ಯಶ್‌ ಈಗ ದೇಶದ ಪ್ರಭಾವಿ ವ್ಯಕ್ತಿ..! 50 ಜನರಲ್ಲಿ ರಾಕಿಂಗ್‌ ಸ್ಟಾರ್‌ಗೂ ಸ್ಥಾನ..!

ರಾಕಿಂಗ್‌ ಸ್ಟಾರ್‌ ಯಶ್‌ಗೆ ಈಗ ಮತ್ತೊಂದು ಗೌರವ ದೊರೆತಿದೆ. ʻಜಿಕ್ಯೂ ಇಂಡಿಯಾʼ ಭಾರತದ 50 ಪ್ರಭಾವ ಬೀರುವ ಯಂಗ್ ವ್ಯಕ್ತಿಗಳ ಪಟ್ಟಿಯಲ್ಲಿ ರಾಕಿಭಾಯ್‌ ಕೂಡ ಸ್ಥಾನ ಪಡೆದಿದ್ದು, ಮುಂಬೈನಲ್ಲಿ ʻಜಿಕ್ಯೂʼ ಇಂಡಿಯಾ ರಾಕಿಂಗ್‌ ಸ್ಟಾರ್‌ ಯಶ್‌ಗೆ ಈ ಪ್ರಶಸ್ತಿ ನೀಡಿ ಗೌರವಿಸಿದೆ..

ಜಿಕ್ಯೂ ಇಂಡಿಯಾ ಬೇರೆ ಬೇರೆ ರಂಗದಲ್ಲಿ ಸಾಧನೆ ಮಾಡಿ, ಇತರರ ಮೇಲೆ ಪ್ರಭಾವ ಬೀರುವ ಭಾರತದ 50 ಮಂದಿಯನ್ನು ಗುರುತಿಸಿ, ನೀಡುವ ಈ ಪ್ರಶಸ್ತಿ ಪಟ್ಟಿಯಲ್ಲಿ ರಾಕಿಂಗ್‌ ಸ್ಟಾರ್‌ ಯಶ್‌ ಸ್ಥಾನ ಪಡೆದಿದ್ದಾರೆ.

ನಿನ್ನೆ ನಡೆದ ಕಾರ್ಯಕ್ರಮದಲ್ಲಿ ರಾಕಿಂಗ್‌ ಸ್ಟಾರ್‌ ಯಶ್‌ ಈ ಪ್ರಶಸ್ತಿಯನ್ನು ಸ್ವೀಕರಿಸಿದ್ದು , ಬಾಲಿವುಡ್‌ ನಿರ್ದೇಶಕ ಕರಣ್‌ ಜೋಹರ್‌ ಈ ಪ್ರಶಸ್ತಿಯನ್ನು ನೀಡಿದ್ದಾರೆ.

ಕೆಜಿಎಫ್‌ ಸಿನಿಮಾ ರಿಲೀಸ್‌ ಆದ ಮೇಲೆ ನ್ಯಾಷನಲ್‌ ಸ್ಟಾರ್‌ ಆಗಿರೋ ಯಶ್‌ ಈಗಾಗ್ಲೇ ದೊಡ್ಡ ಮಟ್ಟಕ್ಕೆ ಬೆಳೆದಿದ್ದು, ಈಗ ಜಿಕ್ಯೂ ಇಂಡಿಯಾ ನೀಡಿರೋ ಪ್ರಭಾವಿ ವ್ಯಕ್ತಿ ಪ್ರಶಸ್ತಿ ಸ್ವೀಕರಿಸಿ ಇನ್ನಷ್ಟು ಎತ್ತರಕ್ಕೆ ಬೆಳೆದಿದ್ದಾರೆ. ಇನ್ನು ಈ ವಿಚಾರವಾಗಿ ಸೋಶಿಯಲ್‌ ಮೀಡಿಯಾದಲ್ಲಿ ಖುಷಿಯನ್ನು ಹಂಚಿಕೊಂಡಿರೋ ರಾಕಿಂಗ್‌ ಸ್ಟಾರ್‌ ಯಶ್‌ ʻಜಿಕ್ಯೂ ಇಂಡಿಯಾʼ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು ಗೌರವದಾಯಕವಾಗಿದೆ. ನಮ್ಮ ಸಾಧನೆಯನ್ನು ಗುರುತಿಸಿರುವುದಕ್ಕೆ ಧನ್ಯವಾದಗಳು, ಇನ್ನು ಅಭಿಮಾನಿಗಳಿಗೆ, ನನ್ನ ಏಳಿಗೆಗೆ ಪ್ರೋತ್ಸಾಹ ನೀಡಿದವರಿಗೆ ಥ್ಯಾಂಕ್ಯು ಎಂದು ಸೋಶಿಯಲ್‌ ಮೀಡಿಯಾದಲ್ಲಿ ತಮ್ಮ ಖುಷಿಯನ್ನು ಶೇರ್‌ ಮಾಡಿಕೊಂಡಿದ್ದಾರೆ..

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top