – ದಾಸವಾಳ ಎಲೆಗಳನ್ನು ಅರೆದು ತಲೆಗೆ ಹಚ್ಚುವುದರಿಂದ ಕೂದಲು ದಟ್ಟವಾಗಿ ಬೆಳೆಯುತ್ತದೆ ಅಲ್ಲದೇ ಕೂದಲು ಉದುರುವ ಸಮಸ್ಯೆ ಜೊತೆಗೆ ಬಿಳಿ ಕೂದಲಿನ ಸಮಸ್ಯೆಯು ಇರುವುದಿಲ್ಲ.

2 – ವಾರದಲ್ಲಿ ಎರಡು ದಿನಕ್ಕೊಮ್ಮೆ ತಲೆ ಸ್ನಾನ ಮಾಡುವುದರಿಂದ ತಲೆಹೊಟ್ಟು ಹೋಗುತ್ತದೆ ಜೊತೆಗೆ, ತಲೆಯೂ ಕ್ಲೀನ್ ಆಗುವುದರಿಂದ ತಲೆಕೂದಲು ಉದುರುವುದಿಲ್ಲ ಅಲ್ಲದೇ ನೀವೂ ಸ್ನಾನ ಮಾಡಿದ ತಕ್ಷಣ ತಲೆ ಕೂದಲನ್ನು ಬಾಚದೇ ಸ್ವಲ್ಪ ಸಮಯ ಹಾಗೇ ಬಿಡುವುದು ಒಳ್ಳೆಯದು.

Read : ಪದೇ ಪದೇ ನಿಮ್ಮನ್ನು ಕೆಮ್ಮು ಕಾಡ್ತಿದ್ಯಾ ಮನೆಯಲ್ಲಿ ಮಾಡಿ ಈ ಸುಲಭದ ಮದ್ದು.!

3 – ಪ್ರತಿದಿನ ಸಮತೋಲನ ಆಹಾರ ಸೇವಿಸುವುದರಿಂದ ದೇಹದಲ್ಲಿ ಉತ್ಕೃಷ್ಟವಾದ ಜೀವಸತ್ವಗಳು ಸೇರುವುದರಿಂದ ಕೂದಲು ಬೆಳೆಯಲು ಸಹಕಾರಿಯಾಗುತ್ತದೆ.

4 – ವಾರದಲ್ಲಿ ಒಂದು ಅಥವಾ ಎರಡು ದಿನ ಎಳ್ಳಿನ ಎಣ್ಣೆ ಅಥವಾ ಔಡಲ ಎಣ್ಣೆ (ಹರಳೆಣ್ಣೆ- Castor Oil) ತಲೆಗೆ ಹಚ್ಚುವುದರಿಂದ ತಲೆಕೂದಲು ಉದುರುವ ಸಮಸ್ಯೆ ದೂರವಾಗಿ ನಿಮ್ಮ ಕೂದಲು ಸಮೃದ್ಧಿಯಾಗಿರುತ್ತದೆ.

5 – ಮೆಂತೆಯನ್ನು ಹಾಲಿನ ಜೊತೆ ನೆನೆಹಾಕಿ ಮಾರನೇ ದಿನ ಅದನ್ನು ರುಬ್ಬಿ ತಲೆಗೆ ಸಿಂಪಡಿಸಿಕೊಳ್ಳುವುದರಿಂದ ಕೇಶಕಾಂತಿಯೂ ಹೆಚ್ಚಾಗುತ್ತದೆ.

6 – ಇನ್ನು ನೀವೂ ತಣ್ಣೀರಿನಲ್ಲಿ ಸ್ನಾನ ಮಾಡುವ ಅಭ್ಯಾಸ ಇಟ್ಟುಕೊಂಡರೆ ತುಂಬಾ ಒಳಿತು ಯಾಕಂದ್ರೆ ತಣ್ಣೀರಿನಲ್ಲಿ ಸ್ನಾನ ಮಾಡುವುದರಿಂದ ತಲೆಕೂದಲು ಉದುರುವ ಸಮಸ್ಯೆ ಇರುವುದಿಲ್ಲ.

7. ನೀವೂ ಹೆಲ್ಮೆಟ್ ಉಪಯೋಗಿಸುತ್ತಿದ್ದರೆ ತಲೆಗೆ ಶುಭ್ರವಾದ ಬನಿಯಾನ್ ರೀತಿಯ ಬಟ್ಟೆಯನ್ನು ಹಾಕಿಕೊಂಡು ಅದರ ಮೇಲೆ ಹೆಲ್ಮೆಟ್ ಧರಿಸಿ

ಮನೆಯಲ್ಲೇ ಮಾಡಿ ಮುಂಬೈ ಸ್ಟೈಲ್ ವಡಾ ಪಾವ್

ಈ ರೀತಿ ಮನೆಯಲ್ಲಿ ಈ ಮೇಲಿನ ಅಂಶಗಳನ್ನು ಪಾಲಿಸಿದರೆ ನಿಮಗೆ ಇರುವ ದೊಡ್ಡ ತಲೆನೋವು ತಲೆ ಕೂದಲು ಉದುರುವ ಸಮಸ್ಯೆ ಕೆಲವೇ ದಿನಗಳಲ್ಲಿ ಮಂಗಮಾಯವಾಗಿ ಹೋಗಿರುತ್ತದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top